May 4, 2023, 6:34 PM IST
ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್. 72 ವರ್ಷ ವಯಸ್ಸಿನ ರಜನಿಕಾಂತ್ ಹೀರೋ ಆಗುತ್ತಿದ್ದಾರೆ ಎಂದರೆ ಅವರ ಮೇಲೆ ಮಿನಿಮಮ್ 300 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಾರೆ. ರಜನಿಕಾಂತ್ ಪ್ರತಿದಿನ ಬೆಳಗ್ಗೆ ಮಿಸ್ ಮಾಡದೇ ಯೋಗ ಮಾಡುತ್ತಾರೆ. ಧ್ಯಾನ ಮತ್ತು ಪ್ರಾಣಾಯಾಮವನ್ನು ಸಹ ಅವರು ಮಾಡುತ್ತಾರಂತೆ. ಅಲ್ಲದೇ ಏಷ್ಯಾ ಖಂಡದಲ್ಲಿಯೇ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಸಹ ಆಗಿದ್ದಾರೆ. ಸಾಮಾನ್ಯ ಕಂಡೆಕ್ಟರ್ ಆಗಿದ್ದ ವ್ಯಕ್ತಿ ಹೀಗೆ ಸೂಪರ್ ಸ್ಟಾರ್ ಆಗಿರುವುದು ಸಾಮಾನ್ಯ ವಿಚಾರ ಅಲ್ಲವೇ ಅಲ್ಲ. ಇಂತಹ ರಜನಿಕಾಂತ್‌ಗೆ ತಾಯಿ ಭೈರವಿದೇವಿ ಆಶೀರ್ವಾದ ಇದೆ ಎಂದ್ರೆ ಆಶ್ಚರ್ಯವೆನಿಸುತ್ತದೆ. ಸ್ವತಃ ರಜನಿಕಾಂತ್ ತಾಯಿ ಪವಾಡದ ಬಗ್ಗೆ ಹೇಳಿಕೊಂಡಿದ್ದಾರೆ.
ಇದನ್ನೂ ವೀಕ್ಷಿಸಿ: ಮಂಡ್ಯದಲ್ಲಿ ಮತ್ತೆ ಶುರುವಾಯ್ತು ರಮ್ಯಾ ಚೈತ್ರ ಕಾಲ: ಎಲೆಕ್ಷನ್ ಟೆನ್ಷನ್ ಮಧ್ಯೆ ವರ ಹುಡುಕಾಟದಲ್ಲಿ ಪದ್ಮಾವತಿ !