ಚಿರತೆ ದಾಳಿ ತಪ್ಪಿಸಲು ಗ್ರಾಮಸ್ಥರಿಗೆ ರೇಡಿಯಂ ಜಾಕೇಟ್

Jan 12, 2021, 12:47 PM IST

ತುಮಕೂರು (ಜ. 12): ರೈತರು, ಮಹಿಳೆಯರು, ಮಕ್ಕಳು ಇದ್ಯಾಕೆ ಟ್ರಾಫಿಕ್ ಪೊಲೀಸ್ ರೀತಿ ಜಾಕೆಟ್ ಹಾಕ್ಕೊಂಡಿದಾರೆ ಅಂತ ಯೋಚಿಸ್ತಿದೀರಾ..? ತುಮಕೂರು ಭಾಗದ ಕುಣಿಗಲ್ ಭಾಗದಲ್ಲಿ ಚಿರತೆಗಳ ಹಾವಲಿ ಹೆಚ್ಚಾಗಿದೆ. ಹೀಗಾಗಿ ಅರಣ್ಯ ಇಲಾಖೆ ಈ ಭಾಗದ ಜನರಿಗೆ ಕೆಂಪು ಬಣ್ಣದ ರೇಡಿಯಂ ಇರುವ ಜಾಕೆಟ್ ನೀಡಿದೆ. ಗ್ರಾಮಸ್ಥರು ಕೆಲಸಕ್ಕೆ ಹೋಗುವಾಗ ಈ ಜಾಕೆಟ್ ಧರಿಸಬೇಕಾಗಿದೆ. ಮಕ್ಕಳು ಕೂಡಾ ಶಾಲೆಗೆ ಜಾಕೆಟ್ ಧರಿಸಿ ಹೋಗಬೇಕಾಗಿದೆ.