ನಟಿ ಸಪ್ತಮಿ ಗೌಡ ಹಾಗೂ ಅವರ ತಂದೆ ಉಮೇಶ್ 'ಸುವರ್ಣ ಪಾರ್ಟಿ'ಯಲ್ಲಿ ಭಾಗಿಯಾಗಿ ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ.
'ಆಡಿಸಿ ನೋಡು ಬೀಳಿಸಿ ನೋಡು' ಹಾಗೂ 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ' ಅಪ್ಪನ ನೆಚ್ಚಿನ ಹಾಡುಗಳು ಎಂದು ನಟಿ ಸಪ್ತಮಿ ಗೌಡ ಹೇಳಿದರು. ಹಾಗೂ ಅವರ ತಂದೆ ಮಾತನಾಡಿ, ಸಪ್ತಮಿ ಡಾಕ್ಟರ್ ಆಗಬೇಕು ಅಂದು ಕೊಂಡಿದ್ವಿ. ಅವಳು ಇಂಜಿನಿಯರಿಂಗ್ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದು ನನಗೆ ಶಾಕ್ ಆಯಿತು ಎಂದು ಹೇಳಿದರು. ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಚಾನ್ಸ್ ಸಿಗದಿದ್ದರೆ ಸ್ಟಡಿಯಲ್ಲೇ ಮುಂದು ಹೋಗುತ್ತಿದ್ದೆ, ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವುದು ನನಗೆ ತುಂಬಾ ಖುಷಿ ಕೊಟ್ಟಿದೆ ಎಂದು ಸಪ್ತಮಿ ಹೇಳಿದರು.