
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ-1 ಆಗಿ ಜೈಲು ಸೇರಿದ್ದ ನಟಿ ಪವಿತ್ರಾ ಗೌಡ ಈಗ ಬೇಲ್ ಮೇಲೆ ಹೊರಗಿದ್ದಾರೆ. ಈ ಕೇಸ್ ವಿಷ್ಯ ಪವಿತ್ರಾನ ಅಪವಿತ್ರಾ ಅಂತ ಕರೆದು ಅನೇಕರು ಗೇಲಿ ಮಾಡಿದ್ರು. ದರ್ಶನ್ರ ಕೆಲ ಅಭಿಮಾನಿಗಳು ಕೂಡ ಪವಿತ್ರಾನ ನಿಂದಿಸಿದ್ರು. ಅದೆಲ್ಲದಕ್ಕೂ ಈಗ ಪವಿತ್ರಾ ಖಡಕ್ ಉತ್ತರ ಕೊಟ್ಟಿದ್ದಾರೆ. ಇತ್ತೀಚಿಗೆ ಪವಿತ್ರಾ ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದಲ್ಲಿ ಖ್ಯಾತ ವಿಮರ್ಶಕಿ ಎಂಎಸ್ ಆಶಾದೇವಿ ಅವರು ಮಾಡಿರುವ ಭಾಷಣದ ತುಣುಕು ಅದು. ಅದ್ರಲ್ಲಿ ಆಶಾದೇವಿ ಪವಿತ್ರಾಳನ್ನ ಅಪವಿತ್ರ ಅಂತ ಕರೆದವರ ಬಗ್ಗೆ ಮಾತನಾಡಿದ್ದಾರೆ, ಮಹಿಳೆಯನ್ನ ಹೇಗೆ ಸುಲಭವಾಗಿ ನಿಂದಿಸಲಾಗುತ್ತೆ ಅಂತ ಮಾತನಾಡಿದ್ದಾರೆ.
ಈ ಮಾತುಗಳು ಪವಿತ್ರಾಗೆ ಬಹಳಾನೇ ಇಷ್ಟವಾಗಿವೆ. ಈ ವಿಡಿಯೋವನ್ನ ಶೇರ್ ಮಾಡಿಕೊಂಡು ತನ್ನ ಮನದಾಳದ ನೋವುಗಳನ್ನ ಹಂಚಿಕೊಂಡಿದ್ದಾರೆ. ಅಸಲಿಗೆ ಈ ಕೇಸ್ನಲ್ಲಿ ಅತಿ ಹೆಚ್ಚು ಟೀಕೆ, ನಿಂದನೆ ಅನುಭವಿಸಿದ್ದು ಪವಿತ್ರಾನೇ ಅಂದ್ರೆ ತಪ್ಪಾಗಲ್ಲ. ರೇಣುಕಾಸ್ವಾಮಿ ಅನ್ನೋ ವ್ಯಕ್ತಿ ಪವಿತ್ರಾಗೆ ಅಶ್ಲೀಲ ಮೆಸೇಜ್ ಕಳುಹಿಸಿದ. ಆತನನ್ನ ಶಿಕ್ಷಿಸುವ ಭರದಲ್ಲಿ ದರ್ಶನ್ ಌಂಡ್ ಗ್ಯಾಂಗ್ ಕೊಲೆ ಮಾಡಿದರು ಅನ್ನೋದು ಪೊಲೀಸರ ಆರೋಪ. ಅಶ್ಲೀಲ ಮೆಸೇಜ್ ಕಳಿಸಿದವನೂ ಗಂಡಸೇ.. ಆತನನ್ನ ಕೊಂದವನು ಗಂಡಸೇ.. ಆದ್ರೆ ಎರಡೆರಡು ಬಾರಿ ನಿಂದನೆ ಅನುಭಿಸಿದ್ದು ಮಾತ್ರ ಪವಿತ್ರಾ.