ಸಂಸಾರಿ ಆಗುತ್ತಿದ್ದಾರೆ ಹರ್ಷಿಕಾ-ಭುವನ್: ಆತ್ಮೀಯರಿಗೆ ಆಮಂತ್ರಣ ಕೊಟ್ಟ ಜೋಡಿ..!

ಸಂಸಾರಿ ಆಗುತ್ತಿದ್ದಾರೆ ಹರ್ಷಿಕಾ-ಭುವನ್: ಆತ್ಮೀಯರಿಗೆ ಆಮಂತ್ರಣ ಕೊಟ್ಟ ಜೋಡಿ..!

Published : Aug 15, 2023, 10:06 AM IST

ಹಸೆಮಣೆ ಏರುತ್ತಿದ್ದಾರೆ ಲವ್ ಬರ್ಡ್ಸ್..!
ಹರ್ಷಿಕಾ ಭುವನ್ ಮದುವೆ ಯಾವಾಗ..?
ಪ್ರೀತಿಸಿ ಮದುವೆ ಆಗುತ್ತಿರೋ ಕೂರ್ಗ್ ಜೋಡಿ!

ಇಷ್ಟು ದಿನ ಆಷಾಡ ಮಾಸ ಅಂತ ಮದುವೆ  ಸುದ್ದಿಯೇ ಇರಲಿಲ್ಲ. ಆದ್ರೆ ಈಗ ಆಷಾಡ ಮುಗಿದಿದೆ. ಮತ್ತೆ ನವ ಜೋಡಿಗಳ ನವ ಕನಸುಗಳಿಗೆ ದಾಂಪತ್ಯ ಮುದ್ರೆ ಒತ್ತೋ ಟೈಂ ಬಂದಿದೆ. ಹೀಗಾಗಿ ಸ್ಯಾಂಡಲ್‌ವುಡ್‌ನ(Sandalwood)ಸೆಲೆಬ್ರಿಟಿ ಜೋಡಿ ಅಂತ ಕರೆಸಿಕೊಳ್ಳುತ್ತಿರೋ ಕೂರ್ಗ್ ಸುಂದರಿ ಹರ್ಷಿಕಾ ಪೂಣಚ್ಚ(Harshika Poonachcha) ಹಾಗೂ ಭುವನ್ ಪೊನ್ನಣ್ಣ(Bhuvan Ponnanna) ಸಂಸಾರಿಗಳಾಗುತ್ತಿದ್ದಾರೆ. ಇವರಿಬ್ಬರ ಮದುವೆಗೆ ಸೆಲೆಬ್ರೆಟಿಗಳು, ರಾಜಕೀಯ ಗಣ್ಯರಿಗೆ ಆಹ್ವಾನ ಹೋಗಿದೆ. ಸ್ಯಾಂಡಲ್‌ವುಡ್‌ ನಟಿ ಹರ್ಷಿಕಾ ಪೂಣಚ್ಚಗೆ ಕುಟುಂಬದವರೆಲ್ಲಾ ಸೇರಿ ಕಾಸಿನ ಸರ ತೊಡಿಸೋ ಟೈಂ ಬಂದಿದೆ. ಯಾಕಂದ್ರೆ ಹರ್ಷಿಕಾ ಪೂಣಚ್ಚ ಒಂಟಿ ಬಾಳಿಗೆ ಬ್ರೇಕ್ ಹಾಕಿ ಸಂಸಾರಿ ಆಗುತ್ತಿದ್ದಾರೆ. ಪ್ರೀತಿಸಿದ ಹುಡುಗ ಭುವನ್ ಪನ್ನಣ್ಣನ ಕೈ ಹಿಡಿಯುತ್ತಿದ್ದಾರೆ. ಹೌದು, ಸ್ಯಾಂಡಲ್‌ವುಡ್‌ನ ಮತ್ತೊಂದು ಸೆಲೆಬ್ರಿಟಿ ಜೋಡಿ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚಗೆ ಇದೇ ಆಗಸ್ಟ್ 24ಕ್ಕೆ ಕೊಡಗು(Kodagu) ಜಿಲ್ಲೆಯಾ ವಿರಾಜಪೇಟೆಯಲ್ಲಿ ಅದ್ಧೂರಿ ಕಲ್ಯಾಣೋತ್ಸವ ನಡೆಯುತ್ತಿದೆ. ಹೀಗಾಗಿ ಇತ್ತೀಚೆಗೆ ಬ್ಯಾಚ್ಯೂಲರ್ ಪಾರ್ಟಿ ಮಾಡೋಕೆ ಫಾರಿನ್ ಟೂರ್ ಮಾಡಿದ್ದ ಹರ್ಷಿಕಾ ಪೂಣಚ್ಚ ಈಗ ತನ್ನ ಭಾವಿ ಹಸ್ಬೆಂಡ್ ಭುವನ್ ಜೊತೆ ಸೇರಿ ಇಡೀ ಸ್ಯಾಂಡಲ್‌ವುಡ್‌ಗೆ ತಮ್ಮ ಮದುವೆಯ ಆಮಂತ್ರಣ ಹಂಚಿದ್ದಾರೆ. ಈ ಬ್ಯೂಟಿಫುಲ್ ಪೇರ್ ಮದುವೆಗೆ ಕನ್ನಡದ ಸಿನಿ ತಾರೆಯರು ಮತ್ತು ರಾಜಕೀಯ ಗಣ್ಯರು ಬರೋ ನಿರೀಕ್ಷೆ ಇದೆ. 

ಇದನ್ನೂ ವೀಕ್ಷಿಸಿ:  ಬಾಲಿವುಡ್ ಫೈಯರ್ ‘ಜವಾನ್ ಸಾಂಗ್’ ರಿಲೀಸ್ ! ಲೇಡಿ ಸೂಪರ್ ಸ್ಟಾರ್ ಜತೆ ಕಿಂಗ್ ಖಾನ್ ರೊಮ್ಯಾನ್ಸ್ !

03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
Read more