- ನಟ ಸಂಚಾರಿ ವಿಜಯ್, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ರಂಗಾಪುರ ಗ್ರಾಮದವರು
- ತಂದೆ ಚಿತ್ರ ಕಲಾವಿದ ಬಸವರಾಜಯ್ಯ, ತಾಯಿ ಗೌರಮ್ಮ.
- ಇಂಜಿನೀಯರಿಂಗ್ ಪದವೀಧರ, ಕೆಲಕಾಲ ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದರು.
ಬೆಂಗಳೂರು (ಜೂ. 15): ನಟ , ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ರಂಗಾಪುರ ಗ್ರಾಮದವರು. ತಂದೆ ಚಿತ್ರ ಕಲಾವಿದ ಬಸವರಾಜಯ್ಯ, ತಾಯಿ ಗೌರಮ್ಮ. ಸಾಕುತಾಯಿ ಇಂದ್ರಮ್ಮ, ವಿಜಯ್ ನೆನಪುಗಳನ್ನು ಸ್ಮರಿಸಿಕೊಂಡಿದ್ದಾರೆ. 'ನಮ್ಮ ಮಕ್ಕಳ ಜೊತೆ ಅವನೂ ಒಬ್ಬ ಮಗ ಅಂತ ಬೆಳೆಸಿದ್ದೇನೆ. ಅವನಿಗೆ ಕೈತುತ್ತು ಕೊಟ್ಟಿದ್ದೆಲ್ಲಾ ನೆನಪಾಗುತ್ತದೆ. ಮನೆಗೆ ಆಗಾಗ ಬರುತ್ತಿದ್ದ. ಇಷ್ಟವಾದ ತಿಂಡಿಗಳನ್ನು ಮಾಡಿಸಿಕೊಂಡು ತಿಂದು ಹೋಗುತ್ತಿದ್ದ. ಅವೆಲ್ಲಾ ನೆನಪಾಗುತ್ತದೆ ಈಗ' ಎಂದು ಭಾವುಕರಾದರು.