'ಶಿವಣ್ಣನ ನೋವನ್ನು ಅವನು ತೆಗೆದುಕೊಂಡ' ನೀಮೋ ಸಾವಿಗೆ ಗೀತಾ ಭಾವುಕ ಪತ್ರ!

Dec 31, 2024, 3:02 PM IST

ಬೆಂಗಳೂರು(ಡಿ.31): ಯಶಸ್ವಿ ಶಸ್ತ್ರ ಚಿಕಿತ್ಸೆ ನಂತರ ಡಾ. ಶಿವರಾಜ್‌ಕುಮಾರ್‌ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಪತ್ನಿ ಗೀತಾ ಶಿವರಾಜ್ ಕುಮಾರ್ ಈ ಖುಷಿ ಸಂದರ್ಭದಲ್ಲೂ ತಮ್ಮ ಕುಟುಂಬದ ಮುದ್ದು ನಾಯಿ ನೀಮೋ ಕಳೆದುಕೊಂಡ ದುಃಖದಲ್ಲಿದ್ದಾರೆ.

ಹೌದು ಶಿವರಾಜ್‌ ಕುಮಾರ್‌ ಮನೆಯ ಮುದ್ದಿನ ನಾಯಿ ನೀಮೋ ಕೇವಲ ನಾಯಿ ಅಲ್ಲ ಅದು ನಮ್ಮ ಮನೆ ಸದಸ್ಯ ಎಂದು ಗೀತಾ ಶಿವರಾಜ್‌ಕುಮಾರ್‌ ಹೇಳಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ತಮ್ಮ ನೀಮೋ ಕುರಿತು ಭಾವನಾತ್ಮಕ ಪತ್ರ ಬರೆದುಕೊಂಡಿದ್ದಾರೆ. 

ಶಿವಣ್ಣ ಮನೆ ನಾಯಿ ನೀಮೋ ನಿಧನ, ಕಣ್ಣೀರು ಉಕ್ಕಿಸುವ ಪತ್ರ ಬರೆದ ಗೀತಾ ಶಿವರಾಜ್‌ಕುಮಾರ್!

ನೀಮೋ ಒಂದು ತಿಂಗಳಿನಿಂದ ಶಿವಣ್ಣನಿಗೆ ಅಂಟಿಕೊಂಡೇ ಇರುತ್ತಿತ್ತಂತೆ. ಅತ್ತ ಶಿವಣ್ಣ ಅಮೆರಿಕಾಗೆ ಚಿಕಿತ್ಸೆಗೆ ಹೋದರೆ, ಇತ್ತ ನೀಮೋ ಜೀವನ ಪಯಣ ಮುಗಿಸಿದ್ದಾನೆ. ಅಪ್ಪನ ನೋವು ಅವನಿಗೆ ಅರ್ಥವಾಗಿತ್ತು.. ಎಂದು ಶಿವರಾಜ್‌ಕುಮಾರ್‌ ಪುತ್ರಿ ಕಣ್ಣೀರಿಟ್ಟಿದ್ದಾರೆ.