'ರಾಜ್ಯಾದ್ಯಂತ ಬಡವ ರಾಸ್ಕಲ್ (Badava Rascal) ಸಿನಿಮಾ ಉತ್ತಮ ಪ್ರದರ್ಶನ ಕಾಣ್ತಾ ಇದೆ. ಕುಟುಂಬ ಸಮೇತ ಬಂದು ಸಿನಿಮಾ ನೋಡ್ತಾ ಇರೋದಕ್ಕೆ ಖುಷಿಯಾಗುತ್ತಿದೆ. ಜನರಿಗೆ ಅಭಿನಂದನೆ ಸಲ್ಲಿಸಲು ರಾಜ್ಯಾದ್ಯಂತ ಪ್ರವಾಸ ಮಾಡ್ತಾ ಇದ್ದೇನೆ' ಎಂದು ಬಳ್ಳಾರಿಯಲ್ಲಿ ನಟ ಡಾಲಿ ಧನಂಜಯ್ (Dolly Dhanananjay) ಹೇಳಿದ್ದಾರೆ.
ಬಳ್ಳಾರಿ (ಜ. 04): 'ರಾಜ್ಯಾದ್ಯಂತ ಬಡವ ರಾಸ್ಕಲ್ (Badava Rascal) ಸಿನಿಮಾ ಉತ್ತಮ ಪ್ರದರ್ಶನ ಕಾಣ್ತಾ ಇದೆ. ಕುಟುಂಬ ಸಮೇತ ಬಂದು ಸಿನಿಮಾ ನೋಡ್ತಾ ಇರೋದಕ್ಕೆ ಖುಷಿಯಾಗುತ್ತಿದೆ. ಜನರಿಗೆ ಅಭಿನಂದನೆ ಸಲ್ಲಿಸಲು ರಾಜ್ಯಾದ್ಯಂತ ಪ್ರವಾಸ ಮಾಡ್ತಾ ಇದ್ದೇನೆ' ಎಂದು ಬಳ್ಳಾರಿಯಲ್ಲಿ ನಟ ಡಾಲಿ ಧನಂಜಯ್ (Dolly Dhanananjay) ಹೇಳಿದ್ದಾರೆ.
ಸಿನಿಮಾ ನೋಡಲು ವಿದ್ಯಾರ್ಥಿಗಳು ಹಾಗೂ ಯುವಕರು ಹೆಚ್ಚೆಚ್ಚು ಬರುತ್ತಿದ್ದಾರೆ. ಯುವರತ್ನ ಸಿನಿಮಾ ಪ್ರಮೋಷನ್ ಗೆ ಅಪ್ಪು ಸರ್ (Puneeth Rajkumar) ಜೊತೆ ಬಳ್ಳಾರಿಗೆ ಬಂದಿದ್ದೆ. ಆಗಲೂ ಉತ್ತಮ ರೆಸ್ಪಾನ್ಸ್ ಬಂದಿತ್ತು, ಈಗಲೂ ಸಾಕಷ್ಟು ಪ್ರೀತಿ ತೋರಿಸಿದ್ದಾರೆ. ಬಳ್ಳಾರಿ (Ballary) ಜನರ ಪ್ರೀತಿಗೆ ನಾನು ಅಭಾರಿಯಾಗಿದ್ದೇನೆ ಎಂದ ನಟ ಡಾಲಿ ಧನಂಜಯ್ ಕೃತಜ್ಞತೆ ಸಲ್ಲಿಸಿದರು.