Devil Movie: ದರ್ಶನ್ ಫ್ಯಾನ್ಸ್‌ಗೆ ಸಿಕ್ಕಾಯ್ತು ಬಿಗ್ ಸರ್ಪ್ರೈಸ್..!'ಡೆವಿಲ್' ಸಿನಿಮಾ ಎಂಟ್ರಿಗೆ ಫಿಕ್ಸ್ ಆಯ್ತು ಡೇಟ್!

May 25, 2024, 8:47 AM IST

ಕನ್ನಡ ಸಿನಿಮಾಗಳಿಗೆ ಮಾರ್ಕೆಟ್ ಇಲ್ಲ. ಥಿಯೇಟರ್‌ಗೆ ಪ್ರೇಕ್ಷಕ ಬರುತ್ತಿಲ್ಲ. ಸ್ಟಾರ್ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ. ಹೀಗಾಗಿ ಒಂದಿಷ್ಟು ದಿನ ಚಿತ್ರಮಂದಿರಗಳನ್ನ ಬಂದ್ ಮಾಡೋಣ  ಸ್ಟಾರ್‌ಗಳ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆದ ಮೇಲೆ ಮತ್ತೆ ಥಿಯೇಟರ್ ರೀ ಓಪನ್ ಮಾಡೋಣ. ಇಂತಹ ಮಾತುಗಳು ಈಗ ಚಿತ್ರರಂಗದಲ್ಲಿ ಎದ್ದಿದೆ. ಈ ಮಧ್ಯೆ ನಟ ದರ್ಶನ್(Actor Darshan)ತನ್ನ ಫ್ಯಾನ್ಸ್‌ಗೆ ಭರ್ಜರಿ ಸುದ್ದಿಯೊಂದನ್ನ ಕೊಟ್ಟಿದ್ದಾರೆ. ಅದೇ ದರ್ಶನ್ ನಟನೆಯ ಡೆವಿಲ್ ಸಿನಿಮಾದ(Devil Movie) ಬಿಡುಗಡೆ ದಿನಾಂಕ ಫಿಕ್ಸ್(Release date) ಮಾಡಿದ್ದಾರೆ. ನಟ ದರ್ಶನ್ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಡೆವಿಲ್ ಶೂಟಿಂಗ್ ವೇಳೆ ಕೈಗೆ ಪೆಟ್ಟಾಗಿದ್ದರಿಂದ ಶಸ್ತ್ರಚಿಕಿತ್ಸೆಗೆ ಮಾಡಿಸಿದ್ದಾರೆ. ಇದರಿಂದ ‘ಡೆವಿಲ್’ ಶೂಟಿಂಗ್ ಮುಂದಕ್ಕೆ ಹೋಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಡೆವಿಲ್  ಸಿನಿಮಾ ಅಕ್ಟೋಬರ್ನಲ್ಲೇ ರಿಲೀಸ್ ಆಗಬೇಕಿತ್ತು. ಆದ್ರೆ ಈಗ ಸಿನಿಮಾ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಈ ವರ್ಷ ಕ್ರಿಸ್ಮಸ್‌ಗೆ ಡೆವಿಲ್ ರಿಲೀಸ್ ಆಗಲಿದೆ. ನಟ ದರ್ಶನ್‌ಗೆ ಕಳೆದ ಡಿಸೆಂಬರ್ ಅದೃಷ್ಟ ತಂದುಕೊಟ್ಟಿತ್ತು. ಅವರ ನಟನೆಯ ‘ಕಾಟೇರ’ ಸಿನಿಮಾ ರಿಲೀಸ್ ಆಗಿ ದೊಡ್ಡ ಸಕ್ಸಸ್ ಕಂಡಿತ್ತು. ಹೀಗಾಗಿ ನಟ ದರ್ಶನ್ಗೆ ಡಿಸೆಂಬರ್ ಮೇಲೆ ನಂಬಿಕೆ ಹುಟ್ಟಿದೆ. ವರ್ಷಕ್ಕೆ ಎರಡು ಸಿನಿಮಾ ಕೊಡುತ್ತಿದ್ದ ದರ್ಶನ್ ಈಗ ವರ್ಷಕ್ಕೆ ಒಂದು ಸಿನಿಮಾಗೆ ಬಂದಿದ್ದಾರೆ. ಡೆವಿಲ್ ಅನ್ನ ಡಿಸೆಂಬರ್ನಲ್ಲಿ ತೆರೆಗೆ ತರುತ್ತಿದ್ದಾರೆ. ಮಿಲನಾ ಪ್ರಕಾಶ್ ನಿರ್ದೇಶನ ನಿರ್ಮಾಣದ ಡೆವಿಲ್ ಈ ವರ್ಷದ ಡಿಸೆಂಬರ್ ನಲ್ಲಿ ಧಮಾಕ ಮಾಡಲಿದೆಯಾ ಕಾದು ನೋಡಬೇಕು.

ಇದನ್ನೂ ವೀಕ್ಷಿಸಿ:  ಗೆಸ್ಟ್‌ಗಳಿಗೆ ಮುಕೇಶ್ ಅಂಬಾನಿ ಹಾಕಿರೋ ಕಂಡಿಶನ್ ಏನು..? ಅನಂತ್ -ರಾಧಿಕಾ ಪ್ರಿವೆಡ್ಡಿಂಗ್ ಪಾರ್ಟ್-1 ಹೇಗಿತ್ತು..?