
ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ಪ್ರಚಾರಕ್ಕೆ ವಿಜಯಲಕ್ಷ್ಮೀ ಸಾಥ್ ಕೊಡ್ತಾ ಇರೋದು ಗೊತ್ತೇ ಇದೆ. ದಿ ಡೆವಿಲ್ ನಾಯಕಿ ರಚನಾ ರೈ ಜೊತೆಗೆ ವಿಜಯಲಕ್ಷ್ಮೀ ಸಂದರ್ಶನವೊಂದನ್ನ ಕೊಟ್ಟಿದ್ದಾರೆ. ಅದ್ರಲ್ಲಿ ದಾಸನ ಫ್ಯಾನ್ಸ್ ಬಗ್ಗೆ ಮಾತನಾಡಿರೋ ವಿಜಯಲಕ್ಷ್ಮೀ ರಮ್ಯಾಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ದರ್ಶನ್ ಫ್ಯಾನ್ಸ್ ಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಒಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ದಾಸನ ಅಭಿಮಾನಿಗಳು ತುಂಬಾ ಒಳ್ಳೆಜನ. ಅವರಿಗೆ ಹೆಣ್ಣುಮಕ್ಕಳಿಗೆ ಗೌರವ ಕೊಡೋದು ಹೇಗೆ ಅಂತ ಗೊತ್ತಿದೆ ಅಂದಿದ್ದಾರೆ ವಿಜಯಲಕ್ಷ್ಮೀ.
ಬೈಟ್ : ವಿಜಯಲಕ್ಷ್ಮೀ, ದರ್ಶನ್ ಪತ್ನಿ
ಸದ್ಯ ಡೆವಿಲ್ ಸಿನಿಮಾ ತೆರೆಗೆ ಬಂದಿದ್ದು ಇದರ ಪ್ರಚಾರಾರ್ಥವಾಗಿ ವಿಜಯಲಕ್ಷ್ಮೀ ಡೆವಿಲ್ ನಾಯಕಿ ರಚನಾ ರೈಗೆ ಜೊತೆಗೆ ಕುಳಿತು ಒಂದು ಸಂದರ್ಶನ ಕೊಟ್ಟಿದ್ದಾರೆ. ಅದ್ರಲ್ಲೇ ವಿಜಯಲಕ್ಷ್ಮೀ ಈ ಮಾತುಗಳನ್ನ ಹೇಳಿರೋದು. ಈ ಮಾತು ಕೇಳ್ತಾ ಇದ್ರೆ ವಿಜಯಲಕ್ಷ್ಮೀ , ರಮ್ಯಾಗೆ ಟಾಂಗ್ ಕೊಡ್ಲಿಕ್ಕೆ ಹೇಳಿದಂತಿದೆ.