
ಭಾರತೀಯ ಚಿತ್ರರಂಗವನ್ನು ಕನ್ನಡದತ್ತ ತಿರುಗಿ ನೋಡುವಂತೆ ಮಾಡಿರುವವ ನಟ ರಾಕಿಂಗ್ ಸ್ಟಾರ್ ಯಶ್ ಕೂಡ ಒಬ್ಬರು. ಅವರ ತಾಯಿ ಪುಷ್ಪ ಅರುಣ್ ಕುಮಾರ್ ತಮ್ಮದೇ ಪಿಎ ಪ್ರೊಡಕ್ಷನ್ಸ್ ಸ್ಥಾಪಿಸಿ, ಈ ನಿರ್ಮಾಣ ಸಂಸ್ಥೆಯಡಿ ಕೊತ್ತಲವಾಡಿ ಎಂಬ ಸಿನಿಮಾ ನಿರ್ಮಿಸಿದ್ದಾರೆ.
ಇದೀಗ ಈ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಆಗಸ್ಟ್ 1ಕ್ಕೆ ಯಶ್ ತಾಯಿ ಪುಷ್ಪ ಅವರು ನಿರ್ಮಿಸಿರುವ ಚೊಚ್ಚಲ ಚಿತ್ರ ಕೊತ್ತಲವಾಡಿ ಥಿಯೇಟರ್ ಗೆ ಎಂಟ್ರಿ ಕೊಡಲಿದೆ. ಯುವ ಪ್ರತಿಭೆ ಶ್ರೀರಾಜ್ ಅವರ ನಿರ್ದೇಶನ ಮೊದಲ ಚಿತ್ರ ಇದಾಗಿದ್ದು, ಪೃಥ್ವಿ ಅಂಬರ್ ನಾಯಕನಾಗಿ ಹಾಗೂ ಕಿರುತೆರೆ ನಟಿ ಕಾವ್ಯಾ ಶೈವ ನಾಯಕಿಯಾಗಿ ನಟಿಸುತ್ತಿದ್ದಾರೆ.