ಜೇಮ್ಸ್‌ಗೂ (James) ಕಾಶ್ಮೀರ್ ಫೈಲ್ಸ್‌ಗೂ (Kashmir Files) ಸಂಬಂಧವಿಲ್ಲ. ಚೆನ್ನಾಗಿ ಓಡುತ್ತಿರೋ ಸಿನಿಮಾವನ್ನು ತೆಗೆಯಲು ಪ್ರಯತ್ನಿಸಬಾರದು. ಒಳ್ಳೆಯ ಸಿನಿಮಾವನ್ನು ನಾವು ತೆಗೆಸುವುದಿಲ್ಲ, ನಮ್ಮ ಕುಟುಂಬದ ಥಿಯರಿ ಇದು. ಜೇಮ್ಸ್‌ಗೆ ಅನ್ಯಾಯ ಆಗಲು ಬಿಡುವುದಿಲ್ಲ' ಎಂದು ಸಿಎಂ ಭೇಟಿ ಬಳಿಕ ಶಿವರಾಜ್‌ಕುಮಾರ್ (Shivarajkumar) ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು (ಮಾ. 24): ಜೇಮ್ಸ್‌ಗೂ (James) ಕಾಶ್ಮೀರ್ ಫೈಲ್ಸ್‌ಗೂ (Kashmir Files) ಸಂಬಂಧವಿಲ್ಲ. ಚೆನ್ನಾಗಿ ಓಡುತ್ತಿರೋ ಸಿನಿಮಾವನ್ನು ತೆಗೆಯಲು ಪ್ರಯತ್ನಿಸಬಾರದು. ಒಳ್ಳೆಯ ಸಿನಿಮಾವನ್ನು ನಾವು ತೆಗೆಸುವುದಿಲ್ಲ, ನಮ್ಮ ಕುಟುಂಬದ ಥಿಯರಿ ಇದು. ಜೇಮ್ಸ್‌ಗೆ ಅನ್ಯಾಯ ಆಗಲು ಬಿಡುವುದಿಲ್ಲ' ಎಂದು ಸಿಎಂ ಭೇಟಿ ಬಳಿಕ ಶಿವರಾಜ್‌ಕುಮಾರ್ (Shivarajkumar) ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಬಿಗ್ ಬಜೆಟ್ ಚಿತ್ರ RRR ಗೋಸ್ಕರ ಜೇಮ್ಸ್ ಚಿತ್ರವನ್ನು ತೆಗೆಯಲಾಗುತ್ತಿದೆ ಎಂದು ಅಪ್ಪು ಅಭಿಮಾನಿಗಳು, ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಪರಭಾಷಾ ಚಿತ್ರಕ್ಕಾಗಿ ಕನ್ನಡ ಚಿತ್ರವನ್ನು ತೆಗೆಯುವುದು ಎಷ್ಟು ಸರಿ ಎಂಬ ಆಕ್ರೋಶವೂ ವ್ಯಕ್ತವಾಗಿದೆ.