ಹೆಡ್‌ಬುಷ್‌ ಚಿತ್ರಕ್ಕೆ ಶುರುವಾಗಿದೆ ಹೊಸ ತಲೆನೋವು: ಸಿನಿಮಾ ನಿಲ್ಲಿಸುವಂತೆ ಜೈರಾಜ್ ಪುತ್ರ ಅಜಿತ್ ದೂರು!

ಹೆಡ್‌ಬುಷ್‌ ಚಿತ್ರಕ್ಕೆ ಶುರುವಾಗಿದೆ ಹೊಸ ತಲೆನೋವು: ಸಿನಿಮಾ ನಿಲ್ಲಿಸುವಂತೆ ಜೈರಾಜ್ ಪುತ್ರ ಅಜಿತ್ ದೂರು!

Published : May 06, 2022, 09:11 PM IST

ಹೆಡ್‌ಬುಷ್‌ಗೆ ದೊಡ್ಡ ಹೆಡೇಕ್ ಶುರುವಾಗಿದೆ. ಯಾಕಂದ್ರೆ ಜೈರಾಜ್ ಬಗ್ಗೆ ಸಿನಿಮಾದಲ್ಲಿ ಏನು ತೋರಿಸ್ತಾರೆ ಅಂತ ಗೊತ್ತಿಲ್ಲ. ನಮ್ಮ ಬಳಿ ಅನುಮತಿ ಪಡೆಯದೇ ಸಿನಿಮಾ ಮಾಡ್ತಿದ್ದಾರೆ ಅಂತ ಜೈರಾಜ್ ಪುತ್ರ ಅಜಿತ್ ಜೈರಾಜ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ದಾಖಲಿಸಿದ್ದಾರೆ. 

ಸ್ಯಾಂಡಲ್‌ವುಡ್‌ನ ನಟ ಭಯಂಕರ ಡಾಲಿ ಧನಂಜಯ್ ಹೆಡ್ಬುಷ್ ಸಿನಿಮಾದ ಮೇಲೆ ಭಾರೀ ನಿರೀಕ್ಷೆ ಇದೆ. ಯಾಕಂದ್ರೆ ಹೆಡ್‌ಬುಷ್‌ ಬೆಂಗಳೂರು ಭೂಗತ ಲೋಕದ ಮೊದಲ ಡಾನ್ ಅಂತ ಕರೆಸಿಕೊಳ್ಳೊ ಜೈರಾಜ್ ಅವರ ಜೀವನ ಕಥೆಯ ಚಿತ್ರ ಅಂತ ಚಿತ್ರತಂಡ ಹೇಳಿಕೊಂಡಿದೆ. ಆದರೆ ಈಗ ಈ ಹೆಡ್‌ಬುಷ್‌ಗೆ ದೊಡ್ಡ ಹೆಡೇಕ್ ಶುರುವಾಗಿದೆ. ಯಾಕಂದ್ರೆ ಜೈರಾಜ್ ಬಗ್ಗೆ ಸಿನಿಮಾದಲ್ಲಿ ಏನು ತೋರಿಸ್ತಾರೆ ಅಂತ ಗೊತ್ತಿಲ್ಲ. ನಮ್ಮ ಬಳಿ ಅನುಮತಿ ಪಡೆಯದೇ ಸಿನಿಮಾ ಮಾಡ್ತಿದ್ದಾರೆ ಅಂತ ಜೈರಾಜ್ ಪುತ್ರ ಅಜಿತ್ ಜೈರಾಜ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ದಾಖಲಿಸಿದ್ದಾರೆ. 

ಹೆಡ್‌ಬುಷ್‌ ಸಿನಿಮಾಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದು ಅಗ್ನಿ ಶ್ರೀಧರ್. ಅಗ್ನಿ ಶ್ರೀಧರ್ ಅವರೇ ಬರೆದಿರೋ ದಾದಾಗಿರಿಯ ದಿನಗಳು ಅನ್ನೋ ಪುಸ್ತಕವನ್ನ ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಜೈರಾಜ್ ಪಾತ್ರದಲ್ಲಿ ಡಾಲಿ ಧನಂಜಯ್ ನಟಿಸುತ್ತಿರೋದಾಗಿ ಅನೌನ್ಸ್ ಮಾಡಿದ್ದು, ಸಿನಿಮಾವನ್ನ ಧನಂಜಯ್ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದೆ. ಆದ್ರೆ ಇಷ್ಟು ದಿನ ಸುಮ್ಮನಿದ್ದು ಈಗ ವಿವಾದ ಮಾಡುತ್ತಿರೋದು ಯಾಕೆ ಅಂತ ಗೊತ್ತಿಲ್ಲ. ಈ ವಿಚಾರವಾಗಿ ಮೆ 13ಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದು ಮಾತಾಡ್ತೇನೆ ಎಂದಿದ್ದಾರೆ ಟಗರು ವಿಲನ್ ಡಾಲಿ ಧನಂಜಯ್. 

ಊಹಾಪೋಹ ಇಟ್ಕೊಂಡು ಅಜಿತ್ ಜಯರಾಜ್ ಮಾತನಾಬಾರದು ಸಾಕಷ್ಟು ಹಣ ಹಾಕಿದ್ದೀನಿ: ಧನಂಜಯ್

ಹೆಡ್‌ಬುಷ್‌ ಸಿನಿಮಾ ಶುರುವಾದಾಗ ಡಾಲಿ ಧನಂಜಯ್ರನ್ನ ಭೇಟಿಯಾಗಿದ್ದ ಜೈರಾಯ್ ಪುತ್ರ ಅಜಿತ್ ಸಿನಿಮಾವನ್ನ ಚೆನ್ನಾಗಿ ಮಾಡಿ ಅಂದಿದ್ರಂತೆ. ಅಷ್ಟೆ ಅಲ್ಲ ಡಾಲಿ ಧನಂಜಯ್ ಕುರಿತು ಅಜಿತ್ ಒಂದು ಪೋಸ್ಟ್ ಹಾಕಿದ್ರು. ಆ ಪೋಸ್ಟ್ನಲ್ಲಿ ಧನಂಜಯ್ ನನ್ನ ಬ್ರದರ್ ಇದ್ದ ಹಾಗೆ ಅಂತಿದ್ರು. ಆದ್ರೆ ಈಗ ದಿಢೀರ್ ಅಂತ ಅಪ್ಪನ ಕುರಿತು ಯಾರು ಸಿನಿಮಾ ಮಾಡಬೇಡಿ ಹಾಗೇನಾದ್ರು ಮಾಡಿದ್ರೆ ಕಾನೂನು ಹೊರಾಟಕ್ಕೆ ಹೋಗುತ್ತೇನೆ ಅಂತ ಹೆಡ್‌ಬುಷ್‌ ಚಿತ್ರತಂಡದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದು ಈಗ ಡಾಲಿ ಟೀಂಗೆ ಹೊಸ ತಲೆ ನೋವಿಗೆ ಕಾರಣ ಆಗಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
Read more