Darshan  Bullock Cart Ride: ಚಕ್ಕಡಿ ಬಂಡಿಯಲ್ಲಿ ದರ್ಶನ್ ಸವಾರಿ..! ಮಗನ ಕೂರಿಸಿಕೊಂಡು ಎತ್ತಿನ ಬಂಡಿ ಓಡಿಸಿದ ನಟ!

Darshan Bullock Cart Ride: ಚಕ್ಕಡಿ ಬಂಡಿಯಲ್ಲಿ ದರ್ಶನ್ ಸವಾರಿ..! ಮಗನ ಕೂರಿಸಿಕೊಂಡು ಎತ್ತಿನ ಬಂಡಿ ಓಡಿಸಿದ ನಟ!

Published : Mar 26, 2024, 10:41 AM ISTUpdated : Mar 26, 2024, 10:42 AM IST

ನಟ ದರ್ಶನ್ ಸಿನಿಮಾ ಕೆಲಸ ಇಲ್ಲ ಅಂದ್ರೆ ಹೆಚ್ಚಾಗಿ ಮಾಡೋ ಕೆಲಸ ಫ್ರೆಂಡ್ಸ್ ಜೊತೆ ಮೈಸೂರಿನಲ್ಲಿರೋ ತನ್ನ ತೋಟದ ಮನೆ ಸೇರೋದು. ಇಲ್ಲ ಅಂದ್ರೆ ಕ್ಯಾಮೆರಾ ಹಿಡಿದು ತನ್ನ ಕಾಸ್ಲಿ ಕಾರು ಹತ್ತಿಕೊಂಡು ಕಾಡು ಸುತ್ತೋದು ಪ್ರಾಣಿ ಪಕ್ಷಿಗಳ ಫೋಟೋ ತೆಗೆಯೋದು. ಆದ್ರೆ ಈ ಭಾರಿ ನಟ ದರ್ಶನ್ ತನ್ನ ಜೀವನದಲ್ಲಿ ಹೊಸ ಅನುಭವನ ಒಂದನ್ನ ಪಡೆದಿದ್ದಾರೆ. 
 

ನಟ ದರ್ಶನ್ ಮೈಸೂರಿನಲ್ಲಿರೋ(Mysore) ತನ್ನ ಫಾರ್ಮ್ ಹೌಸ್‌ನಲ್ಲಿ(Farm House) ಎಲ್ಲಾ ತರದ ತಳಿಯ ಹಸುಗಳು(Cows) ಎತ್ತುಗಳನ್ನ ಸಾಕಿದ್ದಾರೆ. ಈಗ ಅದೇ ಎತ್ತುಗಳಿಕೆ ಚಕ್ಕಡಿ ಬಂಡಿ ಕಟ್ಟಿಕೊಂಡು ಸವಾರಿ ಮಾಡಿದ್ದಾರೆ. ತನ್ನ ಮಗಶ್‌ ವಿನೀಶ್‌ರನ್ನ ಕರೆದುಕೊಂಡು ಫಾರ್ಮ್ ಹೌಸ್ ಸುತ್ತಮುತ್ತ ಸವಾರಿ ಮಾಡಿದ್ದಾರೆ. ನಟ ದರ್ಶನ್‌(Actor Darshan) ಎತ್ತಿನ ಬಂಡಿ(Bullock cart) ಕಟ್ಟಿಕೊಂಡು ನಾಲ್ಕೈದು ಜನ ಸ್ನೇಹಿತರ ಜೊತೆ ಸೇರಿ ನೈಟ್ ಔಟ್ ಹೋಗಿದ್ದಾರೆ. ತನ್ನ ಫಾರ್ಮ್ ಹೌಸ್ನಿಂದ ಸ್ವಲ್ಪವೇ ದೂರದಲ್ಲಿರೋ ಕಾವೇರಿ ನದಿ ದಡದಲ್ಲಿ ನೈಟ್ ಕ್ಯಾಂಪ್ ಹಾಕಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ನೈಟ್‌ ಔಟ್ ಅಂದ್ರೆ ಬೈಕು, ಕಾರು ಏರಿ ಜನ ಹೊರಟುಬಿಡುತ್ತಾರೆ. ಪಬ್ಬು, ರೆಸ್ಟೋರೆಂಟ್ ಎಂದು ಸುತ್ತಾಡುತ್ತಾರೆ. ಆದರೆ ನಟ ದರ್ಶನ್ ನೈಟ್‌ಔಟ್ ರೀತಿಯೇ ಬೇರೆ. ನದಿ ದಡ ಕೆರೆ ದಡದ ರಾತ್ರಿಯೆಲ್ಲಾ ಕಾಲ ಕಳೆಯೋದು ದರ್ಶನ್ ಹೊಸ ಸ್ಟೈಲ್. ನಟ ದರ್ಶನ್ ಸದ್ಯ 'ಡೆವಿಲ್' ಚಿತ್ರದ ಚಿತ್ರೀಕರಣ ಮಾಡುತ್ತಿದ್ದಾರೆ. ರಾಕ್‌ಲೈನ್ ಸ್ಟುಡಿಯೋದಲ್ಲಿ 'ಡೆವಿಲ್' ಶೂಟಿಂಗ್ ಶುರುವಾಗಿದೆ. ಪ್ರಕಾಶ್ ವೀರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಾವೇ ಸಿನಿಮಾ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಚಿತ್ರಕ್ಕಿದೆ.

ಇದನ್ನೂ ವೀಕ್ಷಿಸಿ:  ಮನೆ ದೇವರ ಜಾತ್ರೆಯಲ್ಲಿ ಧ್ರುವ ..! ಜಕ್ಕೇನಹಳ್ಳಿ ಜಾತ್ರೆಯಲ್ಲಿ ಆ್ಯಕ್ಷನ್ ಪ್ರಿನ್ಸ್ ಜೊತೆ ಕುಟುಂಬ !

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್