ಬ್ಯಾಂಕಿನಲ್ಲಿ ರಾಬರ್ಸ್ ಲಾಕ್, ಟ್ವಿಸ್ಟ್ ಮೇಲ್ ಟ್ವಿಸ್ಟ್..! ಏನಾಗುತ್ತೆ ಬ್ಯಾಂಕ್ ಕಳ್ಳರ ಕಥೆ..?

ಬ್ಯಾಂಕಿನಲ್ಲಿ ರಾಬರ್ಸ್ ಲಾಕ್, ಟ್ವಿಸ್ಟ್ ಮೇಲ್ ಟ್ವಿಸ್ಟ್..! ಏನಾಗುತ್ತೆ ಬ್ಯಾಂಕ್ ಕಳ್ಳರ ಕಥೆ..?

Published : Oct 13, 2025, 12:42 PM IST

ಭಾಗ್ಯಲಕ್ಷ್ಮೀ ಬ್ಯಾಂಕಿಗೆ ಕನ್ನ ಹಾಕೋದಕ್ಕೆ ಬಂದ ರಾಬರ್ಸ್‌ಗಳಿಗೆ ಸಿಕ್ಕೋದೇ ಚಿಲ್ರೆ ಹಣ. ಸಾಲದಕ್ಕೆ ಅವರು ಬ್ಯಾಂಕ್​ನಲ್ಲೇ ಲಾಕ್ ಆಗ್ತಾರೆ. ಹೊರಗೆ ಪೊಲೀಸರು, ಮಿಲಿಟರಿ.. ಒಳಗೆ ಫುಲ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇರೋ ಸ್ಟೋರಿ…

ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ (Bank Of Baghyalakshmi) ಸಿನಿಮಾ ತನ್ನ ಡಿಫರೆಂಟ್ ಟೈಟಲ್ ನಿಂದಾನೇ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿರೋ ಸಿನಿಮಾ. ದೀಕ್ಷಿತ್ ಶೆಟ್ಟಿ-ಬೃಂದಾ ಆಚಾರ್ಯ ನಟನೆಯ ಈ ಸಿನಿಮಾ ತನ್ನ  ಟೀಸರ್ - ಸಾಂಗ್ಸ್​ನಿಂದ ಕುತೂಹಲ ಮೂಡಿಸಿದ್ದು ಇನ್ನೇನು ಪ್ರೇಕ್ಷಕರ ಎದುರು ಬರೋದಕ್ಕೆ ಸಜ್ಜಾಗಿದೆ.

ಯೆಸ್ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ತನ್ನ ವಿಭಿನ್ನ ಶಿರ್ಷಿಕೆಯಿಂದಾನೇ ಗಮನ ಸೆಳೆದಿರೋ ಸಿನಿಮಾ. ಈ ಹಿಂದೆ ರಿಲೀಸ್ ಆದ  ಟೀಸರ್ ನೋಡಿದ ಮೇಲೆ ಇದೊಂದು ಬ್ಯಾಂಕ್ ರಾಬರಿ ಕಥೆಯುಳ್ಳ ಸಿನಿಮಾ ಅನ್ನೋದು ಗೊತ್ತಾಗಿತ್ತು. ಆದ್ರೆ ಇಲ್ಲಿ ಬರೀ ರಾಬರಿ ಕಥೆಯಿಲ್ಲ ಌಕ್ಷನ್ ಥ್ರಿಲ್ ಲವ್ ಡ್ರಾಮಾ ಎಲ್ಲಾ ಇದೆ.

ದಿಯಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಈ ಚಿತ್ರದ ನಾಯಕನಾದ್ರೆ, ಬೃಂದಾ ಆಚಾರ್ಯ ಚಿತ್ರದ ನಾಯಕಿ. ರಂಗಿತರಂಗ ಮತ್ತು ಅವನೇ ಶ್ರೀಮನ್ನಾರಾಯಣನಂತಹಾ ಯಶಸ್ವಿ ಚಿತ್ರಗಳನ್ನ ನಿರ್ಮಾಣ ಮಾಡಿರೋ ಎಚ್.ಕೆ. ಪ್ರಕಾಶ್ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸಿಂಪಲ್ ಸುನಿ ಜೊತೆ ಕೆಲಸ ಮಾಡಿ ಅನುಭವವಿರೋ ಅಭಿಷೇಕ್ ಚಿತ್ರದ ಸೂತ್ರಧಾರ.

ಭಾಗ್ಯಲಕ್ಷ್ಮೀ ಬ್ಯಾಂಕಿಗೆ ಕನ್ನ ಹಾಕೋದಕ್ಕೆ ಬಂದ ರಾಬರ್ಸ್​​ಗೆ ಸಿಕ್ಕೋದೇ ಚಿಲ್ರೆ ಹಣ. ಸಾಲದಕ್ಕೆ ಅವರು ಬ್ಯಾಂಕ್​ನಲ್ಲೇ ಲಾಕ್ ಆಗ್ತಾರೆ. ಹೊರಗೆ ಪೊಲೀಸರು, ಮಿಲಿಟರಿ.. ಒಳಗೆ ಫುಲ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇರೋ ಸ್ಟೋರಿ.. ಹೀಗೆ ಸಾಗುತ್ತೆ ಭಾಗ್ಯಲಕ್ಷ್ಮೀ ಬ್ಯಾಂಕ್ ಕಹಾನಿ.

ದೀಕ್ಷಿತ್ ಶೆಟ್ಟಿ , ಬೃಂದಾ  ಆಚಾರ್ಯ ಜೊತೆಗೆ ಸಾಧು ಕೋಕಿಲ, ಉಷಾ ಭಂಡಾರಿ, ಗೋಪಾಲಕೃಷ್ಣ ದೇಶಪಾಂಡೆ, ಭರತ್, ಅಶ್ವಿನ್ ರಾವ್ ಸೇರಿದಂತೆ ಚಿತ್ರದಲ್ಲಿ ಕಲಾವಿದರ ದಂಡೇ ಇದೆ.  ಜ್ಯೂಡಾ ಸ್ಯಾಂಡಿ ಸಿನಿಮಾಗೆ ಮ್ಯೂಸಿಕ್ ಮಾಡಿದ್ದಾರೆ. ಚಿತ್ರದ ಹಾಡುಗಳು ಕೂಡ ಸದ್ದು ಮಾಡ್ತಾ ಇವೆ.. ನವೆಂಬರ್ ತಿಂಗಳಲ್ಲಿ ಸಿನಿಮಾ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಬ್ಯಾಂಕ್​ಗೆ  ಕನ್ನ ಹಾಕೋ ಕಹಾನಿ ಇರೋ ಈ ಸಿನಿಮಾ ಪ್ರೇಕ್ಷಕರ ಮನಸಿಗೂ  ಕನ್ನ ಹಾಕೋ ಉತ್ಸಾಹಸಲ್ಲಿದೆ. 

ಹೆಚ್ಚಿನ ಮಾಹಿತಿಗೆ ವಿಡಿಯೋ ನೊಡಿ…

03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
Read more