ಕಾಶ್ಮೀರ್ ಫೈಲ್ಸ್ ಆಯ್ತು , ದಿ ಕೇರಳ ಸ್ಟೋರಿ ಆಯ್ತು: ಈಗ ಕರಾವಳಿ ಕಾಶ್ಮೀರಿ ಫೈಲ್ಸ್ ರಿಲೀಸ್‌ಗೆ ರೆಡಿ..!

Jun 13, 2023, 11:01 AM IST

ವಿಭಿನ್ನ ಮತ್ತು ಕುತೂಹಲದ ಕತೆ ಹೊಂದಿರೋ ಸಿನಿಮಾ ಅಂದ್ರೆ ಬೇರ. ಟೈಟಲ್ ಕೂಡ ಡಿಫರೆಂಟ್ ಆಗಿದೆ. ಕಿರುತೆರೆಯ ಸಾಕಷ್ಟು ಜನಪ್ರಿಯ ಧಾರಾವಾಹಿಗಳ ನಿರ್ದೇಶಕ ವಿನು ಬಳಂಜ "ಬೇರ" ಚಿತ್ರ ನಿರ್ದೇಶಿಸುವ ಮೂಲಕ ಹಿರಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ಎಸ್ಎಲ್ವಿ ಕಲರ್ಸ್ ಬ್ಯಾನರ್‌ನಲ್ಲಿ ದಿವಾಕರ ದಾಸ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ತುಳುವಿನಲ್ಲಿ ಬೇರ ಎಂದರೆ ಕನ್ನಡದಲ್ಲಿ ವ್ಯಾಪಾರ ಎಂದು ಅರ್ಥ. ಅಮಾಯಕರನ್ನು ಬಳಸಿಕೊಂಡು ಹೇಗೆ ನಾಯಕರಾಗುತ್ತಾರೆ ಹಾಗೂ ಯಾವ ತಾಯಿಯ ಮುಂದೆಯೂ ಮಕ್ಕಳು ಸಾಯಬಾರದು ಎಂಬುದೇ ಕಥಾಹಂದರ. ಈ ಚಿತ್ರದಲ್ಲಿ ನಾಯಕ, ನಾಯಕಿ ಅಂತ ಇಲ್ಲ. ಬರುವ ಎಲ್ಲಾ ಪಾತ್ರಗಳು ಮುಖ್ಯ ಪಾತ್ರಗಳಾಗಿರುತ್ತದೆ. ಸುಮನ್ ದತ್ತಣ್ಣ, ಯಶ್ ಶೆಟ್ಟಿ, ಹರ್ಷಿಕ ಮೊದಲಾದವರು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ವೀಕ್ಷಿಸಿ: ಆದಿಪುರುಷ್ ರಿಲೀಸ್‌ಗೂ ಮೊದಲೇ ಬಾಂಬ್ ಸಿಡಿಸಿದ ವೇಣು ಸ್ವಾಮಿ! : ಪ್ರಭಾಸ್‌ಗೆ ಟೈಮ್‌ ಚೆನ್ನಾಗಿಲ್ಲ ಎಂದ ಸ್ಟಾರ್ ಜ್ಯೋತಿಷಿ