
1991ರಲ್ಲಿ ಚಿನ್ನವನ್ನು ವಿದೇಶದಲ್ಲಿ ಅಡವಿಟ್ಟಿದ್ದ ಭಾರತ, ಇಂದು ಇಡೀ ಜಗತ್ತೇ ಹುಬ್ಬೇರಿಸುವಷ್ಟು ಚಿನ್ನದ ದಾಸ್ತಾನು ತನ್ನಲ್ಲಿಟ್ಟುಕೊಂಡಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ನಾವಿವತ್ತು ನಿಮಗೆ ಹೇಳ್ತಾ ಇರೋದು, ಪ್ರತಿಯೊಬ್ಬ ಭಾರತೀಯನೂ ತಿಳಿಯಲೇಬೇಕಾದ ಇತಿಹಾಸ ಕತೆ. ಅಷ್ಟೇ ವಾಸ್ತವದ ಕತೆ. ಇವತ್ತು ಭಾರತ ಏನಾಗಿದ್ಯೋ, ಅದಕ್ಕೆ ಕಾರಣವಾಗಿದ್ದು ಮೂರು ದಶಕಗಳ ಹಿಂದೆ ಘಟಿಸಿದ್ದ ಆ ಐತಿಹಾಸಿಕ ಸಂಗತಿ. ಇವತ್ತು ಭಾರತ, ಅದ್ಯಾವ ಕಾರಣಕ್ಕೆ ಜಗತ್ತಿನ ಕಣ್ ಕುಕ್ತಾ ಇದೆಯೋ, ಅದೇ ಶಕ್ತಿಯ ಮೇಲೆ, ಅವತ್ತು ದುಷ್ಟಶಕ್ತಿಗಳ ವಕ್ರದೃಷ್ಟಿ ಬಿದ್ದಿತ್ತು. ಆಗ ಏನಾಯ್ತು, ಹೇಗಾಯ್ತು? ಅದರ ಪರಿಣಾಮ ಈಗ ಏನಾಗಿದೆ? ಅದೆಲ್ಲವನ್ನೂ ನಿಮಗೆ ತೋರಿಸ್ತೀವಿ ನೋಡಿ.
ದೇಶದಲ್ಲಿ ತೀವ್ರ ಲಿಕ್ವಿಡಿಟಿ ಕ್ರೈಸೀಸ್ ಎದುರಾಗಿತ್ತು. ಆಗ ಅಧಿಕಾರಿಗಳ ಮುಂದೆ ಇದ್ದಿದ್ದು, ಚಿನ್ನವನ್ನು ಅಡವಿಡುವ ಆಯ್ಕೆ. 1991ರಲ್ಲಿ ಭಾರತ 67 ಟನ್ ಚಿನ್ನವನ್ನು ಅಡವಿಟ್ಟಿತ್ತು. ಇದಾಗಿ 33 ವರ್ಷಗಳ ಬಳಿಕ ಭಾರತದಲ್ಲಿ ಇಡೀ ಜಗತ್ತೇ ನಿಬ್ಬೆರಗಾಗಿಸುವಷ್ಟು ಚಿನ್ನದ ದಾಸ್ತಾನು ಇದೆ.