'ಕಾಟೇರ'ದಲ್ಲಿ ಹಿರಣ್ಯ ಕಶಿಪು ಡೈಲಾಗ್..! ಅಣ್ಣಾವ್ರ ಕಾಲ ದೂಳಿಗೂ ನಾನು ಸಮನಲ್ಲ ಎಂದ ದರ್ಶನ್..!

'ಕಾಟೇರ'ದಲ್ಲಿ ಹಿರಣ್ಯ ಕಶಿಪು ಡೈಲಾಗ್..! ಅಣ್ಣಾವ್ರ ಕಾಲ ದೂಳಿಗೂ ನಾನು ಸಮನಲ್ಲ ಎಂದ ದರ್ಶನ್..!

Published : Jan 03, 2024, 09:47 AM IST

ನಟ ದರ್ಶನ್ ರಾಬರ್ಟ್ ಸಿನಿಮಾದಲ್ಲಿ ಹೇಳಿದ್ದ ರಾವಣನ ಡೈಲಾಗ್. ಈ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ತರುಣ್ ಸುಧೀರ್ ದರ್ಶನ್‌ರಿಂದ ರಾವಣಾಸುರನ ಪೌರಾಣಿಕ ಡೈಲಾಗ್ ಹೇಳಿಸಿದ್ರು. ಈಗ ಅಂತದ್ದೇ ಪೌರಾಣಿ ಸಿನಿಮಾದ ಡೈಲಾಗ್ಅನ್ನ ಕಾಟೇರ ಸಿನಿಮಾದಲ್ಲೂ ಹೇಳಿದ್ದಾರೆ ದರ್ಶನ್.

ಡಾಕ್ಟರ್ ರಾಜ್‌ಕುಮಾರ್(Dr.Rajkumar) ಕನ್ನಡ ಚಿತ್ರರಂಗದ ಆಲದ ಮರ. ಅಣ್ಣಾವ್ರು ಅಭಿನಯಕ್ಕೆ ಬ್ರ್ಯಾಂಡ್ ಅಂಬಾಸೀಡರ್. ಅವರನ್ನ ಮೀರಿಸೋ ಮತ್ತೊಮ್ಮ ಕಲಾವಿದ ಕನ್ನಡದಲ್ಲಿ ಇದುವರೆಗೂ ಬಂದಿಲ್ಲ. ಮುಂದೆ ಬರ್ತಾರೆ ಅನ್ನೋ ನಂಬಿಕೆಯೂ ಯಾರಲ್ಲೂ ಇಲ್ಲ. ಇಂತಹ ಅಣ್ಣಾವ್ರ ಭಕ್ತ ಪ್ರಹ್ಲಾದ ಸಿನಿಮಾ ಡೈಲಾಗ್ಅನ್ನ ಕಾಟೇರ ಸಿನಿಮಾದಲ್ಲೂ ಬಳಸಿಕೊಳ್ಳಲಾಗಿದೆ. ಅಣ್ಣಾವ್ರು ಹೇಳಿದ್ದ ಡೈಲಾಗ್ಅನ್ನ ನಟ ದರ್ಶನ್(Darshan) ಕೂಡ ಹೇಳಿದ್ದಾರೆ. ಈ ಬಗ್ಗೆ ಕಾಟೇರ ಸಿನಿಮಾದ(Kaatera movie) ಸಕ್ಸಸ್ ಮೀಟ್ನಲ್ಲಿ ಮಾತನಾಡಿದ ದರ್ಶನ್, ನಾನು ರಾಜ್‌ಕುಮಾರ್ ಅವರ ಕಾಲಿನ ಧೂಳಿಗೂ ಸಮ ಇಲ್ಲ. ಅವರಿಗೆ ನನ್ನನ್ನು ಹೋಲಿಸಬೇಡಿ, ಅವರು ಮಾಡಿರುವ ಪಾತ್ರಗಳಲ್ಲಿ 0.5 ಅಷ್ಟು ಕೂಡ ನಾನು ಮಾಡಲು ಆಗಲ್ಲ ಎಂದಿದ್ದಾರೆ.ನಟ ದರ್ಶನ್‌ಗೆ ಒಂದು ದೊಡ್ಡ ಸಕ್ಸಸ್ ಬೇಕಿತ್ತು. ಯಾಕಂದ್ರೆ ಈ ಹಿಂದೆ ಬಂದ ಕ್ರಾಂತಿಗೆ ಗೆಲ್ಲಲಾಗಲಿಲ್ಲ. ಆ ಸಿನಿಮಾಗೂ ಹಿಂದೆ ಬಂದ ಒಡೆಯ ಸಿನಿಮಾ ಕೂಡ ಗೆಲುವಿನ ದಡ ಸೇರಲಿಲ್ಲ. ಆದ್ರೆ ಈಗ ಆ ಎಲ್ಲಾ ಸೋಲುಗಳನ್ನ ಮರೆಸುವಂತಹ ಹಿಟ್ ಕೊಟ್ಟಿದೆ ಕಾಟೇರ ಸಿನಿಮಾ. ಹೀಗಾಗಿ ಇಡೀ ಕಾಟೇರ ಟೀಂ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಕ್ಸಸ್ ಸೆಲೆಬ್ರೇಶನ್ ಮಾಡಿದ್ರು. ನಟ ದರ್ಶನ್ ಹಾಗು ನಿರ್ದೇಶಕ ತರುಣ್ ಸುಧೀರ್(Tharun Sudhir) ಜೋಡಿ ಎರಡು ವರ್ಷದ ಹಿಂದೆ ರಾಬರ್ಟ್ ಸಿನಿಮಾ ಮಾಡಿದ್ರು. ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ಈ ರಾಬರ್ಟ್ ಸೂಪರ್ ಹಿಟ್ ಆಗಿತ್ತು. ಈಗ ಮತ್ತದೇ ಕಾಂಬಿನೇಷನ್ ನಟ ದರ್ಶನ್ ಹಾಗು ನಿರ್ದೇಶಕ ತರುಣ್ ಸುಧೀರ್ ಕಾಟೇರ ಸಿನಿಮಾ ಕೊಟ್ಟಿದ್ದಾರೆ. ಈ ಭಾರಿ ನಿರ್ಮಾಣದ ಜವಾಬ್ಧಾರಿ ಹತ್ತಿದ್ದು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಜೋಳಿಗೆಗೆ ಝಣ ಝಣ ಕಾಂಚಾಣ ಬಂದು ಸೇರುತ್ತಿದೆ. ಕಾಟೇರ ಸಿನಿಮಾ ಆಪ್ತರ ಟೀಂ ಹೇಳಿಕೊಳ್ಳುವಂತೆ ಈ ಸಿನಿಮಾ 5 ದಿನದಲ್ಲಿ 70 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆಯಂತೆ. ಆದ್ರೆ ಇದನ್ನ ಒಪ್ಪಿಕೊಳ್ಳದ ನಿರ್ಮಾಪಕ ರಾಕ್ಲೈನ್ ನಾನು ಕಾಟೇರ ಸಿನಿಮಾದ ಕಲೆಕ್ಷನ್ನಿಂದ ನೆಮ್ಮದಿಯಾಗಿದ್ದೇನೆ ಎನ್ನುತ್ತಾರೆ. 

ಇದನ್ನೂ ವೀಕ್ಷಿಸಿ:  ಮತ್ತೆ ತಲೆಗೆ ಹುಳ ಬಿಟ್ಟ ರಿಯಲ್ ಸ್ಟಾರ್..! 'UI' ಟೀಸರ್ ರಿಲೀಸ್ ಡೇಟ್ ಹೇಳಿ ಎಂದ ಉಪ್ಪಿ..!

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more