ಕಿರುತೆರೆ ಶೋನಲ್ಲಿ ಹನುಮಂತನ ಹೊಸ ಅವತಾರ.. 'ಕವಿರತ್ನ ಕಾಳಿದಾಸ' ಪಾತ್ರ ಮಾಡಿದ ಕುರಿಗಾಹಿ!

ಕಿರುತೆರೆ ಶೋನಲ್ಲಿ ಹನುಮಂತನ ಹೊಸ ಅವತಾರ.. 'ಕವಿರತ್ನ ಕಾಳಿದಾಸ' ಪಾತ್ರ ಮಾಡಿದ ಕುರಿಗಾಹಿ!

Published : Mar 22, 2025, 12:18 PM ISTUpdated : Mar 22, 2025, 12:35 PM IST

ಹನುಮಂತ ಕೂಡ ಒಂಥರಾ ಕಾಳಿದಾಸನೇ. ನಿಮಗೆ ಕವಿರತ್ನ ಕಾಳಿದಾಸನ ಕಥೆ ಗೊತ್ತಿರಬಹುದು. ಅದ್ರಲ್ಲಿ ಕುರಿಕಾಯ್ದುಕೊಂಡಿದ್ದ ಅಜ್ಞಾನಿಗೆ ರಾಜಕುಮಾರಿ ಜೊತೆಗೆ ಮೋಸದಿಂದ ವಿವಾಹ ಮಾಡಿಸಿಬಿಡ್ತಾರೆ. ಈತ ಸಕಲ ವಿದ್ಯಾಪಾರಂಗತ ಅಂದುಕೊಂಡು ಮದುವೆಯಾಗಿದ್ದ ರಾಜಕುಮಾರಿ..

ಬಿಗ್ ಬಾಸ್ ವಿನ್ನರ್ ಹನುಮಂತ (Hanumantha) ನಟನಾಗ್ತಾನೇ ಅನ್ನೋ ಸುದ್ದಿ ಹರಿದಾಡ್ತಾನೇ ಇದೆ. ಸದ್ಯ ಕಿರುತೆರೆಯಲ್ಲಿ ತನ್ನ ನಟನೆಯ ಝಲಕ್ ತೋರಿಸ್ತಾ ಇದ್ದಾನೆ ಹನುಮಂತ. ಅದ್ರಲ್ಲೂ ಕವಿರತ್ನ ಕಾಳಿದಾಸ ಪಾತ್ರವನ್ನ ಮಾಡಿ ಎಲ್ಲರನ್ನೂ ಅಚ್ಚರಿ ಪಡಿಸಿದ್ದಾನೆ . ಅಸಲಿಗೆ ಹನುಮಂತ ಕೂಡ ಕಾಳಿದಾಸನಂತೆ ಆರಂಭದಲ್ಲಿ ಕುರಿಗಾಹಿ ಆಗಿದ್ದವನು. ಬಳಿಕ ಅಸಾಧ್ಯ ಪ್ರತಿಭೆಯಿಂದ ನಾಡನ್ನೇ ಮೆಚ್ಚಿಸಿ  ಆಧುನಿಕ ಕಾಳಿದಾಸ ಅನ್ನಿಸಿಕೊಂಡವನು.

ಕವಿರತ್ನ ಕಾಳಿದಾಸ ಪಾತ್ರ ಮಾಡಿದ ಕುರಿಗಾಹಿ ಹನುಮಂತ..!
ಯೆಸ್ ಬಿಗ್ ಬಾಸ್ ವಿನ್ನರ್ ಹನುಮಂತ ಈಗ ಕವಿರತ್ನ ಕಾಳಿದಾಸನಾಗಿದ್ದಾನೆ. ಈ ವಾರದ ಬಾಯ್ಸ್ ವೆರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಎಲ್ಲಾ ಸ್ಪರ್ಧಿಗಳು ಬೇರೆ ಬೇರೆ ಸಿನಿಮಾಗಳನ್ನ ವೇದಿಕೆ ಮೇಲೆ ರೀ ಕ್ರಿಯೇಟ್ ಮಾಡಿ ಅಭಿನಯ ಮಾಡಿದ್ದಾರೆ. ಅದ್ರಲ್ಲಿ ಹನುಮಂತ ಆಯ್ಕೆ ಮಾಡಿಕೊಂಡಿರೋದು ಕವಿರತ್ನ ಕಾಳಿದಾಸನ ಪಾತ್ರವನ್ನ.

ಕವಿರತ್ನ ಕಾಳಿದಾಸ ಅಂದಕೂಡಲೇ ಕನ್ನಡಿಗರಿಗೆಲ್ಲಾ ಮೊದಲು ನೆನಪಾಗೋದೇ ಡಾ.ರಾಜ್ ಕುಮಾರ್ ಅಭಿನಯಿಸಿದ ಕವಿರತ್ನ ಕಾಳಿದಾಸ ಸಿನಿಮಾ. ಮೊದಲಾರ್ಧದಲ್ಲಿ ಪೆದ್ದ ಕುರಿಗಾಹಿಯಂತೆ, ದ್ವಿತಿಯಾರ್ಧದಲ್ಲಿ ಪ್ರಭುದ್ದ ಕವಿರತ್ನನಂತೆ ನಟಿಸಿದ ರಾಜ್ ಅಭಿನಯ ನಿಜಕ್ಕೂ ಅಮೋಘ, ಅದ್ಭುತ.

ಇದೀಗ ಬಾಯ್ಸ್ ವೆರ್ಸಸ್ ಗರ್ಲ್ಸ್ ವೇದಿಕೆ ಮೇಲೆ ಹನುಮಂತ ಈ ಸಿನಿಮಾವನ್ನ ಮರುಸೃಷ್ಟಿ ಮಾಡಿದ್ದಾನೆ. ಕುರಿಗಾಗಿ, ಕವಿ ಪಾತ್ರಗಳನ್ನೆನೋ ಮಸ್ತ್ ಆಗಿ ಮಾಡಿದ್ದಾನೆ. ಆದ್ರೆ ಶಾಕುಂತಲೇ ಆಗಿ ಕೋಳಿ ರಮ್ಯಾ ಬಂದ ಮೇಲೆ, ದುಷ್ಯಂತನಾಗಿ  ರೊಮ್ಯಾಂಟಿಕ್ ಸೀನ್​ ಎಲ್ಲಾ ನನ್ ಕೈಲಿ ಆಗಲ್ಲ ಅಂದಿದ್ದಾನೆ ಹನುಮಂತ. ಇವರಿಬ್ಬರ ಕಾಮಿಡಿ ಝಲಕ್​ನ ಪ್ರೋಮೋ ಸಖತ್ ಸದ್ದು ಮಾಡ್ತಾ ಇದೆ.

ಹನುಮಂತ ಕೂಡ ಒಂಥರಾ ಕಾಳಿದಾಸನೇ. ನಿಮಗೆ ಕವಿರತ್ನ ಕಾಳಿದಾಸನ ಕಥೆ ಗೊತ್ತಿರಬಹುದು. ಅದ್ರಲ್ಲಿ ಕುರಿಕಾಯ್ದುಕೊಂಡಿದ್ದ ಅಜ್ಞಾನಿಗೆ ರಾಜಕುಮಾರಿ ಜೊತೆಗೆ ಮೋಸದಿಂದ ವಿವಾಹ ಮಾಡಿಸಿಬಿಡ್ತಾರೆ. ಈತ ಸಕಲ ವಿದ್ಯಾಪಾರಂಗತ ಅಂದುಕೊಂಡು ಮದುವೆಯಾಗಿದ್ದ ರಾಜಕುಮಾರಿ ಈತನ ನಿಜಬಣ್ಣ ಬಯಲಾದ ಮೇಲೆ ಕಣ್ಣೀರು ಹಾಕ್ತಾಳೆ.. ದೇವಿ ಬಳಿ ಹೋಗಿ ವಿದ್ಯೆಯನ್ನ ಪಡೆದುಕೋ ಅಂತಾಳೆ. ಪತ್ನಿಯ ಮಾತಿನಂತೆ ದೇವಿ ಬಳಿ ಹೋಗುವ ಕುರುಬನಿಗೆ ದೇವಿ ದಯೆತೋರ್ತಾಳೆ. ಆತನ ನಾಲಿಗೆ ಮೇಲೆ ಓಂಕಾರ ಬರೆದು ವಿದ್ಯೆಯನ್ನ ಕರುಣಿಸ್ತಾಳೆ.

ಮುಂದೆ ಆತ ಕವಿರತ್ನ ಕಾಳಿದಾಸ ಅಂತ ಖ್ಯಾತಿ ಗಳಿಸ್ತಾಳೆ. ಶಾಕುಂತಲೆಯಂತಯ ಅದ್ಭುತ ಕಾವ್ಯವನ್ನ ಸೃಷ್ಟಿಸ್ತಾನೆ. 1500 ವರ್ಷಗಳು ಕಳೆದರೂ ಕಾಳಿದಾಸನ ಕಾವ್ಯದ  ಮೋಡಿ ಕಡಿಮೆ ಆಗಿಲ್ಲ.  ಹನುಮಂತ ಕೂಡ ಕುರಿಕಾಯ್ದುಕೊಂಡಿದ್ದವನು. ಶಾಲೆಗೆ ಹೋದವನಲ್ಲ.. ವಿದ್ಯೆ ಕಲಿತವನಲ್ಲ.. ಆದ್ರೆ ತನ್ನ ಹಾಡುಗಾರಿಕೆಯಿಂದ ಪ್ರಸಿದ್ದಿ ಪಡೆದು, ತನ್ನ ನೇರಮಾತು ವಿನಯವಂತಿಕೆಯಿಂದ ಕೋಟ್ಯಂತರ ಜನರ ಪ್ರೀತಿ ಪಡೆದುಕೊಂಡಿದ್ದಾನೆ. ಸೋ ಇವನನ್ನ ಎಲ್ಲರೂ ಈ ಕಾಲದ ಕಾಳಿದಾಸ ಅಂತ ಕರೀತಾ ಇದ್ದಾರೆ. ಇದೀಗ ಕಾಳಿದಾಸನ ಪಾತ್ರವನ್ನೇ ಮಾಡಿ ಎಲ್ಲರ ಮನಸು ಗೆದ್ದಿದ್ದಾನೆ ಹನುಮಂತ.

ಸದ್ಯ ಕಿರುತೆರೆ ಶೋಗಳಲ್ಲಿ ಹನುಮಂತ ನಟನೆ ಮಾಡ್ತಾ ಇರೋದನ್ನ ನೋಡಿ, ಇವನನ್ನ ಹೀರೋ ಮಾಡೋದಕ್ಕೂ ಹಲವರು ತಯಾರಾಗಿದ್ದಾರೆ. ಆದ್ರೆ ಜಾತ್ರೆ, ಊರಹಬ್ಬ, ಉತ್ಸವಗಳಲ್ಲಿ ಸಿಂಗರ್ ಆಗಿ ಬ್ಯುಸಿಯಾಗಿರೋ ಹನುಮ ಇದರ ನಡು ನಡುವೆ ಕಿರುತೆರೆ ಶೋಗಳಲ್ಲಿ ತೊಡಗಿಕೊಂಡಿದ್ದಾನೆ. ಇದೆಲ್ಲದರ ನಡುವೆ ಸಿನಿಮಾ ಬೇರೆ ಬೇಕಾ ಅಂತಿದ್ದಾನೆ.

ಆದ್ರೆ ಹನುಮಂತನ್ನ ಕಾಳಿದಾಸ ಅವತಾರದಲ್ಲಿ ನೋಡಿದವರು, ಈತ ಬರೀ ಕಿರುತೆರೆ ಶೋದಲ್ಲಿ ಮಾತ್ರ ಅಲ್ಲ ಬಿಗ್ ಸ್ಕ್ರೀನ್ ಮೇಲೆ ಈ ಪಾತ್ರ ಮಾಡಿದ್ರೂ ಸೊಗಸಾಗಿರುತ್ತೆ ಅಂತ ಕಾಮೆಂಟ್ ಮಾಡ್ತಾ ಇದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.. 
 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more