KGF Chapter 2: ಕೆಜಿಎಫ್ ರಣಧೀರನ ಆರ್ಭಟಕ್ಕೆ ಬೆಚ್ಚಿದ ಬಾಲಿವುಡ್!

KGF Chapter 2: ಕೆಜಿಎಫ್ ರಣಧೀರನ ಆರ್ಭಟಕ್ಕೆ ಬೆಚ್ಚಿದ ಬಾಲಿವುಡ್!

Published : Apr 18, 2022, 11:47 AM IST

ಬಾಹುಬಲಿ, ಪುಷ್ಪ, ಆರ್‌ಆರ್‌ಆರ್‌, ಕೆಜಿಎಫ್..! ದಕ್ಷಿಣದ ವಜ್ರಮುಷ್ಠಿಗೆ ಬಾಲಿವುಡ್ ಚಿಂದಿ ಚಿತ್ರಾನ್ನ! ಕೆರಳಿದ ಕೆ.ಜಿ.ಎಫ್... ಬೆದರಿದ ಬಾಲಿವುಡ್..! ರೆಕಾರ್ಡ್‌ಗಳೆಲ್ಲಾ ಉಡೀಸ್, ಬಾಲಿವುಡ್ ಢರ್‌ಗಯಾ..!

ತೊಡೆ ತಟ್ಟಿ ನಿಂತ ಗಟ್ಟಿಗನ ಕೆಚ್ಚು, ಮುನ್ನುಗ್ಗೋ ಸಿಡಿಲ ಕಿಚ್ಚು. ಈ ಕಿಚ್ಚಿನ ಮುಂದೆ ಬಾಲಿವುಡ್ (Bollywood) ಸೂಪರ್ ಸ್ಟಾರ್‌ಗಳೆಲ್ಲಾ ಸೈಲೆಂಟ್, ಸೈಲೆಂಟ್. ದಕ್ಷಿಣದ ಸಿನಿಮಾಗಳನ್ನು ಕಾಲ ಕಸದಂತೆ ಕಂಡ ಬಾಲಿವುಡ್ ಚಿತ್ರರಂಗವನ್ನು ಅದೇ ದಕ್ಷಿಣದ ಸಿನಿಮಾಗಳು ಪೊರಕೆಯಲ್ಲಿ ಗುಡಿಸಿ ಹಾಕಿ ಬಿಟ್ಟಿವೆ. ಬಾಲಿವುಡ್ ಅಧಃಪತನಕ್ಕೆ ಕೊನೇ ಮೊಳೆ ಹೊಡೆದಿರೋದು ಕನ್ನಡ ಚಿತ್ರರಂಗದ ಹೆಮ್ಮೆ ಕೆ.ಜಿ.ಎಫ್ ಚಾಪ್ಟರ್-2 (KGF Chapter 2) ಅನ್ನೋ ಮಹೋನ್ನತ ಸಿನಿಮಾ. ಕೆ.ಜಿ.ಎಫ್ ಅಂದ್ರೆ ಕೋಲಾರ ಗೋಲ್ಡ್ ಫೀಲ್ಡ್ ಅಂತ. ಹೆಸರಿಗೆ ತಕ್ಕಂತೆ ಕೆಜಿಎಫ್ (KGF) ಅಪ್ಪಟ ಗೋಲ್ಡೇ ಬಿಡ್ರೀ. 

ಕೆಜಿಎಫ್-2 ಕ್ರೇಜ್‌ಗಿಂತ ಹೆಚ್ಚಾಯ್ತು ಇವರ ಕ್ರೇಜ್, ಸೋಷಿಯಲ್ ಮೀಡಿಯಾದಲ್ಲಿ ಈಗ ಇವರದ್ದೇ ಟ್ರೆಂಡ್!

ಭಾರತೀಯ ಚಿತ್ರರಂಗದ ದಾಖಲೆಗಳನ್ನೆಲ್ಲಾ ಉಡೀಸ್ ಮಾಡ್ತಾ ಮುನ್ನುಗ್ತಾ ಇರೋ ಕೆ.ಜಿ.ಎಫ್ ಚಾಪ್ಟರ್-2 ಸಿನಿಮಾ, ಕೇವಲ ಎರಡೇ ಎರಡು ದಿನಗಳಲ್ಲಿ ಬಾಚಿಕೊಂಡ ದುಡ್ಡೆಷ್ಟು ಗೊತ್ತಾ. ಇದು ಕನ್ನಡ ಚಿತ್ರವೊಂದರ ತಾಕತ್ತು. ಕನ್ನಡಿಗರ ಸಾರಥ್ಯದಲ್ಲೇ ನಿರ್ಮಾಣಗೊಂಡ ಸಿನಿಮಾ ಶಕ್ತಿ. ಕೆ.ಜಿ.ಎಫ್ ನಾಗಾಲೋಟದ ಮುಂದೆ ಯಾವ ಬಾಲಿವುಡ್ಡೂ ಇಲ್ಲ, ಯಾವ ಖಾನು, ಕಿಂಗು, ಕಪೂರು, ಕುಮಾರೂ ಇಲ್ಲ. ಕೆ.ಜಿ.ಎಫ್ ರಣಾರ್ಭಟದ ಮುಂದೆ ಬಾಲಿವುಡ್‌ನ ಸೂಪರ್ ಸ್ಟಾರ್‌ಗಳು ಅದ್ಯಾವ ಪರಿ ಗರ ಬಡಿದು ಹೋಗಿದ್ದಾರೆ ಅನ್ನೋದಕ್ಕೆ ಒಂದೇ ಒಂದು ಸಣ್ಣ ಉದಾಹರಣೆಯನ್ನು ಈ ವಿಡಿಯೋದಲ್ಲಿ ವೀಕ್ಷಿಸಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more