ಮಣಿಪುರ ಮಹಿಳೆಯರ ಮೇಲಿನ ದೌರ್ಜನ್ಯ: ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆಗೆ ಬಾಲಿವುಡ್ ಆಗ್ರಹ

Jul 22, 2023, 10:24 AM IST

ನಮ್ಮ ದೇಶದಲ್ಲಿ ಮಹಿಳೆಯರ ಸಮಾನತೆ, ಮಹಿಳೆಯರ ರಕ್ಷಣೆ ಬಗ್ಗೆ ಎಂತದ್ದೇ ಕಾನೂನು ಜಾರಿಯಾದ್ರು ಒಮ್ಮೊಮ್ಮೆ ಅದು ಕಾಗದದ ಮೇಲಿನ ಬರಹಕ್ಕೆ ಮಾತ್ರ ಸೀಮಿತವೇನೋ ಎನಿಸುತ್ತೆ. ಯಾಕಂದ್ರೆ ಎಂಥದ್ದೇ ಕಾನೂನು ಜಾರಿಯಲ್ಲಿದ್ರು, ಮಹಿಳೆಯರ ಮೇಲಿನ ದೌರ್ಜನ್ಯ(violence against Manipur women) ಮಾತ್ರ ನಿಲ್ಲುತ್ತಿಲ್ಲ. ಇದೀಗ ಮಣಿಪುರದ(Manipur)  ಬುಡಕಟ್ಟು ಜನಾಂಗದ ಇಬ್ಬರು ಮಹಿಳೆಯರನ್ನ ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಅತ್ಯಾಚಾರ ಮಾಡಿದ ವಿಡಿಯೋ ದೇಶವ್ಯಾಪಿ ಹರಿದಾಡ್ತಿದ್ದು ದೊಡ್ಡ ಆಕ್ರೋಶಕ್ಕೆ ಕಾರಣ ಆಗಿದೆ. ಇದೀಗ ಇಡೀ ಬಾಲಿವುಡ್(Bollywood) ಜಗತ್ತು ಈ ದೌರ್ಜನ್ಯದ ಧುರುಳರಿಗೆ ಅತ್ಯಂತ ಕಠಿಣ ಶಿಕ್ಷೆ ಕೊಡಬೇಕು ಅಂತ ಆಗ್ರಹಿಸಿದ್ದಾರೆ. ಬಾಲಿವುಡ್ ಸ್ಟಾರ್ ಕೆಜಿಎಫ್‌ನ ಅಧಿರ ಸಂಜಯ್ ದತ್(Sanjay Dutt) ಮಣಿಪುರ ಪ್ರಕರಣಕ್ಕೆ ಸಿಟ್ಟಾಗಿದ್ದಾರೆ. ಈ ಘಟನೆ ಅತ್ಯಂತ ಹೇಯ ಕೃತ್ಯ, ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಮಹಿಳೆಯರ ಮೇಲಿನ ದೌರ್ಜನ್ಯದ ವಿಡಿಯೋ ನನಗೆ ಅತ್ಯಂತ ನೋವು ತಂದಿದೆ. ತಪ್ಪು ಮಾಡಿದರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಂಜಯ್ ದತ್ ಟ್ವೀಟ್ ಮಾಡಿದ್ದಾರೆ. ಅಷ್ಟೆ ಅಲ್ಲ ನಟ ಅಕ್ಷಯ್ ಕುಮಾರ್ ಕೂಡ ಬೇಸರ ಹೊರ ಹಾಕಿದ್ದು, ಮಹಿಳೆಯರ ಮೇಲಿನ ದೌರ್ಜನ್ಯದ ವಿಡಿಯೋ ನೋಡಿ ಬಹಳ ಬೇಸರವಾಯಿತು. ತಪ್ಪಿತಸ್ಥರಿಗೆ ಘೋರ ಶಿಕ್ಷೆ ಆಗಲಿ ಎಂದು ಆಶಿಸುತ್ತೇನೆ ಎಂದು ಅಕ್ಷಯ್‌ಕುಮಾರ್‌ ಬರೆದುಕೊಂಡಿದ್ದಾರೆ. ಇನ್ನೂ ನಟ ರಿತೇಶ್ ದೇಶಮುಖ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ನಟಿ ಕಿಯಾರಾ ಅಡ್ವಾನಿ, ಜಯಾ ಬಚ್ಚನ್ ಕೂಡ ಈ ಪ್ರಕರಣದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈಗ ಇವರೆಲ್ಲರ ಟ್ವೀಟ್, ಮಣಿಪುರ ಕ್ರಿಮಿಗಳನ್ನ ಶಿಕ್ಷಿಸಿ ಅನ್ನೋ ಅಭಿಯಾನಕ್ಕೆ ಸಾಕ್ಷಿಯಾಗ್ತಿದೆ. 

ಇದನ್ನೂ ವೀಕ್ಷಿಸಿ:  ಸೋತಿರೋ ಪ್ರಭಾಸ್‌ಗೆ ಬಂತು 'ಕಲ್ಕಿ' ಶಕ್ತಿ: ಸಿನಿ ಜಗತ್ತಲ್ಲಿ ಪ್ರಾಜೆಕ್ಟ್ 'K' ಸೌಂಡ್ ಶುರು..!