ಧ್ರುವ ಸರ್ಜಾ ನಟನೆಯ ಮಾರ್ಟಿನ್ ಹೊಸ ನ್ಯೂಸ್! ಕೆಡಿ ಮೊದಲು ಹೊರ ಬೀಳಲಿದೆ ನಯಾ ಮ್ಯಾಟರ್..!

May 25, 2024, 9:47 AM IST

ಕೆಡಿ, ಧ್ರುವ ಸರ್ಜಾ(Dhruva sarja) ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್ ಇರೋ ಸಿನಿಮಾ. ಅದರಲ್ಲೂ ಹೇಳಿ ಕೇಳಿ ದಿ ಶೋ ಮ್ಯಾನ್ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಿರೋ ಮೂವಿ. ಕೆವಿಎನ್ ಪ್ರೊಡಕ್ಷನ್ ನಲ್ಲಿ(KVN Production) ನಿರ್ಮಾಣ ಆಗಿರೋ ಕೆಡಿ ಸಿನಿಮಾದ(KD movie) ಬಿಗ್ ಅಪ್ಡೇಟ್ಅನ್ನ ಇದೇ ತಿಂಗಳು ಮೇ 26ರಂದು ಕೊಡೋದಾಗಿ ಹೇಳಿಕೊಂಡಿದ್ದಾರೆ. ಆದ್ರೆ ಇದೀಗ ಧ್ರುವ ಸರ್ಜಾ ನಟನೆಯ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್(Martin movie) ಬಗ್ಗೆಯೂ ಬಿಗ್ ಅಪ್ಡೇಟ್ ಬಂದಿದೆ. ಮಾರ್ಟಿನ್ ಮೂವಿಯ ಹೊಸ ಸುದ್ದಿಯೊಂದನ್ನ ಇದೇ ಮೇ 24ರಂದು ರಿವೀಲ್ ಮಾಡುತ್ತೇವೆ ಅಂತ ಅನೌನ್ಸ್ ಮಾಡಿದ್ದಾರೆ. ಹೀಗಾಗಿ ಧ್ರುವ ಸರ್ಜಾರ ಎರಡು ಸಿನಿಮಾ ತಂಡಗಳು ಪೈಪೋಟಿಗೆ ಬಿದ್ದಂತೆ ಒಟ್ಟಟ್ಟಿಗೆ ಸಿನಿಮಾದ ಸಿಹಿ ಸುದ್ದಿಗಳನ್ನ ರಿವೀಲ್ ಮಾಡೋ ಉತ್ಸಾಹಕ್ಕೆ ಬಿದ್ದಿವೆ. ಎ.ಪಿ ಅರ್ಜುನ್ ನಿರ್ದೇಶನದ ಮಾರ್ಟಿನ್ ಸಿನಿಮಾ ಶುರುವಾಗಿ ಹತ್ತತ್ರ 3 ವರ್ಷ ಆಯ್ತು. ಆದ್ರೆ ಅದ್ಯಾಕೋ ಈ ಸಿನಿಮಾಗೆ ಬಿಡುಗಡೆ ಭಾಗ್ಯ ಇದುವರೆಗೂ ಸಿಕ್ಕಿಲ್ಲ. ಬಟ್ ಈಗ ಮಾರ್ಟಿನ್ ಚಿತ್ರತಂಡ ಮೇ 24ಕ್ಕೆ ಬಿಗ್ ಅನೌನ್ಸ್‌ಮೆಂಟ್‌ ಮಾಡೋದಾಗಿ ಹೇಳಿದೆ. ಅದು ಏನು ಅಂತ ಹುಡುಕಿದ್ರೆ, ಸಿನಿಮಾ ರಿಲೀಸ್ ಡೇಟ್ಅನ್ನ ನಿರ್ಮಾಪಕ ಉದಯ್ ಕೆ ಮೆಹ್ತಾ ರಿವೀಲ್ ಮಾಡಲಿದ್ದಾರೆ ಅಂತ ಹೇಳಲಾಗುತ್ತಿದೆ.

ಇದನ್ನೂ ವೀಕ್ಷಿಸಿ:  Devil Movie: ದರ್ಶನ್ ಫ್ಯಾನ್ಸ್‌ಗೆ ಸಿಕ್ಕಾಯ್ತು ಬಿಗ್ ಸರ್ಪ್ರೈಸ್..!'ಡೆವಿಲ್' ಸಿನಿಮಾ ಎಂಟ್ರಿಗೆ ಫಿಕ್ಸ್ ಆಯ್ತು ಡೇಟ್!