ಬೆಂಗಳೂರು (ಸೆ.30): ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ನಡಯುತ್ತಿದ್ದಂತೆ ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿದ್ದು, ಖುದ್ದು CBI ಬೆಚ್ಚಿ ಬಿದ್ದಿದೆ. ಸೋರಿಕೆಯಾದ ಒಂದು ಮೊಬೈಲ್ ಸಂಭಾಷಣೆಯ ಬೆನ್ನತ್ತಿದಾಗ, ಈ ಪ್ರಕರಣವು ಹನುಮಂತನ ಬಾಲದಂತೆ ಬೆಳೆಯುತ್ತಿರುವುದನ್ನು ನೀವು ಗಮನಿಸಿರಬಹುದು. ಪ್ರಕರಣದ ಬಗ್ಗೆ ಇನ್ನಷ್ಟು Exclusive ಮಾಹಿತಿ ಸುವರ್ಣನ್ಯೂಸ್ ಗೆ ಲಭ್ಯವಾಗಿದೆ. ಕಳೆದ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಮಠಾಧೀಶರ ಫೋನ್ ಕದ್ದಾಲಿಕೆ ಪ್ರಕರಣವನ್ನು CBI ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ನಿರ್ಮಲಾನಂದ ಶ್ರೀಗಳ ಫೋನ್ ಟ್ಯಾಪ್ : ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ