ಅಭಿಷೇಕ್ ಮದುವೆಯಲ್ಲಿ ರಾಜಕೀಯ ಸಿನಿಮಾ ಗಣ್ಯರ ಸಮಾಗಮ.!
ಮದುಮಕ್ಕಳಿಗೆ ಹಾರೈಸಿದ ರಜನಿಕಾಂತ್ & ಮೋಹನ್ ಬಾಬು..!
ಸೊಸೆ ಅವಿವಾಗೆ ಸಂಸದೆ ಸುಮಲತಾ ಕೊಟ್ಟ ಉಡುಗೊರೆ ಏನು..?
ಅಭಿಷೇಕ್ ಹಾಗೂ ಅವಿವಾ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು ಇಬ್ಬರೂ ಪರಸ್ಪರ ಪರಿಚಯಗೊಂಡು, ನಂತರ ಇಬ್ಬರ ಮಧ್ಯೆ ಪ್ರಿತಿ ಮೊಳೆಯಿತು. ಈಗ ಇವರು ಮದುವೆ ಆಗಿದ್ದಾರೆ. ಇನ್ನು ಅವಿವಾಗೆ ಗೆಳತಿಯಿಂದ ವಿಶೇಷ ಉಡುಗೊರೆ ಸಿಕ್ಕಿದೆ. ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಮತ್ತು ಅವಿವಾ ಮದುವೆಗೆ ದಕ್ಷಿಣ ಭಾರತದ ಖ್ಯಾತ ನಟರುಗಳು ಆಗಮಿಸಿದ್ದಾರೆ. ಕೇವಲ ನಟರು ಮಾತ್ರವಲ್ಲ ರಾಜಕೀಯ ಗಣ್ಯರು, ಕ್ರಿಕೆಟ್ ತಾರೆಯರು, ಗಾಯಕರೂ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಅಂಬಿ ಪುತ್ರನ ಮದುವೆಗೆ ಆಗಮಿಸಿ ಹೊಸ ಜೋಡಿಗೆ ಹಾರೈಸಿದ್ದಾರೆ. ನಟ ರಜನಿಕಾಂತ್ ತೆಲುಗು ನಟ ಚಿರಂಜೀವಿ,ಸುಹಾಸಿನಿ , ಕನ್ನಡದ ಹೆಸರಾಂತ ನಟ ಯಶ್, ಕ್ರಿಕೆಟಿಗ ಅನಿಲ್ ಕುಂಬ್ಳೆ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಿಳು ನಟ ಮೋಹನ್ ಬಾಬು, ತೆಲುಗು ನಟ ನರೇಶ್, ನಟಿ ಪವಿತ್ರ ಲೋಕೇಶ್ ಇತರರು ಆಗಮಿಸಿ ನವಜೋಡಿಯನ್ನು ಹಾರೈಸಿದರು.
ಇದನ್ನೂ ವೀಕ್ಷಿಸಿ: ಮಂತ್ರಾಲಯಕ್ಕೆ ಭೇಟಿ ನೀಡಿದ ಸಾರಾ ಅಣ್ಣಯ್ಯ: ಸೀರೆಯುಟ್ಟು ರಾಯರ ದರ್ಶನ ಪಡೆದ ನಟಿ