Aug 15, 2023, 9:29 AM IST
ಟಾಲಿವುಡ್‌ನ ಮೆಗಾ ಸ್ಟಾರ್ ಚಿರಂಜೀವಿಗೆ ಶನಿ ಹೆಗಲೇರಿದೆ. ಸಿಕ್ಕಾಪಟ್ಟೆ ಇಂಟ್ರೆಸ್ಟ್ ಕೊಟ್ಟು ಯಾವ್ದೇ ಸಿನಿಮಾ ಮಾಡಿದ್ರು, ಆ ಮೂವಿ ಪ್ಲಾಫ್ ಶೋ ಪ್ರದರ್ಶಿಸುತ್ತಿವೆ. ಇದೀಗ 2022ರಲ್ಲಿ ಬಂದ ಆಚಾರ್ಯ ಸಿನಿಮಾದಲ್ಲಿ ಆದ ಗತಿಯೇ ಕಳೆದ ವಾರ ಬಿಡುಗಡೆ ಆಗಿದ್ದ ಬೋಲಾ ಶಂಕರ್(Bhola Shankar) ಸಿನಿಮಾದಲ್ಲೂ ಆಗಿದೆ. ಆ ಸಮಸ್ಯೆ ಬಗೆ ಹರಿಸಿಕೊಳ್ಳೋಕೆ ಮೆಗಾಸ್ಟಾರ್ ಚಿರಂಜೀವಿ(Megastar Chiranjeevi) ಸೂಪರ್ ಸ್ಟಾರ್ ರಜನಿಕಾಂತ್ರ ದಾರಿ ಹಿಡಿದಿದ್ದಾರೆ. ಹೌದು, ಒಂದೇ ವಾರದಲ್ಲಿ ಸೌತ್ನ 2 ಹಳೆ ಹುಲಿಗಳ ಸಿನಿಮಾ ರಿಲೀಸ್ ಆಗಿತ್ತು. ಒಂದು ಸೂಪರ್ ಸ್ಟಾರ್ ರಜನಿಕಾಂತ್(Rajinikanth) ಅವರ ಜೈಲರ್ ಸಿನಿಮಾ. ಇನ್ನೊಂದು ಮೆಗಾಸ್ಟಾರ್ ಚಿರಂಜೀವಿಯ ಭೋಲಾ ಶಂಕರ್ ಸಿನಿಮಾ. ಆದ್ರೆ ಸೂಪರ್ ಸ್ಟಾರ್ ಅಬ್ಬರಕ್ಕೆ ಮೆಗಾಸ್ಟಾರ್ ಸೋತಿದ್ದಾರೆ. ಈ ಹಿಂದೆ ಏಜೆಂಟ್ ಸಿನಿಮಾ ನಿರ್ಮಿಸಿ ಕೈ ಸುಟ್ಟುಕೊಂಡಿದ್ದ ಅನಿಲ್ ಸುಂಕರ ಈ ಚಿತ್ರಕ್ಕೂ 101 ಕೋಟಿ ಬಂಡವಾಳ ಹೂಡಿದ್ರು. ಆದರೆ ಸಿನಿಮಾ ಸೋಲು ನಿರ್ಮಾಪಕರನ್ನು ಕಂಗೆಡಿಸಿದೆ. ಬೋಲಾ ಶಂಕರ್ ಸಿನಿಮಾ ನಿರ್ಮಾಪಕ ಅನಿಲ್ ಸುಂಕರಗೆ ಆದ ಲಾಸ್ಅನ್ನ ತುಂಬಿಕೊಡೋ ನಿರ್ಧಾರವನ್ನು ಚಿರಂಜೀವಿ ಮಾಡಿದ್ದಾರಂತೆ. ಮೆಗಾಸ್ಟಾರ್ ಬೋಲಾ ಶಂಕರ್ ಸಿನಿಮಾ ಸೋಲು ಈಗ ನಿರ್ಮಾಪಕ ಅನಿಲ್ ಸುಂಕರ ಮನೆ ಮಾರಿಕೊಳ್ಳುವ ಹಂತಕ್ಕೆ ಬಂದಿದೆ. ಆದ್ರಿಂದ ನಿರ್ಮಾಪಕರಿಗೆ ಹಣವನ್ನು ರಿರ್ಟನ್ ನೀಡಲು ಚಿರಂಜೀವಿ ನಿರ್ಧರಿಸಿದ್ದಾರೆ ಅಂತ ಹೇಳಲಾಗ್ತಿದೆ.
ಇದನ್ನೂ ವೀಕ್ಷಿಸಿ: ಟಾಲಿವುಡ್ ದಿಗ್ಗಜ ಪ್ರಭಾಸ್‌ಗೆ ಅನಾರೋಗ್ಯ: 'ಬಾಹುಬಲಿ'ಗೆ ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆ..!