KGF Chapter 2: ಬಾಲಿವುಡ್ ಬಿಗ್ ಸ್ಟಾರ್‌ಗಳ ಕೋಟೆಯಲ್ಲಿ ಯಶ್ ಮಿಂಚಿಂಗ್.!

KGF Chapter 2: ಬಾಲಿವುಡ್ ಬಿಗ್ ಸ್ಟಾರ್‌ಗಳ ಕೋಟೆಯಲ್ಲಿ ಯಶ್ ಮಿಂಚಿಂಗ್.!

Published : Apr 07, 2022, 11:05 AM IST

ರಾಕಿಂಗ್ ಸ್ಟಾರ್ ಯಶ್.. ಈಗ ಭಾರತೀಯ ಚಿತ್ರರಂಗದ ಕ್ರೇಜ್ ಕಾ ಬಾಪ್.. ಯಶ್ ಬಿಟೌನ್‌ನ ಟ್ರೆಂಡ್ ಸೆಟ್ಟರ್ ಆಗಿದ್ದಾರೆ. ಅಷ್ಟೆ ಅಲ್ಲ ಬಾಲಿವುಡ್‌ನಲ್ಲಿ ಸ್ಟೈಲ್‌ಗೆ ಐಕಾನ್ ಅಂತ ಕರೆಸಿಕೊಳ್ಳುತ್ತಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್ (Yash).. ಈಗ ಭಾರತೀಯ ಚಿತ್ರರಂಗದ ಕ್ರೇಜ್ ಕಾ ಬಾಪ್.. ಯಶ್ ಬಿಟೌನ್‌ನ (B Town) ಟ್ರೆಂಡ್ ಸೆಟ್ಟರ್ ಆಗಿದ್ದಾರೆ. ಅಷ್ಟೆ ಅಲ್ಲ ಬಾಲಿವುಡ್‌ನಲ್ಲಿ (Bollywood) ಸ್ಟೈಲ್‌ಗೆ ಐಕಾನ್ ಅಂತ ಕರೆಸಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಬಾಲಿವುಡ್ ಸ್ಟಾರ್ಸ್‌ನ್ನು ಸ್ಟೈಲ್‌ನಲ್ಲಿ ಕ್ರೇಜ್‌ನಲ್ಲಿ ಮೀರಿಸೋರು ಯಾರು ಇಲ್ಲ ಅಂತ ಬಿಟೌನ್ ಜಗತ್ತು ಬೀಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬಾಲಿವುಡ್‌ನಲ್ಲಿ ನಮ್ ಕನ್ನಡದ ಹುಡುಗ ಮಿಂಚಿ ಮೆರಗುತ್ತಿದ್ದಾರೆ. ಯಶ್ ಹೋದಲ್ಲಿ ಬಂದಲ್ಲೆಲ್ಲಾ ಬಾಲಿವುಡ್ ಕ್ಯಾಮೆರಾಗಳು ರಾಕಿಯನ್ನ ಕ್ಲಿಕ್ಕಿಸಲು ಮುಗಿ ಬೀಳುತ್ತಿವೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಈ ವೀಡಿಯೋ ನೋಡಿ. ಬಾಲಿವುಡ್ ಸ್ಟಾರ್‌ಗಳ ದೊಡ್ಡ ಕೋಟೆ ಅಂದ್ರೆ ಮುಂಬೈನಲ್ಲಿರೋ ಜುಹು ಪ್ರದೇಶ. 

KGF 2: ಬೆಂಗಳೂರಿನಲ್ಲಿ ತಲೆ ಎತ್ತಲಿವೆ ರಾಕಿಭಾಯ್ 100 ಕಟೌಟ್‌ಗಳು..!

ಜುಹುನಲ್ಲಿ ಆಲ್ ಮೋಸ್ಟ್ ಎಲ್ಲಾ ಬಾಲಿವುಡ್ ತಾರೆಯರು ಒಂದೊಂದು ಮನೆ ಕಟ್ಟಿಸಿಕೊಂಡು ಅಲ್ಲೇ ವಾಸ್ತವ್ಯ ಹೂಡಿದ್ದಾರೆ. ಬಾಲಿವುಡ್ ಸ್ಟಾರ್ಸ್ಅನ್ನ ನೋಡ್ಬೇಕು ಅಂತಂದ್ರೆ ಜುಹು ಪ್ರದೇಶಕ್ಕೆ ಹೋದ್ರೆ ಸಾಕು ಹತ್ತಾರು ಬಿಟೌನ್ ಸ್ಟಾರ್ಸ್ ಕಣ್ಣಿಗೆ ಬೀಳ್ತಾರೆ. ಈಗ ಬಾಲಿವುಡ್ ಸೆಲೆಬ್ರೆಟಿಗಳ ಕೋಟೆ ಜುಹು ಪ್ರದೇಶಕ್ಕೆ ರಾಕಿ ಎಂಟ್ರಿ ಕೊಟ್ಟಿದ್ದಾರೆ. ಕೆಜಿಎಫ್-2 (KGF Chapter 2) ಪ್ರಚಾರಕ್ಕೆ ಯಶ್ ಜುಹುಗೆ ಬರುತ್ತಿದ್ದಂತೆ ಬಾಲಿವುಡ್ ಕ್ಯಾಮೆರೆಗಳೆಲ್ಲಾ ಯಶ್ ಕಡೆ ಟರ್ನ್ ಆಗಿದ್ವು. ಆ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಯಶ್ ಕೂಡ ಬಾಲಿವುಡ್ ಬಿಗ್ ಸ್ಟಾರ್ಗಳು. ಸ್ಟೈಲ್‌ಗೆ ಐಕಾನ್ ಅಂತ ಕರೆಸಿಕೊಳ್ಳುತ್ತಿದ್ದ ಹಿಂದಿಯ ಹೀರೋಗಳಿಗೆ ಟಕ್ಕರ್ ಕೊಟ್ಟು ಬಾಲಿವುಡ್‌ನ ನಯಾ ಸ್ಟೈಲೀಶ್ ಸ್ಟಾರ್ ಆಗಿ ಬದಲಾಗಿದೆ. ಯಶ್ ಅವರ ರಾ ಲುಕ್ ನ ಸ್ಟೈಲ್‌ಗೆ ಬಾಲಿವುಡ್ ಮಂದಿ ಬೌಲ್ಡ್ ಆಗಿದ್ದಾರೆ. ಅಷ್ಟೆ ಅಲ್ಲ ಬಾಲಿವುಡ್ ಸೆಲೆಬ್ರೆಟಿಗಳಿಗೂ ಸಿಗದಂತ ದೊಡ್ಡ ಮನ್ನಣೆ ಸ್ಥಾನ ಗೌರವ, ಅಭಿಮಾನಿಗಳ ಕ್ರೇಜ್ ಯಶ್‌ಗೆ ಸಿಕ್ತಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more