ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?

ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?

Published : Jan 14, 2026, 06:26 PM IST

ರಿಲೀಸ್ ಆಗಿರೋ ಯಶ್ ನಟನೆಯ ಬಹುನಿರೀಕ್ಷೆಯ ಟಾಕ್ಸಿಕ್ ಸಿನಿಮಾದ ಟೀಸರ್ ಈಗಾಗ್ಲೇ 200 ಮಿಲಿಯನ್​ಗೂ ಅಧಿಕ ವೀವ್ಸ್ ಗಳಿಸಿದ್ದು ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿದೆ. ಆದ್ರೆ ಟಾಕ್ಸಿಕ್ ಟೀಸರ್​ನ ಆರಂಭದಲ್ಲಿರೋ ಹಸಿ ಬಿಸಿ ಸೀನ್ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ದೂರು ಕೂಡ ದಾಖಲಾಗಿದೆ.

ಟಾಕ್ಸಿಕ್ ಟ್ರಬಲ್
ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಟೀಸರ್ ಬಂದಿದ್ದೇ ಬಂದದ್ದು, ಒಂದಾದ ಮೇಲೊಂದು ದೂರುಗಳು ಬರ್ತಾ ಇವೆ. ಟಾಕ್ಸಿಕ್ ಟೀಸರ್​ನಲ್ಲಿರೋ ಅಶ್ಲೀಲ ದೃಶ್ಯದ ವಿರುದ್ದ ಮಹಿಳಾ ಆಯೋಗ, ಮಕ್ಕಳ ಆಯೋಗ ಅಷ್ಟೇ ಅಲ್ಲದೇ ಸೆನ್ಸಾರ್ ಮಂಡಳಿಗೂ ದೂರು ಹೋಗಿದೆ.

ಟಾಕ್ಸಿಕ್ ಟೀಸರ್​ಗೆ ಟ್ರಬಲ್ ಮೇಲೆ ಟ್ರಬಲ್..!
ಯೆಸ್ ರಾಕಿಂಗ್ ಯಶ್ ನಟನೆಯ ಬಹುನಿರೀಕ್ಷೆಯ ಟಾಕ್ಸಿಕ್ ಸಿನಿಮಾದ ಟೀಸರ್ ಯಶ್ ಹುಟ್ಟುಹಬ್ಬದ ದಿನ ರಿಲೀಸ್ ಆಗಿತ್ತು. ಈಗಾಗ್ಲೇ 200 ಮಿಲಿಯನ್​ಗೂ ಅಧಿಕ ವೀವ್ಸ್ ಗಳಿಸಿದ್ದು ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್​ನಲ್ಲಿದೆ.

ಆದ್ರೆ ಟಾಕ್ಸಿಕ್ ಟೀಸರ್​ನ ಆರಂಭದಲ್ಲಿರೋ ಹಸಿ ಬಿಸಿ ಸೀನ್ ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಕೋಟ್ಯಂತರ ಜನರು ನೋಡೋ ಟೀಸರ್​ನಲ್ಲಿ ಇಂಥದ್ದೊಂದು ಅಶ್ಲೀಲ ದೃಶ್ಯ ಇಟ್ಟಿರೋದು ಎಷ್ಟು ಸರಿ ಅಂತ ಅನೇಕರು ಕ್ಯಾತೆ ತೆಗೆದಿದ್ದಾರೆ.

ಮಹಿಳಾ ಮತ್ತು ಮಕ್ಕಳ ಆಯೋಗಕ್ಕೆ ದೂರು..!
ಹೌದು ಆರಂಭದಲ್ಲಿ ಟಾಕ್ಸಿಕ್ ತಂಡದ ವಿರುದ್ದ ವಕೀಲರೊಬ್ರು ದೂರು ದಾಖಲಿಸಿದ್ರು. ಆ ಬಳಿಕ ಆಮ್ ಆದ್ಮಿ ಪಾರ್ಟಿ ಟಾಕ್ಸಿಕ್ ವಿರುದ್ದ ಹೋರಾಟಕ್ಕೆ ನಿಂತಿದೆ. ಮಹಿಳಾ ಮತ್ತು ಮಕ್ಕಳ ಆಯೋಗಕ್ಕೆ ದೂರು ನೀಡಿದ್ದು ಈ ಅಶ್ಲೀಲ ಟೀಸರ್ ವಿರುದ್ದ ಕ್ರಮ ಕೈಗೊಳ್ಳಿ ಅಂತ ಒತ್ತಾಯಿಸಿದೆ.

ಸೆನ್ಸಾರ್ ಮಂಡಳಿಗೂ ಟಾಕ್ಸಿಕ್ ವಿರುದ್ದ ದೂರು!
ಸದ್ಯ ಬಿಡುಗಡೆಯಾಗಿರೋ ಟಾಕ್ಸಿಕ್ ಟೀಸರ್ ಸೆನ್ಸಾರ್ ಆಗಿಲ್ಲ. ಮಕ್ಕಳ ಸಮೇತ ಅಶ್ಲೀಲ ದೃಶ್ಯ ಇರೋ ಟೀಸರ್​ನ ಎಲ್ಲರೂ ನೋಡ್ತಾ ಇದ್ದಾರೆ. ಇದನ್ನ ಸೋಷಿಯಲ್ ಮಿಡಿಯಾದಿಂದಲೇ ತೆಗೆದು ಹಾಕಿ ಅಂತ ಸೆನ್ಸಾರ್ ಮಂಡಳಿಗೆ  ದೂರು ನೀಡಲಾಗಿದೆ.

''ಟಾಕ್ಸಿಕ್'' ಚಿತ್ರದ ಟೀಸರ್‌ನಲ್ಲಿರುವ ಹಸಿ ಬಿಸಿ ದೃಶ್ಯಗಳಿಗೆ ಕೆಂಡ ಕಾರಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸೆನ್ಸಾರ್ ಮಂಡಳಿಗೆ   ದೂರು ಸಲ್ಲಿಸಿದ್ದಾರೆ. ಟೀಸರ್‌ನಲ್ಲಿ ಲೈಂಗಿಕವಾಗಿ ಪ್ರಚೋದಿಸುವ ಅಶ್ಲೀಲ ದೃಶ್ಯಗಳಿವೆ ಅಂತ ಹೇಳಿರುವ ದಿನೇಶ್ ಕಲ್ಲಹಳ್ಳಿ ಅಪ್ರಾಪ್ತರ ಮೇಲೆ ಈ ಟೀಸರ್ ತುಂಬಾನೇ ಕೆಟ್ಟ ಪರಿಣಾಮ ಬೀರುತ್ತೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಒಟ್ನಲ್ಲಿ ಮೂರೂವರೇ ವರ್ಷಗಳ ಬಳಿಕ ಯಶ್ ಸಿನಿಮಾ ಮಾಡಿದ್ದಾರೆ. ಆದ್ರೆ ಆ ಸಿನಿಮಾಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಈ ವಿವಾದದ ಬಗ್ಗೆ ಯಶ್, ಆಗಲಿ ಟಾಕ್ಸಿಕ್ ಟೀಂ ಆಗಲಿ ಇದೂವರೆಗೂ ಬಾಯಿಬಿಟ್ಟಿಲ್ಲ. ದಿನೇ ದಿನೇ ಚಿತ್ರದ ಟೀಸರ್ ವಿರುದ್ದ ದೂರುಗಳು ಬರ್ತಾ ಇರೋದ್ರಿಂದ ಚಿತ್ರತಂಡ ಈ ಬಗ್ಗೆ ಏನು ಪ್ರತಿಕ್ರಿಯೆ ನೀಡುತ್ತೆ ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೊಡಿ.. 

03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more