Sep 5, 2023, 10:40 AM IST
ಈ ಸಿನಿಮಾದ ಛಾಯಾಗ್ರಾಹಕ ರಿಷಿಕೇಷ್ ಆಗಿದ್ದಾರೆ. ಇನ್ನೂ ಈ ಮಹಿಳೆಯ ಹೆಸರು ರಾಜಲಕ್ಷ್ಮೀ. ಸಿನಿಮಾ ನಿರ್ಮಾಪಕಿ ಈ ವಿಡಿಯೋದಲ್ಲಿರೋ ಮಹಿಳೆ ಅನಿತಾ ಭಟ್ ಈಕೆ ಕೂಡ ನಟಿ, ನಿರ್ಮಾಪಕಿ. ಎಲ್ರೂ ಸೇರಿ ಸಮುದ್ರಂ ಅನ್ನೋ ಸಿನಿಮಾ ಮಾಡ್ತಿದ್ರು. ಇಷ್ಟು ದಿನ ಎಲ್ಲವೂ ಚೆನ್ನಾಗಿತ್ತು. ಆದರೆ ಸದ್ಯ ಮೂವರ ಮಧ್ಯೆ ಉಂಟಾಗಿರುವ ಭಿನ್ನಮತ ಸ್ಫೋಟಗೊಂಡು ಅಲೆಗಳಂತೆ ಅಪ್ಪಳಿಸ್ತಿದೆ. ಛಾಯಾಗ್ರಾಹಕ ರಿಷಿಕೇಶ್ ವಿರುದ್ಧ ನಿರ್ಮಾಪಕಿ ರಾಜಲಕ್ಷ್ಮಿ ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದು,ರಾಜಲಕ್ಷ್ಮೀ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಮುದ್ರಂ ಅನ್ನೊ ಸಿನಿಮಾ ನಿರ್ಮಾಣ ಮಾಡಿದ್ದು, ಈ ಚಿತ್ರಕ್ಕೆ ಛಾಯಾಗ್ರಹಣ, ಸಂಕಲನ, ಸಂಗೀತ, ರೆಕಾರ್ಡಿಂಗ್, ಡಬ್ಬಿಂಗ್, ರೀ ರೆಕಾರ್ಡಿಂಗ್, ಡಿಐ ಜವಾಬ್ದಾರಿಯನ್ನ ರಿಷಿಕೇಶ್ ಗೆ 10 ಲಕ್ಷದ ಪ್ಯಾಕೆಜ್ ನಲ್ಲಿ ಒಪ್ಪಿಸಲಾಗಿತ್ತು. 10 ರಂದು 15 ದಿನ ಚಿತ್ರೀಕರಣ ಬಳಿಕ,ರಿಷಿಕೇಶ್ ನಾಪತ್ತೆಯಾಗಿದ್ದಾರೆ. ನಂತರ ಸಿಕ್ಕಾಗ ಚಿತ್ರವನ್ನು ಇನ್ನೂ ಉತ್ತಮವಾಗಿ ಮಾಡೋಣ ಅಂತಾ 19 ಲಕ್ಷ ಹಣವನ್ನು ಪಡೆದುಕೊಂಡಿದ್ದ ಅನ್ನೊ ಆರೋಪ ಮಾಡ್ತಿದ್ದಾರೆ ರಾಜಲಕ್ಷ್ಮಿ. ಇನ್ನೂ ಉಳಿದ ಚಿತ್ರೀಕರಣ ಪೂರ್ಣ ಮಾಡಲು ಕೇಳಿದಾಗ. ಹೊಸ ಕ್ಯಾತೆ ತೆಗೆದಿದ್ದ.. ಅಲ್ಲದೇ ಅನಿತಾ ಭಟ್ ಎಂಬುವವರನ್ನ ನಿರ್ಮಾಪಕರನ್ನಾಗಿ ಸೇರಿಸಕೊಳ್ಳುವಂತೆ ಬೇಡಿಕೆ ಇಟ್ಟಿದ್ದ. ಒಪ್ಪದಿದ್ದಕ್ಕೆ ಸಿನಿಮಾಗೆ ಸಂಬಂಧಿಸಿದ ನಾಲ್ಕು ಹಾರ್ಡ್ ಡಿಸ್ಕ್ ಕೊಡದೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿದ್ದಾರೆ.
ಇದನ್ನೂ ವೀಕ್ಷಿಸಿ: ರಾಜಧಾನಿಯಲ್ಲಿ ಡೆಂಗಿ ರುದ್ರ ನರ್ತನ: ಮಕ್ಕಳಲ್ಲೂ ಹೆಚ್ಚಿದ ಪ್ರಕರಣಗಳು..!