Jan 14, 2025, 11:28 AM IST
ಬೆಂಗಳೂರು(ಜ.14): ಕೆಲವು ಮ್ಯಾಜಿಕ್‌ಗಳು ಬೆಚ್ಚಿ ಬೀಳಿಸುತ್ವೆ. ನಮ್ಮ ಕಣ್ಣು, ಬುದ್ದಿ ಮೇಲೆಯೇ ನಮಗೆ ಅನುಮಾನ ಹುಟ್ಟಿಸುತ್ವೆ.. ಇದೆಲ್ಲಾ ಹೇಗೆ ಸಾಧ್ಯ ಅನ್ನೋ ಗೊಂದಲದಲ್ಲಿ ನಮ್ಮನ್ನ ಮುಳುಗಿಸುತ್ವೆ.. ಎಲ್ಲೋ ಮಾಯವಾದ ಹುಡುಗಿ ಇನ್ನೆಲ್ಲೋ ಹೇಗೆ ಎದ್ದು ಬರ್ತಾಳೆ..? ಗುರುತ್ವಾಕರ್ಷಣೆಯನ್ನ ಮೀರಿ ಗಾಳಿಯಲ್ಲಿ ತೇಲುವಂತೆ ಮಾಡ್ತಾರಲ್ಲಾ ಅದು ಹೇಗೆ..? ಈ ರೀತಿ ಮ್ಯಾಜಿಕ್‌ಗಳನ್ನ ನೋಡ್ತಾಗೆಲ್ಲಾ ಒಂದಲ್ಲ ಹಲವು ಪ್ರಶ್ನೆಗಳು ನಿಮ್ಮನ್ನ ಕಾಡಿರುತ್ವೆ. ಅಂತಹ ಕೆಲವು ಮ್ಯಾಜಿಕ್‌ಗಳ ಒಳ ಮರ್ಮ ಏನು..? ಏನೆಲ್ಲಾ ಟ್ರಿಕ್ಸ್ ಅಲ್ಲಿ ಯೂಸ್ ಮಾಡ್ತಾರೆ..? ನಮ್ಮ ಕಣ್ಣಿಗೆ ಅದೆಷ್ಟು ಸಲೀಸಾಗಿ ಮಂಕುಬೂದಿ ಎರಚ್ತಾರೆ ಅನ್ನೋದನ್ನ ನೋಡೋಣ. ಇದೇ ಈ ಹೊತ್ತಿನ ವಿಶೇಷ ಸೂಪರ್ ಡೆಡ್ಲಿ ಡೇಂಜರ್.
ಇದೆಲ್ಲವೂ ದೊಡ್ಡ ದೊಡ್ಡ ಮ್ಯಾಜಿಕ್‌ನ ಹಿಂದಿರೋ ನಿಜವಾದ ಟ್ರಿಕ್ಸ್. ಇವುಗಳನ್ನ ಮಾಡೋಕೆ ಬಹಳ ಪ್ರಾಕ್ಟಿಸ್ ಆಗಿರಬೇಕು. ಪರಿಣಿತಿ ಹೊಂದಿರ್ಬೇಕು. ಆದ್ರೆ ಕೆಲವೊಂದು ಈಜಿಯಾದ ಜಾದುಗಳಿವೆ. ಅವುಗಳನ್ನ ನೀವು ಕೂಡ ಆರಾಮಾಗಿ ಮಾಡ್ಬೋದು.
ಒಂದಿಷ್ಟು ಜಾದುಗಳಿವೆ. ಅವುಗಳ ಗುಟ್ಟು ಗೊತ್ತಾಗಿ ಬಿಟ್ರೆ, ಯಾರ್ ಬೇಕಾದ್ರೂ ಅವುಗಳನ್ನ ಆರಾಮಾಗಿ ಮಾಡ್ಬೋದು. ಆದ್ರೆ ಒಂಚೂರು ಪ್ರಾಕ್ಟಿಸ್ ಬೇಕಷ್ಟೆ. ಸುಲಭವಾಗಿ, ಸರಳವಾಗಿ.. ನೀವು ಕೂಡ ಮಾಡ್ಬೋದಾದ ಕೆಲವು ಮ್ಯಾಜಿಕ್‌ಗಳು ಹಾಗೂ ಅವುಗಳ ಟ್ರಿಕ್ಸ್‌ಗಳನ್ನ ಡೀಟೈಲ್ ಆಗಿ ತೋರಿಸ್ತೀವಿ ನೋಡಿ.
ಇದೇ ರೀತಿ ಸರಳವಾಗಿ, ಸುಲೀಸಾಗಿ ಮಾಡ್ಬೋದಾದ ಮತ್ತೊಂದಿಷ್ಟು ಮ್ಯಾಜಿಕ್ ಟ್ರಿಕ್ಸ್‌ಗಳನ್ನ ನೋಡೋಣ. ಕೆಲವು ಮ್ಯಾಜಿಕ್‌ಗಳ ಸೀಕ್ರೆಟ್ ಗೊತ್ತಾಗಿಬಿಟ್ರೆ ಸಾಕು, ನೀವು ಕೂಡ ಅವುಗಳನ್ನ ಆರಾಮಾಗಿ ಮಾಡ್ಬೋದು. ಮೊಬೈಲ್ ಒಳಗಿನಿಂದಲೇ ನೀರು ಬರುವಂತೆ ನಿಮ್ಮ ಸ್ನೇಹಿತರನ್ನ ಯಾಮಾರಿಸ್ಬೋದು. ಕೈ ಒಳಗಿನಿಂದ ಬಟ್ಟೆ ಎಳೆದು ಅವರನ್ನ ಬೆಚ್ಚಿ ಬೀಳಿಸ್ಬೇದು. ಮತ್ತೆ ಇನ್ಯಾಕೆ ಲೇಟು, ಆ ಜಾದುಗಳ ಹಿಂದಿರೋ ಅಸಲಿ ಗುಟ್ಟನ್ನ ನೋಡ್ಕೊಂಡು ಬರೋಣ ಬನ್ನಿ.