ಸೂಪರ್ ಸ್ಟಾರ್ ನಟಿಸ್ತಾ ಇರೋ ಕೂಲಿ ಮಲ್ಟಿ ಸ್ಟಾರ್ಸ್ ಸಿನಿಮಾ ಅಲ್ಲ. ಇದು ಆಲ್ ಇಂಡಿಯಾ ಸ್ಟಾರ್ಸ್ ಸಿನಿಮಾ. ತಲೈವಾ ರಜನಿಕಾಂತ್ ಜೊತೆ ಈ ಸಿನಿಮಾದಲ್ಲಿ ಬಾಲಿವುಡ್ ದಿಗ್ಗಜ ಅಮೀರ್ ಖಾನ್ ನಟಿಸುತ್ತಿದ್ದಾರೆ. ಕನ್ನಡ ಸೂಪರ್ ಸ್ಟಾರ್ ಉಪೇಂದ್ರ ಬಣ್ಣ ಹಚ್ಚಿದ್ದಾರೆ.
ತಮಿಳು ಸಿನಿಮಾ ಜಗತ್ತು ಮತ್ತೊಂದು ಮಹಾನ್ ಸಾಹಸಕ್ಕೆ ಸಜ್ಜಾಗಿದೆ. ಅದು ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅನ್ನೋ ಮಹಾನ್ ನಾಯಕನನ್ನ ಇಟ್ಟುಕೊಂಡು. ಈ ಸೂಪರ್ ಸ್ಟಾರ್ ನಾಯಕನ ಜೊತೆ ಇಡೀ ಭಾರತೀಯ ಚಿತ್ರರಂಗವೂ ಸೇರಿಕೊಂಡಿದೆ. ಹಾಗಾದ್ರೆ ಆ ಸಾಹಸ ಯಾವ್ದು..? ಏನ್ ಕಥೆ ನೋಡೋಣ ಬನ್ನಿ..
ತಲೈವಾ ರಜನಿಕಾಂತ್ ಈಗ ತಮಿಳು ಚಿತ್ರ ಜಗತ್ತಿನ ಹಾಟ್ ಟಾಪಿಕ್.. ಅದಕ್ಕೆ ಕಾರಣ ಸೂಪರ್ ಸ್ಟಾರ್ ನಟಿಸುತ್ತಿರೋ ಕೂಲಿ ಸಿನಿಮಾ, ಮತ್ತದರ ಸ್ಟಾರ್ ಕಾಸ್ಟ್.. ಕೂಲಿಯಲ್ಲಿ ಖದರ್ ತೋರಿಸೋಕೆ ರಜನಿಕಾಂತ್ ರೆಡಿ ಆಗಿದ್ರೆ, ಆ ಕಡೆ ರಜನಿ ಎದುರು ತೊಡೆ ತಟ್ಟಿ ಅಬ್ಬರಿಸೋಕೆ ಭಾರತೀಯ ಚಿತ್ರರಂಗದ ಸ್ಟಾರ್ಸ್ ಸಜ್ಜಾಗಿದ್ದಾರೆ.
ಸೂಪರ್ ಸ್ಟಾರ್ ನಟಿಸ್ತಾ ಇರೋ ಕೂಲಿ ಮಲ್ಟಿ ಸ್ಟಾರ್ಸ್ ಸಿನಿಮಾ ಅಲ್ಲ. ಇದು ಆಲ್ ಇಂಡಿಯಾ ಸ್ಟಾರ್ಸ್ ಸಿನಿಮಾ. ತಲೈವಾ ರಜನಿಕಾಂತ್ ಜೊತೆ ಈ ಸಿನಿಮಾದಲ್ಲಿ ಬಾಲಿವುಡ್ ದಿಗ್ಗಜ ಅಮೀರ್ ಖಾನ್ ನಟಿಸುತ್ತಿದ್ದಾರೆ. ಕನ್ನಡ ಸೂಪರ್ ಸ್ಟಾರ್ ಉಪೇಂದ್ರ ಬಣ್ಣ ಹಚ್ಚಿದ್ದಾರೆ. ತೆಲುಗಿನ ಅಕ್ಕಿನೇನಿ ನಾಗಾರ್ಜುನ ಕಾಣಿಸ್ತಾರೆ. ತಮಿಳು ದಿಗ್ಗಜ ಸತ್ಯರಾಜ್, ಮಲಯಾಳಂ ನಟ ಸೌಬಿನ್ ಶಾಹಿತ್, ಶೃತಿ ಹಾಸನ್ ಮೆರೆದಾಡುತ್ತಾರೆ.
ಇವತ್ತು ಕೂಲಿ ಸಿನಿಮಾ ಬಗ್ಗೆ ಇಡೀ ಸಿನಿಮಾ ಜಗತ್ತೇ ಮಾತಾಡ್ತಿದೆ. ಆದ್ರೆ ಅದರ ಹಿಂದಿನ ಶಕ್ತಿ ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಕರಾಜ್.. ಈ ಕೂಲಿಗಾಗಿ ಮನೆಯನ್ನೇ ಬಿಟ್ಟು ಎರಡು ವರ್ಷ ಶ್ರಮಿಸಿರೋ ಲೋಕೇಶ್ ಫೈನಲಿ ಅಗಸ್ಟ್ 14 ರಂದು ತೆರೆಗೆ ತರುತ್ತಿದ್ದಾರೆ. ಬಿಟೌನ್ ಸೂಪರ್ ಸ್ಟಾರ್ ಅಮೀರ್ ಖಾನ್ ದಹಾ ಅನ್ನೋ ರೋಲ್ ಮಾಡಿದ್ದು ಇವರ ಪಾತ್ರ 15 ನಿಮಿಷ ಬಂದು ಹೋಗುತ್ತಂತೆ. ಅಮೀರ್ ಖಾನ್ ಲುಕ್ ರಿವಿಲ್ ಆಗಿದ್ದು ಕೂಲಿ ಮೇಲೆ ಕಣ್ಣಿಡೋ ಹಾಗೆ ಮಾಡಿದೆ.
ತಲೈವಾ ರಜನಿಕಾಂತ್ ಜೊತೆ ಕನ್ನಡಿಗ ಉಪೇಂದ್ರ ಫಸ್ಟ್ ಟೈಮ್ ಬಣ್ಣ ಹಚ್ಚುತ್ತಿದ್ದಾರೆ. ಉಪ್ಪಿಯದ್ದು ರಜನಿಗೆ ಅಪೋಸಿಟ್ ರೋಲ್ ಅಂತೂ ಅಲ್ಲವೇ ಅಲ್ಲ. ಆ ಬಗ್ಗೆ ಕೂಲಿ ತಂಡವಾಗ್ಲಿ ಉಪ್ಪಿಯಾಗ್ಲಿ ರಿವಿಲ್ ಮಾಡಿಲ್ಲ. ಇನ್ನು ಅಕ್ಕಿನೇನಿ ನಾಗಾರ್ಜುನ ಮಾತ್ರ ರಜನಿಕಾಂತ್ಗೆ ಟಗಫರ್ ಕೊಡೋ ರೋಲ್ ನನ್ನದು ಎಂದಿದ್ದಾರೆ. ಇವರ ಜೊತೆ ಸತ್ಯರಾಜ್,ಸೌಬಿನ್ ಶಾಹಿತ್ ಅಬ್ಬರ ಇರಲಿದೆ. ಟೋಟಲಿ ಕೂಲಿ ಔಟ್ ಆ್ಯಂಟ್ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ ಅನ್ನೋ ಹಿಂಟ್ ಅನ್ನ ಡೈರೆಕ್ಟರ್ ಲೋಕೇಶ್ ಕನಕರಾಜ್ ಕೊಟ್ಟಾಗಿದೆ.