ಲೀಲಾವತಿಯವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಬಡವಾಗಿದೆ: ಯಡಿಯೂರಪ್ಪ

Dec 9, 2023, 1:05 PM IST

ಕನ್ನಡದ ಮೇರು ನಟಿ ಲೀಲಾವತಿ ವಿಧಿವಶರಾಗಿದ್ದಾರೆ. ಸುಮಾರು 600ಕ್ಕೂ ಅಧಿಕ ಚಿತ್ರದಲ್ಲಿ ಲೀಲಾವತಿ(Leelavathi) ನಟಿಸಿದ್ದಾರೆ. ಬೆಳ್ತಂಗಡಿಯ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಚಿತ್ರರಂಗದಲ್ಲಿ ಮಿಂಚಿದ್ದಾರೆ. ಸಿನಿಮಾ ರಂಗಕ್ಕೆ ಲೀಲಾವತಿಯವರ ಕೊಡುಗೆ ಅಪಾರವಾದದ್ದಾಗಿದೆ. ಲೀಲಾವತಿಯವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ಬಡವಾಗಿದೆ. ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ(BS Yediyurappa) ಹೇಳಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂನಲ್ಲಿ ಅವರು ನಟಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಲೀಲಾವತಿ-ವಿನೋದ್ ಅಪರೂಪದ ತಾಯಿ-ಮಗ,ಶ್ರೇಷ್ಠ ನಟಿ ನಮ್ಮನ್ನು ಆಗಲಿದ್ದಾರೆ: ಸಿಎಂ