ಥಗ್ ಲೈಫ್' ಸೆನ್ಸೇಷನ್ ಅಷ್ಟಿಷ್ಟಲ್ಲ; ತ್ರಿಷಾ ಜೊತೆ ರೊಮ್ಯಾನ್ಸ್.. ಅಭಿರಾಮಿ ಜೊತೆ ಲಿಪ್​ಲಾಕ್..!

ಥಗ್ ಲೈಫ್' ಸೆನ್ಸೇಷನ್ ಅಷ್ಟಿಷ್ಟಲ್ಲ; ತ್ರಿಷಾ ಜೊತೆ ರೊಮ್ಯಾನ್ಸ್.. ಅಭಿರಾಮಿ ಜೊತೆ ಲಿಪ್​ಲಾಕ್..!

Published : May 19, 2025, 03:42 PM IST

ನಾಯಗನ್ ಬಳಿಕ ಕಮಲ್ ಹಾಸನ್ ಮತ್ತು ಮಣಿರತ್ನಂ ಅವರವರದ್ದೇ ದಾರಿಯಲ್ಲಿ ಸಾಗಿದ್ರು. ಕಳೆದ ವರ್ಷ ಈ ಇಬ್ಬರು ಮತ್ತೆ ಒಟ್ಟಾಗಿ ಸಿನಿಮಾ ಮಾಡೋದಾಗಿ ಅನೌನ್ಸ್ ಮಾಡಿದ್ರು. ಸಹಜವಾಗೇ ಸಿನಿದುನಿಯಾದಲ್ಲಿ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಆಗಿತ್ತು. ಈ ಜೋಡಿ ..

ಥಗ್ ಲೈಫ್.. ಉಳಗನಾಯಗನ್ ಕಮಲ್ ಹಾಸನ್ ಮತ್ತು ಮಣಿರತ್ನಂ ಕ್ರೇಜಿ ಕಾಂಬಿನೇಷನ್​ನ ಸಿನಿಮಾ. ಸಿನಿಲೋಕದ ಈ ಇಬ್ಬರು ದಿಗ್ಗಜರು ಒಟ್ಟಾಗಿ ಸಿನಿಮಾ ಮಾಡ್ತಾ ಇದ್ದಾರೆ ಅಂದಾಗಲೇ ಸಿನಿ ದುನಿಯಾದಲ್ಲಿ ದೊಡ್ಡ ಕ್ರೇಜ್ ಸೃಷ್ಟಿಯಾಗಿತ್ತು. ಇದೀಗ ಈ ಮೆಗಾ ಪ್ಯಾನ್ ಇಂಡಿಯಾ ಮೂವಿ ರಿಲೀಸ್​​ಗೆ ಸಜ್ಜಾಗಿದೆ. ರಿಲೀಸ್ ಹೊಸ್ತಿಲಲ್ಲಿ ಥಗ್ ಲೈಫ್ ಟ್ರೈಲರ್ ಅಕ್ಷರಶಃ ಕಿಚ್ಚು ಹಚ್ಚಿದೆ.

ವಿಶ್ವನಟ ಕಮಲ್ ಹಾಸನ್ ಮತ್ತು ವಿಶ್ವವೇ ಇಂಡಿಯನ್ ಸಿನಿಮಾ ಕಡೆಗೆ ನೋಡುವಂತೆ ಮಾಡಿದ ಮಾಸ್ಟರ್ ಡೈರೆಕ್ಟರ್ ಮಣಿರತ್ನಂ.. ಈ ಇಬ್ಬರ ಕ್ರೇಜಿ ಕಾಂಬೋ ಇರುವ ಥಗ್ ಲೈಫ್ ಸಿನಿಮಾ ರಿಲೀಸ್​ಗೆ ಸಜ್ಜಾಗಿದೆ. ಅಸಲಿಗೆ ಮಣಿ ಮತ್ತು ಕಮಲ್ 38 ವರ್ಷಗಳ ಹಿಂದೆ ಜೊತೆಯಾಗಿ ನಾಯಗನ್ ಅನ್ನೋ ಸಿನಿಮಾ ಮಾಡಿದ್ರು. ಗಾಡ್​ ಫಾದರ್ ಸ್ಪೂರ್ತಿಯಿಂದ ಬಂದ ಈ ಸಿನಿಮಾ ಇಂಡಿಯನ್ ಸಿನಿಇಂಡಸ್ಟ್ರಿಯಲ್ಲೊಂದು ಕಲ್ಟ್ ಕ್ಲಾಸಿಕ್ ಸಿನಿಮಾ ಅನ್ನಿಸಿಕೊಂಡಿದೆ.

ನಾಯಗನ್ ಬಳಿಕ ಕಮಲ್ ಹಾಸನ್ ಮತ್ತು ಮಣಿರತ್ನಂ ಅವರವರದ್ದೇ ದಾರಿಯಲ್ಲಿ ಸಾಗಿದ್ರು. ಕಳೆದ ವರ್ಷ ಈ ಇಬ್ಬರು ಮತ್ತೆ ಒಟ್ಟಾಗಿ ಸಿನಿಮಾ ಮಾಡೋದಾಗಿ ಅನೌನ್ಸ್ ಮಾಡಿದ್ರು. ಸಹಜವಾಗೇ ಸಿನಿದುನಿಯಾದಲ್ಲಿ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಆಗಿತ್ತು. ಈ ಜೋಡಿ ಮಾಡಲಿರೋ ಸಿನಿಮಾ ಎಂಥದ್ದು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಟ್ರೈಲರ್ ಮೂಲಕ ಆ ಕುತೂಹಲಕ್ಕೆ ಉತ್ತರ ಕೊಟ್ಟಿದ್ದಾರೆ ಕಮಲ್ ಌಂಡ್ ಮಣಿ.

ಥಗ್ ಲೈಫ್ ಟ್ರೈಲರ್ ನೋಡ್ತಾ ಇದ್ರೆ ಇದೊಂದು ಗ್ಯಾಂಗ್​ಸ್ಟರ್ ಡ್ರಾಮಾ ಅನ್ನೋದು ಗೊತ್ತಾಗುತ್ತೆ. ಸಿಂಬುಗೆ ಇಲ್ಲಿ ಕಮಲ್​ ಸಮಸಮನಾದ ಪಾತ್ರ ಇದೆ.   ಗ್ಯಾಂಗ್‌ಸ್ಟರ್ ರಂಗರಾಯ ಶಕ್ತಿವೇಲ್ ನಾಯ್ಕರ್ ಆಗಿ ಕಮಲ್ ಕಾಣಿಸಿಕೊಂಡ್ರೆ, ಅವರ ಉತ್ತರಾಧಿಕಾರಿ ಅಮರನ್ ಆಗಿ ಸಿಂಬು ಕಾಣಿಸಕೊಂಡಿದ್ದಾರೆ.

ಕಮಲ್ ಹಾಸನ್ ಸಿನಿಮಾ ಅಂದ್ರೆ ಅಲ್ಲಿ ಪ್ರಣಯದೃಶ್ಯಗಳಿಗೇನೂ ಕಮ್ಮಿ ಇರಲ್ಲ. ಈಗ ಕಮಲ್​ಗೆ 70ರ ಹರೆಯ. ಆದ್ರೇನಂತೆ ಕಮಲ್ ಕ್ರೇಜಿ ಅವತಾರ ಇಲ್ಲೂ ಮುಂದುವರೆದಿದೆ. ಸಿನಿಮಾದಲ್ಲಿ ಇಬ್ಬರು ನಾಯಕಿಯರು ತ್ರಿಷಾ ಌಂಡ್ ಅಭಿರಾಮಿ. ಟ್ರೈಲರ್​ನಲ್ಲೇ ತ್ರಿಷಾ ಜೊತೆ ಕಮಲ್ ರೊಮ್ಯಾನ್ಸ್ ಮಾಡುವ ಝಲಕ್ ಇದ್ರೆ, ಅಭಿರಾಮಿ ಜೊತೆಗಿನ ಲಿಪ್ ಲಾಕ್ ಸೀನ್ ಕೂಡ ಇದೆ. ಸೋ ಸಿನಿಮಾದಲ್ಲಿ ಇನ್ನೂ ಭರಪೂರ ಹಸಿಬಿಸಿ ಸೀನ್ಸ್ ಇರಲಿವೆ ಅಂತ ಫ್ಯಾನ್ಸ್ ಫಿಕ್ಸ್ ಆಗಿದ್ದಾರೆ.

ಥಗ್ ಲೈಫ್​ಗೆ ಎ.ಆರ್ ರೆಹಮಾನ್ ಮ್ಯೂಸಿಕ್ ಇದೆ. ಶನಿವಾರ ಚೆನ್ನೈನಲ್ಲಿ ನಡೆದ ವರ್ಣರಂಜಿತ ಇವೆಂಟ್​ನಲ್ಲಿ ಚಿತ್ರದ ಟ್ರೈಲರ್ ಲಾಂಚ್ ಇವೆಂಟ್ ನಡೆದಿದೆ. ಮಣಿರತ್ನಂ, ಕಮಲ್ ಹಾಸನ್,  ಸಿಂಬು, ತ್ರಿಷಾ, ಅಭಿರಾಮಿ ಸೇರಿದಂತೆ ಇಡೀ ತಂಡ ಇವೆಂಟ್​ನಲ್ಲಿ ಭಾಗಿಯಾಗಿದೆ.

ತಮಿಳಿನ ಜೊತೆಗೆ  ಕನ್ನಡ, ತೆಲುಗು, ಹಿಂದಿ ಮತ್ತು ಮಲಯಾಳಂ ವರ್ಷನ್​​ನಲ್ಲಿ ಕೂಡ ಥಗ್ ಲೈಫ್ ಟ್ರೈಲರ್ ರಿಲೀಸ್ ಆಗಿದೆ. ಎಲ್ಲಾ ಭಾಷೆಗಳಲ್ಲೂ ಟ್ರೈಲರ್​ಗೆ ಮಸ್ತ್ ರೆಸ್ಪಾನ್ಸ್ ಕೂಡ ಸಿಕ್ಕಿದೆ. ಟ್ರೈಲರ್ ಮೂಲಕ ನಿರೀಕ್ಷೆ ಮೂಡಿಸಿರೋ ಈ ಸಿನಿಮಾ ಜೂನ್ 5ಕ್ಕೆ ವಿಶ್ವದಾದ್ಯಂತ ತೆರೆಗೆ ಬರಲಿದೆ. ಹೆಚ್ಚಿನ ಮಾಜಹಿತಿಗೆ ವಿಡಿಯೋ ನೋಡಿ..

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಣರಂಗವಾದ ದೊಡ್ಮನೆ.. ಜಾಲಿವುಡ್‌ಗೆ ಬಂದ ಅತಿಥಿಗಳ ಜೊತೆ ಗಲಾಟೆ ಮಾಡಿದ ಗಿಲ್ಲಿ!
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
06:26ಇಲ್ಲಿದೆ ನೋಡಿ 'ಡೆವಿಲ್' ಸಿನಿಮಾದ ಸ್ಟೋರಿ ಸೀಕ್ರೆಟ್.. ದರ್ಶನ್ ಚಿತ್ರದಲ್ಲಿನ ಕಥೆ ಬಟಾಬಯಲು!
Read more