ಮಾರ್ಟಿನ್ ಅಡ್ಡಾದಿಂದ ಎದ್ದು ಬಂದ ಧ್ರುವ ಸರ್ಜಾ: 3 ವರ್ಷದಿಂದ ಆಗುತ್ತಿದ್ದ ಸಿನಿಮಾ ಕೆಲಸ ಕಂಪ್ಲೀಟ್!

ಮಾರ್ಟಿನ್ ಅಡ್ಡಾದಿಂದ ಎದ್ದು ಬಂದ ಧ್ರುವ ಸರ್ಜಾ: 3 ವರ್ಷದಿಂದ ಆಗುತ್ತಿದ್ದ ಸಿನಿಮಾ ಕೆಲಸ ಕಂಪ್ಲೀಟ್!

Published : Mar 20, 2024, 01:57 PM IST

ಮಾರ್ಟಿನ್. ಕೇಡಿ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಸಿನಿಮಾ. ಮಾರ್ಟಿನ್ ಶೂಟಿಂಗ್ ಶುರುವಾಗಿ ಹತ್ರತ್ರ ಮೂರು ವರ್ಷಗಳು ಆಗಿತ್ತು. ಹೀಗಾಗಿ ಇನ್ನು ಶೂಟಿಂಗ್ ಮುಗಿದಿಲ್ವಲ್ಲ ಶಿವ ಅನ್ನುತ್ತಿದ್ರು ಧ್ರುವ ಫ್ಯಾನ್ಸ್. ಆದ್ರು ಮಾರ್ಟಿನ್ ಮೇಲಿನ ಕ್ರೇಜ್ ಕಮ್ಮಿಯಾಗಿಲ್ಲ. 

ಮಾರ್ಟಿನ್.. ಕೇಡಿ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಸಿನಿಮಾ. ಮಾರ್ಟಿನ್ ಶೂಟಿಂಗ್ ಶುರುವಾಗಿ ಹತ್ರತ್ರ ಮೂರು ವರ್ಷಗಳು ಆಗಿತ್ತು. ಹೀಗಾಗಿ ಇನ್ನು ಶೂಟಿಂಗ್ ಮುಗಿದಿಲ್ವಲ್ಲ ಶಿವ ಅನ್ನುತ್ತಿದ್ರು ಧ್ರುವ ಫ್ಯಾನ್ಸ್. ಆದ್ರು ಮಾರ್ಟಿನ್ ಮೇಲಿನ ಕ್ರೇಜ್ ಕಮ್ಮಿಯಾಗಿಲ್ಲ. ಧ್ರುವ ಸರ್ಜಾ ಇತ್ತೀಚೆಗಷ್ಟೆ  ಮಾರ್ಟಿನ್ ಶೂಟಿಂಗ್ ಅಡ್ಡದಿಂದ ಎದ್ದು ಬಂದಿದ್ರು. ಮಾರ್ಟಿನ್ ಶೂಟಿಂಗ್​​ಗೆ ಕುಂಬಳಕಾಯಿ ಒಡೆದಿದ್ರು. ಹೌದು ..ಅಂತು ಇಂತೂ ಮಾರ್ಟಿನ್ ಚಿತ್ರದ ಶೂಟಿಂಗ್ ಮುಗಿದಿದೆ. ಇನ್ನೇನಿದ್ರು ಪೋಸ್ಟ್ ಪ್ರೊಡಕ್ಷನ್ ಕೆಲಸ ಅಂತ ಚಿತ್ರತಂಡ ಹೇಳಿತ್ತು. ನೆಕ್ಸ್ಟ್​ ಡೇ ಮಾರ್ಟಿನ್​​​ಗಾಗಿ ಮಾತಿನ ಮನೆ ಸೇರಿಕೊಂಡಿದ್ರು ಧ್ರುವ ಸರ್ಜಾ. ಈಗ ಮಾತಿನ ಕೆಲಸವೂ ಕಂಪ್ಲೀಟ್ ಆಗಿದೆ. ಅರ್ಥಾತ್ ಮಾರ್ಟಿನ್ ಡಬ್ಬಿಂಗ್​ ವರ್ಕ್​ ಮುಗಿದಿದೆ. ಹೀಗಾಗಿ ಮಾರ್ಟಿನ್ ರಿಲೀಸ್​ ಡೇಟ್ ಫಿಕ್ಸ್ ಮಾಡೋದೊಂದೇ ಭಾಕಿ. 

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗು ಡೈರೆಕ್ಟರ್ ಎ.ಪಿ ಅರ್ಜುನ್ ಕಾಂಬಿನೇಷನ್ ಸಿನಿಮಾ ಮಾರ್ಟಿನ್. ಧ್ರುವನಿಗೆ ಇಂಡಸ್ಟ್ರಿಗೆ ಪರಿಚಯಿಸಿದ ಡೈರೆಕ್ಟರ್ ಎಪಿ ಅರ್ಜುನ್. ಅಷ್ಟೆ ಅಲ್ಲ ಅದ್ಧೂರಿ ಅನ್ನೋ ಮೊದಲ ಸಿನಿಮಾದಲ್ಲೇ ಧ್ರುವಾಗೆ 100 ಡೇಸ್ ಸಿನಿಮಾ ಕೊಟ್ಟ ಡೈರೆಕ್ಟರ್ ಇವರು. ಈಗ ಸಕೆಂಡ್​ ಟೈಂ ಧ್ರುವ ಎಪಿ ಅರ್ಜುನ್ ಜೊತೆಯಾಗಿದ್ದಾರೆ. ಈ ಕಾಂಬೋದ ಮಾರ್ಟಿನ್ ಮೇಲೆ ಭಾರಿ ನಿರೀಕ್ಷೆ ಇದೆ. ಹೀಗಾಗಿ ಈ ಸಿನಿಮಾ ರಿಲೀಸ್ ಯಾವಾಗ ಅಂದ್ರೆ ಸಧ್ಯಕ್ಕೆ ಚಿತ್ರತಂಡ ಹೇಳುತ್ತಿರೋದು ಲೋಕಸಭೆ ಎಲೆಕ್ಷನ್ ಮುಗಿದ ಮೇಲೆ ಅನ್ನುತ್ತಿದ್ದಾರೆ. ಮಾರ್ಟಿನ್​ ಪ್ಯಾನ್ ಇಂಡಿಯಾ ಮೂವಿ. ಈ ಸಿನಿಮಾವನ್ನ ದೇಶಾದ್ಯಂತ ರಿಲೀಸ್​ ಮಾಡಬೇಕು. ಆದ್ರೆ ಈ ಟೈಂಣಲ್ಲಿ ದೇಶಾದ್ಯಂತ ಎಲೆಕ್ಷನ್ ಹೀಟ್ ಇದೆ. ಜನ ಎಲೆಕ್ಷನ್ ಪ್ರಚಾರದ ರಾಲಿಗಳಲ್ಲಿ ಕಾಣಿಸಿಕೊಳ್ತಾರೆ ಹೊರತು ಸಿನಿಮಾ ಮಂದಿರಕ್ಕೆ ಬರೋದು ಸ್ವಲ್ಪ ಕಷ್ಟ. ಹೀಗಾಗಿ ಚುನಾವನೆ ಮುಗಿದ ಬಳಿಕವೇ ಮಾರ್ಟಿನ್ ರಿಲೀಸ್ ಮಾಡೋದಾಗಿ ನಿರ್ಮಾಪಕ ಉದಯ್ ಕೆ ಮೆಹ್ತಾ ಹೇಳಿಕೊಂಡಿದ್ದಾರೆ. ಸೋ ಅಲ್ಲಿ ವರೆಗೆ ಧ್ರುವ ಫ್ಯಾನ್ಸ್ ಕಾಯಲೇ ಬೇಕು.

02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
Read more