ಸಿಎಂ ಸಿದ್ದರಾಮಯ್ಯ ಕ್ಲೀನ್ಚಿಟ್ಗೆ ಅಡ್ಡಿಯಾಗುತ್ತಾ ಇ.ಡಿ..? ಬಿ ರಿಪೋರ್ಟ್ ವಿರುದ್ಧ ಸಾಕ್ಷ್ಯ ಸಲ್ಲಿಕೆಗೆ ಇ.ಡಿ ಸಿದ್ಧತೆ ನಡೆಸಿದೆ. ಮುಡಾದಿಂದ ಸಿದ್ದು ಕುಟುಂಬಕ್ಕೆ 56 ಕೋಟಿ ಲಾಭ ಇದೆ ಎಂದು ಇ.ಡಿ ಹೇಳಿದೆ. ಲೋಕಾಯುಕ್ತ ಕ್ಲೀನ್ಚಿಟ್ ಬೆನ್ನಲ್ಲೇ ಇ.ಡಿ ತನಿಖೆ ಚುರುಕುಗೊಳಿಸಿದ್ದು, ಸಿಎಂಗೆ ನೋಟಿಸ್ಗೆ ಹೈಕೋರ್ಟ್ ಆದೇಶಕ್ಕೆ ಇ.ಡಿ ಕಾಯ್ತಿದೆ.
ಬೆಂಗಳೂರು (ಫೆ.21): ಸಿಎಂ ಸಿದ್ದರಾಮಯ್ಯ ಕ್ಲೀನ್ಚಿಟ್ಗೆ ಅಡ್ಡಿಯಾಗುತ್ತಾ ಇ.ಡಿ..? ಬಿ ರಿಪೋರ್ಟ್ ವಿರುದ್ಧ ಸಾಕ್ಷ್ಯ ಸಲ್ಲಿಕೆಗೆ ಇ.ಡಿ ಸಿದ್ಧತೆ ನಡೆಸಿದೆ. ಮುಡಾದಿಂದ ಸಿದ್ದು ಕುಟುಂಬಕ್ಕೆ 56 ಕೋಟಿ ಲಾಭ ಇದೆ ಎಂದು ಇ.ಡಿ ಹೇಳಿದೆ. ಲೋಕಾಯುಕ್ತ ಕ್ಲೀನ್ಚಿಟ್ ಬೆನ್ನಲ್ಲೇ ಇ.ಡಿ ತನಿಖೆ ಚುರುಕುಗೊಳಿಸಿದ್ದು, ಸಿಎಂಗೆ ನೋಟಿಸ್ಗೆ ಹೈಕೋರ್ಟ್ ಆದೇಶಕ್ಕೆ ಇ.ಡಿ ಕಾಯ್ತಿದೆ. ನಾಲ್ಕು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿಲ್ಲ. ಸ್ನೇಹಮಯಿ ಕೃಷ್ಣ ನೀಡಿದ ದೂರು ತನಿಖೆ ನಡೆಸಲು ತಕ್ಕದ್ದಲ್ಲ. ಮಾಹಿತಿ ಮತ್ತು ಕಾನೂನಿನ ತಪ್ಪು ತಿಳುವಳಿಕೆಯಿಂದ ದೂರು ನೀಡಲಾಗಿದೆ. ದೂರುದಾರರು ಮಾಡಿದ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಇದು ಆರೋಪಿಗಳ ವಿರುದ್ಧ ಕ್ರಮ ಜರುಗಿಸಲು ಆಗದಂತಹ ಪ್ರಕರಣ ಎಂದು ಕರ್ನಾಟಕ ಲೋಕಾಯುಕ್ತ ಹೇಳಿದೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.