Jul 16, 2024, 9:19 AM IST
ಕನ್ನಡ ಚಿತ್ರರಂದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಪ್ರಕಾಶ್ ರಾಜ್ ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರು. ಇಂತಹ ಪ್ರಕಾಶ್ ರಾಜ್ ಅಭಿನಯಕ್ಕೆ ಬಂದಿದ್ದು ಥಿಯೇಟರ್(Theater) ಆರ್ಟಿಸ್ಟ್ ಆಗಿ. ರಂಗಭೂಮಿ ಹಿನ್ನೆಲೆ ಪ್ರಕಾಶ್ ರಾಜ್ (Prakash Raj) ಈಗ ಅದೇ ರಂಗಭೂಮಿಗೆ ಏನಾದ್ರು ಒಂದು ಕೊಡುಗೆ ಕೊಡಬೇಕು ಅಂತ ಒಂದು ವರ್ಷದ ಹಿಂದೆ ಮೈಸೂರಿನ ಶ್ರೀರಂಗ ಪಟ್ಟಣದಲ್ಲಿ ನಿರ್ದಿಗಂತ ರಂಗ ಶಾಲೆ(Nirdigantha Theatre Centre) ಶುರು ಮಾಡಿದ್ರು. ಇದೀಗ ನಿರ್ದಿಗಂತ ರಂಗ ಶಾಲೆ ಬೆಳೆದು ನಿಂತಿದೆ. ಈ ಶಾಲೆಯಲ್ಲಿ ಅಭಿನಯದಲ್ಲಿ ಆಸಕ್ತಿ ಇದ್ದವರು ಮಾತ್ರವಲ್ಲ ಪ್ರಕಾಶ್ ರಾಜ್ ಅವರ ಸಂಸಾರ ಕೂಡ ಆಟ ಪಾಠದಲ್ಲಿ ಭಾಗಿ ಆಗುತ್ತಿದೆ. ಪ್ರಕಾಶ್ ರಾಜ್ ನಿರ್ಧಿಗಂತ ಕಟ್ಟಿ ಒಂದು ವರ್ಷ ಆಗಿದೆ. ಹೀಗಾಗಿ ಈ ನಟನಾ ಶಾಲೆಯ ಒಂದು ವರ್ಷದ ಸ್ಮರಣಿಗೆ ಬಿಡುಗಡೆ ಕಾರ್ಯಕ್ರಮ ನಡೆದಿದೆ. ಈ ಕಾರ್ಯಕ್ರಮದಲ್ಲಿ ಪ್ರಕಾಶ್ ರಾಜ್ ಪತ್ನಿ ಪೋನಿ ಪ್ರಕಾಶ್ ರಾಜ್ ಕೂಡ ಭಾಗಿ ಆಗಿದ್ರು. ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತಿಗೆ ಸಿಕ್ಕ ಪೋನಿ ಪ್ರಕಾಶ್ ರಾಜ್, ತನ್ನ ಹಾಗು ಪ್ರಕಾಶ್ ಪ್ರೀತಿ, ಮದುವೆ, ಹಾಗೂ ನಿರ್ಧಿಗಂತದ ಬಗ್ಗೆಯೂ ಮಾತನಾಡಿದ್ದಾರೆ. ನಿರ್ಧಿಗಂತ ಒಂದು ವರ್ಷದ ಅದ್ಧೂರಿ ಆಚರಣೆಯ ಮೆರುಗು ಹೆಚ್ಚಿಸಿದ್ದು ಪ್ರಕಾಶ್ ರಾಜ್ ಮುದ್ದಿನ ಮಗ ವೇದಾಂತ್. ಮೂರನೇ ತರಗತಿ ಓದುತ್ತಿರೋ ವೇದಾಂತ್ ನಲ್ಲೂ ಒಬ್ಬ ಕಲಾವಿಧನಿದ್ದಾನೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಅಂತಾರಲ್ಲ ಹಾಗೆ ಪ್ರಕಾಶ್ ರಾಜ್ ಮಗ ಕೂಡ ನಿರ್ದಿಗಂತ ರಂಗ ಶಾಲೆಯಲ್ಲೇ ನಟನೆ ಕಲಿಯುತ್ತಿದ್ದಾನೆ. ಅಭಿನಯದಲ್ಲಿ ಅಪ್ಪನ್ನೇ ಮೀರಿಸೋ ಹಾಗೆ ನಟಿಸುತ್ತಾನೆ ಈ ಜ್ಯೂ, ಪ್ರಕಾಶ್ ರಾಜ್ ವೇದಾಂತ್.. ಇವನ ನಟನೆ ಹೇಗಿದೆ ಅಂತ ನೋಡ್ಬೇಕಾ. ಈ ಆಮೆ ಕತೆಯ ಚಿಕ್ಕದೊಂದು ತುಣುಕು ನೋಡಿ ಸಾಕು.ಪ್ರಕಾಶ್ ರಾಜ್ ವೈಯಕ್ತಿ ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡಿದ್ದಾರೆ. 1994 ರಲ್ಲಿ ಪ್ರಕಾಶ್ ರಾಜ್, ಲಲಿತಾ ಕುಮಾರಿ ಅನ್ನುವವರನ್ನ ವಿವಾಹವಾದ್ರು. ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಲಲಿತಾ ಜೊತೆ ಪ್ರಕಾಶ್ ರಾಜ್ 15 ವರ್ಷಗಳ ಕಾಲ ಸಂಸಾರ ಮಾಡಿದ್ರು. ಆದ್ರೆ 2009 ರಲ್ಲಿ ಇಬ್ಬರೂ ವಿಚ್ಛೇದನ ಪಡೆದ್ರು. ಕೊನೆಗೆ ಬಾಲಿವುಡ್ ಕೊರಿಯೋಗ್ರಫರ್ ಪೊನಿ ವರ್ಮ ಪ್ರೀತಿಯಲ್ಲಿ ಜೊತೆ ಪ್ರಕಾಶ್ ರಾಜ್ ಬಂಧಿಯಾದ್ರು. ಇಬ್ಬರು ಮದುವೆ ಆದ್ರು, ಪ್ರಕಾಶ್ ಮತ್ತು ಪೋನಿ ದಂಪತಿಯ ಮಗನೇ ಈ ವೇದಾಂತ್.
ಇದನ್ನೂ ವೀಕ್ಷಿಸಿ: ಅಂಬಾನಿ ಮದುವೆಯಲ್ಲಿ ರಾಕಿಭಾಯ್ ಹವಾ ನೋಡಿ..! ಜವಾನ್ ಡೈರೆಕ್ಟರ್ ಅಟ್ಲಿ ಜೊತೆ ಸಿನಿಮಾ ಫಿಕ್ಸ್ ಆಯ್ತಾ..?