
ಯಾವ ಹೀಮಾಲಯ, ಯಾವ ಕಾಶ್ಮೀರ ಶಾಂತ ಹಿಮವನ್ನ ಹೊದ್ದು ಮಲಗಿದೆಯೋ.. ಆಧ್ಯಾತ್ಮಿಕ ಸಾಧಕರನ್ನ ಕೈ ಬೀಸಿ ಕರೀತಾ ಇತ್ತೋ.. ಅದೇ ಕಾಶ್ಮೀರ ಈಗ ರಕ್ತ ಸಿಕ್ತವಾಗಿದೆ. ಉಗ್ರರ ಕೃತ್ಯದಿಂದ ಶಾಂತ ಕಣಿವೆ, ಅಶಾಂತಿಯಿಂದ ಕುದೀತಾ ಇದೆ...
ಪೆಹಲ್ಗಾಮ್ ಉಗ್ರದಾಳಿ (Pahalgam Terror Attack) ಬಳಿಕ ದೇಶದೆಲ್ಲೆಡೆ ಪಾಕ್ ಪ್ರೇರಿತ ಉಗ್ರರ ವಿರುದ್ದ ಆಕ್ರೊಶ ವ್ಯಕ್ತವಾಗ್ತಾ ಇದೆ. ಅನೇಕ ಸಿನಿತಾರೆಯರು ಕೂಡ ಈ ವಿಚಾರವಾಗಿ ಮಾತನಾಡಿ ಅಮಾಯಕರ ಸಾವಿಗೆ ನ್ಯಾಯ ಸಿಗಬೇಕು.. ಉಗ್ರಗಾಮಿಗಳ ಉಪಟಳಕ್ಕೆ ಶಾಶ್ವತವಾಗಿ ಕಡಿವಾಣ ಹಾಕಬೇಕು ಅಂತ ಒತ್ತಾಯಿಸಿದ್ದಾರೆ. ಇದೀಗ ಇದೇ ಮೊದಲ ಬಾರಿಗೆ ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikantha) ಈ ಬಗ್ಗೆ ಮಾತನಾಡಿದ್ದಾರೆ. ಕಾಶ್ಮೀರ ಸಂಘರ್ಷದ ಬಗ್ಗೆ ತಲೈವಾ ಹೇಳಿದ್ದೇನು..? ಈ ಸ್ಟೋರಿ ನೋಡಿ...
ಮೋದಿಯಿಂದ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಖಚಿತ : ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ಇದೇ ಮೊದಲ ಬಾರಿಗೆ ಕಾಶ್ಮೀರದ ಉಗ್ರದಾಳಿ ಬಗ್ಗೆ ಮಾತನಾಡಿದ್ದಾರೆ. ಅಸಲಿಗೆ ಪೆಹಲ್ಗಾಮ್ನಲ್ಲಿ ನಡೆದ ಉಗ್ರದಾಳಿ ಇಡೀ ದೇಶದ ಜನರ ನೆಮ್ಮದಿ ಕೆಡಿಸಿದೆ. ಪಾಕ್ ಪ್ರೇರಿತ ಉಗ್ರರ ವಿರುದ್ದ ದೇಶದ ಜನತೆಯ ರಕ್ತ ಕುದೀತಾ ಇದೆ. ಚಿತ್ರರಂಗದ ಅನೇಕ ತಾರೆಯರು ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ವಿವಾದ ಗಂಟುಬಿತ್ತಾ ವಿಜಯ್ ದೇವರಕೊಂಡಗೆ? ಅಂದಿದ್ದೇನು.. ಆಗ್ತಿರೋದೇನು?
ಸದ್ಯ ಮುಂಬೈನಲ್ಲಿ ವೇವ್ಸ್ ಸಮ್ಮಿಟ್ ನಡೀತಾ ಇದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಆಯೋಜಿಸಿರೋ ವಿಶ್ವ ಆಡಿಯೋ ವಿಷುಯಲ್ ಮತ್ತು ಎಂಟರ್‌ಟೈನ್‌ಮೆಂಟ್ ಶೃಂಗಸಭೆಯಲ್ಲಿ ಭಾರತೀಯ ಸಿನಿಮಾರಂಗದ ದಿಗ್ಗಜರೆಲ್ಲಾ ಭಾಗಿಯಾಗಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ, ಮೋಹನ್ ಲಾಲ್, ಬಿಗ್ ಬಿ ಅಮಿತಾಭ್, ಅಲ್ಲು ಅರ್ಜುನ್, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ತಾರೆಯರು ಈ ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ,. ಪ್ರಧಾನಿ ಮೋದಿ ಉದ್ಘಾಟಿಸಿದ ಈ ಸಮ್ಮಿಟ್ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಭಾಗಿಯಾಗಿ ಚಿತ್ರೋದ್ಯಮದ ಭವಿಷ್ಯದ ಬಗ್ಗೆ ಮಾತನಾಡಿದ್ದಾರೆ. ಚಿತ್ರರಂಗದ ಬಗ್ಗೆ ಮಾತನಾಡುವ ಮುನ್ನ ಪೆಹಲ್ಗಾಮ್ ದಾಳಿಯ ಬರ್ಬರತೆ ಬಗ್ಗೆ ಮಾತನಾಡಿರೋ ತಲೈವಾ ಪ್ರಧಾನಿ ಮೋದಿ ಬಗ್ಗೆ ಭರವಸೆಯ ಮಾತನಾಡಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆ ಕಾರ್ಯಕ್ರಮವನ್ನು ಮುಂದೂಡಬಹುದು ಎಂದು ಅನೇಕರು ಊಹಿಸಿದ್ದರು. ಆದರೆ ನನಗೆ ಮೋದಿ ಅವರ ಮೇಲೆ ನಂಬಿಕೆಯಿತ್ತು. ಈ ಕಾರ್ಯಕ್ರಮ ಖಂಡಿತವಾಗಿಯೂ ನಡೆಯುತ್ತೆ ಎಂದು ವಿಶ್ವಾಸವಿತ್ತು. ನರೇಂದ್ರ ಮೋದಿ ಒಬ್ಬ ಫೈಟರ್. ಅವರು ಎಂತಹ ಸವಾಲನ್ನು ಬೇಕಾದರೂ ಎದುರಿಸುತ್ತಾರೆ. ಅದನ್ನು ಅವರು ಈಗಾಗಲೇ ನಿರೂಪಿಸಿದ್ದಾರೆ. ನಾವು ಕಳೆದ ಒಂದು ದಶಕದಿಂದ ನೋಡುತ್ತಲೇ ಬಂದಿದ್ದೇವೆ. ಕಾಶ್ಮೀರದ ಪರಿಸ್ಥಿತಿಯನ್ನು ಅವರು ಧೈರ್ಯದಿಂದ ಮತ್ತು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸಿ, ನಮ್ಮ ದೇಶಕ್ಕೆ ಅವರು ಕಳೆ ತರಲಿದ್ದಾರೆ
ದುಲ್ಕರ್ ಸಲ್ಮಾನ್ ಆಟದಲ್ಲಿ ಯಾರು ಇದ್ದಾರೆ? ನಟನ ಭಾರೀ ಸೀಕ್ರೆಟ್ ಬಹಿರಂಗ ಆಗೋಯ್ತು!
ಉಗ್ರರ ದಾಳಿಯನ್ನ ಬರ್ಬರ ಅಂತ ಕರೆದಿರೋ ರಜನಿಕಾಂತ್ , ಪ್ರಧಾನಿ ಮೋದಿ (PM Narendra Modi) ಈ ಕೃತ್ಯಕ್ಕೆ ತಕ್ಕ ಪ್ರತಿಕಾರ ತೋರಲಿದ್ದಾರೆ ಅಂತ ಭರವಸೆ ವ್ಯಕ್ತಪಡಿಸಿದ್ದಾರೆ. ಜೈಲರ್ ರಜನಿ ಮೋದಿಯನ್ನು ಫೈಟರ್ ಅಂತ ಕರೆದಿದ್ದಾರೆ.
ಅಸಲಿಗೆ ರಜನಿಕಾಂತ್ ಗೂ ಕಾಶ್ಮೀರದಕ್ಕೂ ಒಂದು ವಿಚಿತ್ರ ನಂಟಿದೆ. ರಜನಿಕಾಂತ್ ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ಆಧ್ಯಾತ್ಮದತ್ತ ಆಕರ್ಷಣೆ ಬೆಳೆಸಿಕೊಂಡ್ರು. ಆಗಿನಿಂದಲೂ ಅವರು ಕಾಶ್ಮೀರ, ಉತ್ತರಾಖಂಡದಲ್ಲಿರೋ ಹಿಮಾಲಯ ಕಣಿವೆಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡ್ರು. ವರ್ಷದಲ್ಲಿ ಕೆಲವು ತಿಂಗಳು ಹಿಮಾಲಯಕ್ಕೆ ತೆರಳುವ ತಲೈವಾ ಹಿಮಚ್ಚಾದಿತ ಗುಹೆಯಲ್ಲಿ ಕುಳಿತು ಧ್ಯಾನ ಮಾಡ್ತಾರೆ.
ಯಾವ ಹೀಮಾಲಯ, ಯಾವ ಕಾಶ್ಮೀರ ಶಾಂತ ಹಿಮವನ್ನ ಹೊದ್ದು ಮಲಗಿದೆಯೋ.. ಆಧ್ಯಾತ್ಮಿಕ ಸಾಧಕರನ್ನ ಕೈ ಬೀಸಿ ಕರೀತಾ ಇತ್ತೋ.. ಅದೇ ಕಾಶ್ಮೀರ ಈಗ ರಕ್ತ ಸಿಕ್ತವಾಗಿದೆ. ಉಗ್ರರ ಕೃತ್ಯದಿಂದ ಶಾಂತ ಕಣಿವೆ, ಅಶಾಂತಿಯಿಂದ ಕುದೀತಾ ಇದೆ.
ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ನಟ ಸಿಂಬು..?!
ಅಂತೆಯೇ ಈ ತಂಪು ಕಣಿವೆ ಮತ್ತೆ ಶಾಂತವಾಗವೇಕು.. ಅನ್ನೋದು ರಜನಿಕಾಂತ್ ಆಸೆ. ಮತ್ತು ಈ ಆಸೆ ಈಡೇರಬೇಕು ಅಂದ್ರೆ ಅದು ಮೋದಿಯಿಂದ ಮಾತ್ರ ಸಾಧ್ಯ.. ಯಾಕಂದ್ರೆ ಮೋದಿ ಫೈಟರ್ ಅಂದಿದ್ದಾರೆ ನಟ ರಜನಿಕಾಂತ್.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...