ರಂಗೋಲಿ ಚಿತ್ತಾರ ಬಿಡಿಸಿ ಮಹಿಳೆಯರ ಪ್ರತಿಭಟನೆ

Jan 2, 2020, 12:48 PM IST

ಮೈಸೂರು(ಜ.02): ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ವಿರುದ್ಧ ಹಲವು ಕಡೆ ಪ್ರತಿಭಟನೆ ನಡೆಯುತ್ತಿದ್ದು, ಮೈಸೂರಿನಲ್ಲಿ ಮಹಿಳೆಯರು ವಿಶೇಷವಾಗಿ ಪ್ರತಿಭಟನೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ಮಹಿಳೆಯರು ಪ್ರತಿಭಟನೆ ರಂಗೋಲಿ ಬಿಡಿಸಿದ್ದಾರೆ. ಮೈಸೂರಿನಲ್ಲಿ ರಂಗೋಲಿ ಪ್ರತಿಭಟನೆ ನಡೆದಿದ್ದು, ನೆಲದ ಮೇಲೆ ಸುಂದರ ಚಿತ್ತಾರಗಳನ್ನು ಬಿಡಿಸಲಾಗಿದೆ.

ಸ್ವಚ್ಛ ನಗರ : ಮೈಸೂರು, ಕಾರವಾರಕ್ಕೆ ಸ್ಥಾನ

ಸಿಎಎ ಮತ್ತು ಎನ್ಆರ್ಸಿ ವಿರುದ್ಧ ರಂಗೋಲಿ ಪ್ರತಿಭಟನೆ ನಡೆದಿದ್ದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್‌ ಪ್ರತಿಭಟನೆ ನಡೆಸಿದ್ದಾರೆ. ನಗರದ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಎನ್.ಆರ್.ಸಿ  ವಿರುದ್ಧ ರಂಗೋಲಿ ಬಿಡಿಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪ ಅಮರ್ ನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಮಹಿಳಾ ದೌರ್ಜನ್ಯ ಖಂಡಿಸಿ ಇಂದಿನಿಂದ ರಾಜ್ಯಾದ್ಯಂತ ನಡೆಯುವ ಪ್ರತಿಭಟನೆಗೆ ಮೈಸೂರಿನಲ್ಲಿ ಚಾಲನೆ ನೀಡಲಾಗಿದೆ.