ದಿವ್ಯಾಂಗ ಮಗನ ಸಾಕಲಾರದೆ ಕಷ್ಟ ಪಡುತ್ತಿದ್ದ ತಾಯಿಗೆ ನೆರವಿನ ಮಹಾಪೂರ
Apr 16, 2020, 12:04 PM IST
ಬೆಳಗಾವಿ(ಏ.16): 24 ವರ್ಷದ ದಿವ್ಯಾಂಗ ಮಗನ ಆರೈಕೆ ಮಾಡಲಾಗದೆ ತಾಯಿ ಪರದಾಡಿದ ಘಟನೆಯನ್ನು ಸುವರ್ಣನ್ಯೂಸ್ ವರದಿ ಮಾಡಿತ್ತು. ಬೆಳಗಾವಿ ನಿವಾಸಿ ಅಶ್ವಿನಿ ಅವರಿಗೆ ಈಗ ನೆರವಿಗೆ ಮಹಾಪೂರ ಹರಿದು ಬಂದಿದೆ.
ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಲಾಕ್‌ಡೌನ್ ನಂತರ ಆದಾಯವಿಲ್ಲದೆ ಮನೆಯಲ್ಲಿ ಬಾಕಿಯಾಗಿದ್ದರು. ಮಗನನ್ನು ಸಾಕಲಾಗದೆ ಕಷ್ಟಪಡುತ್ತಿದ್ದ ತಾಯಿಗೆ ಜನ ಆಹಾರ ಸಾಮಾಗ್ರಿಗಳನ್ನು ಒದಗಿಸಿದ್ದಾರೆ. ಹಾಗೇ ಇನ್ನೂ ಹಲವರು ಅಶ್ವಿನಿ ಅವರ ಖಾತೆಗೂ ಹಣ ಕಳುಹಿಸಿ ನೆರವು ನೀಡಿದ್ದಾರೆ.