ನಟ ದುನಿಯಾ ವಿಜಯ್ ಹುಟ್ಟು ಹಬ್ಬದ ಸೆಲೆಬ್ರೇಷನ್‌ನಲ್ಲಿದ್ದಾರೆ. ಜನವರಿ 20 ರಂದು ವಿಜಯ್ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ತಾರೆ. ಆನೇಕಲ್ ಬಳಿಯ ಕುಂಬಾರನಹಳ್ಳಿಯಲ್ಲಿ ವಿಜಯ್ ಹುಟ್ಟುಹಬ್ಬ ಸೆಲಬ್ರೇಷನ್ ನಡೆಯಲಿದೆ.
ಈ ಭಾರಿಯ ಹುಟ್ಟುಹಬ್ಬಕ್ಕೆ(Birthday) ನಟ ವಿಜಯ್ (Actor Vijay) ಮಹತ್ಕಾರ್ಯವೊಂದನ್ನ ಮಾಡಿದ್ದಾರೆ. ಜೈಲಿನಲ್ಲಿದ್ದ 6 ಜನ ಕೈದಿಗಳನ್ನ(Prisoners) ಬಿಡುಗಡೆ ಮಾಡಿಸಿದ್ದಾರೆ. ಹುಟ್ಟೂರು ಕುಂಬಾರನಹಳ್ಳಿಯಲ್ಲಿ ಕಳೆದ ಒಂದು ವಾರದಿಂದಿರೋ ವಿಜಯ್ ತನ್ನೂರನ್ನ ಒಂದು ರೌಂಡ್ ಹಾಕಿ ಊರ ಜನರ ಕಷ್ಟ ಸುಖ ವಿಚಾರಿಸಿದ್ರು. ಹೀಗಾಗಿ ಅಮಾಯಕರು ಜೈಲು(Jail) ಪಾಲಾಗಿದ್ದಾರೆಂದು ವಿಷಯ ತಿಳಿದ ವಿಜಯ್ 6 ಜನ ಕೈದಿಗಳನ್ನ ಬಿಡುಗಡೆ ಮಾಡಿಸೋ ವ್ಯವಸ್ಥೆ ಮಾಡಿಸ್ತೀನಿ ಅಂದಿದ್ರು. ಈಗ ವಿಜಯ್ ನಿಡಿದಂತೆ ನಡೆದಿದ್ದು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ 6 ಜನ ನಿರಪರಾಧಿ ಕೈದಿಗಳನ್ನ ಬಿಡಿಸಿಕೊಂಡು ಬಂದಿದ್ದಾರೆ. ನಟ ವಿಜಯ್ ಹುಟ್ಟುಹಬ್ಬದ ಹಿನ್ನೆಲೆ ಭೀಮ ಸಿನಿಮಾ(Bheema movie) ಟೀಸರ್ ರಿಲೀಸ್ ಆಗಿದೆ. ಭೀಮನ ಮೂರು ಹಾಡುಗಳು ಬಂದಿದ್ದು, ಹಿಟ್ ಆಗಿವೆ. ಇದೀಗ ಭೀಮನ ಫಸ್ಟ್ ಟೀಸರ್ ಹೊರ ಬಂದಿದ್ದು, ನಟ ವಿಜಯ್ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಭೀಮ ಸಿನಿಮಾ ಇದೇ ಫೆಬ್ರವರಿ ಕೊನೆಯಲ್ಲಿ ತೆರೆ ಮೇಲೆ ಬರೋ ನಿರೀಕ್ಷೆ ಇದೆ.
ಇದನ್ನೂ ವೀಕ್ಷಿಸಿ: ಶ್ರೀರಾಮಚಂದ್ರನ ಪಾತ್ರದಲ್ಲಿ ಮಿಂಚಿರೋ ಅಣ್ಣಾವ್ರು, ಎನ್‌ಟಿಆರ್, ಬಾಲಯ್ಯ !