‘ದಿ ಕೇರಳ ಸ್ಟೋರಿ’ ನಟಿ ಮತಾಂತರಗೊಂಡರಾ?: ಅದಾ ಶರ್ಮಾ ಫೋಟೋ ಹಿಂದಿನ ಅಸಲಿಯತ್ತೇನು ?

Jun 30, 2023, 3:29 PM IST

'ದಿ ಕೇರಳ ಸ್ಟೋರಿ' ಸಿನಿಮಾದಲ್ಲಿ ಮತಾಂತರ ಆಗೋದು ತಪ್ಪು ಎಂದು ಹೇಳಿದ ನಟಿ ಅದಾ ಶರ್ಮಾ, ಇದೀಗ ಅವರೇ ಮತಾಂತರಕೊಂಡರಾ ಎಂಬ ಪ್ರಶ್ನೆ ಕಾಡತೊಡಗಿದೆ. ಇದಕ್ಕೆ ಕಾರಣ ಅವರ ಇತ್ತೀಚಿನ ಫೋಟೋ. ನಟಿ ಕ್ರಿಶ್ಚಿಯನ್ ಬ್ರೈಡ್ ಆಗಿ ಮಿಂಚಿದ್ದು,  ಸೂಪರ್ ಕ್ಯೂಟ್ ಆಗಿ ಕಾಣಿಸಿದ್ದಾರೆ.ಇದನ್ನು ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ. ಅಲ್ಲದೇ ಕ್ರಿಶ್ಚಿಯನ್ ಹುಡುಗನ ಮದುವೆಯಾಗಿ ಮತಾಂತರವಾದ್ರಾ ಎಂದು ಕೇಳುತ್ತಿದ್ದಾರೆ.ಆದ್ರೆ ನಿಜ ಏನಪ್ಪಾ ಅಂದ್ರೆ, ನಟಿ ಈ ಫೋಟೋಶೂಟ್‌ನನ್ನು ಒಂದು ಮ್ಯಾಗಜೀನ್‌ಗಾಗಿ ಮಾಡಿಸಿದ್ದಾರೆ. ಅದಕ್ಕಾಗಿಯೇ ನಟಿ ಕ್ರಿಶ್ಚಿಯನ್ ವಧುವಿನಂತೆ ರೆಡಿಯಾಗಿದ್ದರು. ಇದರಲ್ಲಿ ಬಿಳಿ ಬಣ್ಣದ ವೆಡ್ಡಿಂಗ್ ಡ್ರೆಸ್‌ನಲ್ಲಿ ಅದಾ ಶರ್ಮಾ ಅವರು ಗೊಂಬೆಯಂತೆಯೇ ಕಾಣಿಸಿದ್ದಾರೆ. 

ಇದನ್ನೂ ವೀಕ್ಷಿಸಿ: 1000 ಕೋಟಿ ಕಲೆಕ್ಷನ್ ಮಾಡೋ ಸಿನಿಮಾಗಳ ಲಿಸ್ಟ್ ಕೊಟ್ಟ ಪ್ರೇಕ್ಷಕ: ಈ ವರ್ಷ ಇತಿಹಾಸ ಬರೆಯೋ ಚಿತ್ರಗಳು ಯಾವುವು ?