Jul 9, 2023, 1:43 PM IST
ನಮ್ ಪದ್ಮಾವತಿ ಇತ್ತೀಚೆಗೆ ಎಲ್ಲೇ ಹೋದ್ರೂ ಕಾಣಿಸುತ್ತಿದ್ದದ್ದು ಸೀರೆಯಲ್ಲಿ. ಇದನ್ನ ನೋಡಿ ನಮ್ ಮಂದಿ ಹೆಣ್ಮಕ್ಳು ಇದ್ರೆ ಹಿಂಗ್ ಇರಬೇಕಪ್ಪ. ನೋಡಿ ಸೇರೆಯಲ್ಲಿ ರಮ್ಯಾ(Ramya) ಎಷ್ಟ್ ಚಂದ ಕಾಣ್ತಾರೆ ಅಲ್ವಾ ಅಂತೆಲ್ಲ ಬಗೆ ಬಗೆ ಕಮೆಂಟ್ ಮಾಡುತ್ತಿದ್ರು. ಆದ್ರೆ ರಮ್ಯಾರನ್ನ ಹಳೇ ಚಾರ್ಮ್ನಲ್ಲೇ ನೋಡೋಕೆ ಕಾಯುತ್ತಿದ್ದವರು ನೀವು ಸಿನಿಮಾಗೂ(Cinema) ಬಂದಾಗಿದೆ ಹಳೇ ವೈಭವನ್ನ ಮತ್ತೆ ತೋರಿಸಿ ಅಂತಲೂ ಕೇಳುತ್ತಿದ್ರು. ಈಗ ಅವರ ಆಸೆಯಂತೆ ಆಗಿದೆ. ಇಷ್ಟು ದಿನ ಸೇರೆಯುಟ್ಟು ಸಂಭ್ರಮಿಸುತ್ತಿದ್ದ ಮೋಹಕ ತಾರೆ ದಿಢೀರ್ ಅಂತ ಶಾರ್ಟ್ ಶರ್ಟ್(short shirt) ತೊಟ್ಟು ಬಂದಿದ್ದಾರೆ. ರಮ್ಯಾರ ನಯಾವತಾರದ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.ಕ್ವೀನ್ ರಮ್ಯಾ ತಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಡಾಲಿಯ ‘ಉತ್ತರಕಾಂಡ’ ಸಿನಿಮಾದಲ್ಲಿ ರಮ್ಯಾ ನಾಯಕಿ ಕೂಡ. ಆದ್ರೆ ತನ್ನ ಫಿಟ್ನೆಸ್ ಗಾಗಿ ಸ್ವಲ್ಪ ಸ್ಲಿಮ್ ಆಗೋಕೆ ಅಂತ ರಮ್ಯಾ ಯುರೋಪ್ಗೆ ಹಾರಿದ್ದು, ಟ್ರೀಟ್ಮೆಂಟ್ನಲ್ಲಿದ್ದಾರೆ. ವಿದೇಶಕ್ಕೆ ಹೋಗುವಾಗ ಊದಿಕೊಂಡಿದ್ದ ಪದ್ಮಾವತಿ ಈಗ ತೂಕ ಇಳಿಸಿಕೊಂಡು ಝೀರೋ ಫಿಗರ್ ತರ ಕಾಣಿಸುತ್ತಿದ್ದಾರೆ. ರಮ್ಯಾ ಫೋಟೋದಲ್ಲಿ ಓರ್ವ ಮಹಿಳೆ ಇದ್ದು, ಈ ಫೋಟೋವನ್ನ ರಮ್ಯಾ ಮಿಸ್ ಆಗಿ ಸೋಷಿಯಲ್ ಮೀಡಿಯಾಗೆ ಹಾಕಿದ್ರಾ.? ಅಥವ ತಾನು ಹೇಗೆ ಬದಲಾಗಿದ್ದೇನೆ ಅಂತ ಸಣ್ಣದೊಂದು ಕಿಕ್ ಕೊಡೋಕೆ ಹಾಕಿದ್ರಾ ಗೊತ್ತಿಲ್ಲ. ಭಟ್ ರಮ್ಯಾ ಫೋಟೋ ಮಾತ್ರ ಈಗ ಸ್ಯಾಂಡ್ವುಡ್ನಲ್ಲಿ ಸೆನ್ಸೇಷನ್ ಸೃಷ್ಟಿದಿದೆ.
ಇದನ್ನೂ ವೀಕ್ಷಿಸಿ: ಜಪಾನ್‌ನಲ್ಲೂ ಕೆಜಿಎಫ್, ಕೆಜಿಎಫ್-2 ಮೇನಿಯಾ: ಆ ಭಾಷೆಯಲ್ಲಿ ರಾಕಿ ಹೇಳಿದ್ದೇನು ಗೊತ್ತಾ..?