ಯಾದಗಿರಿ ಕೊವಿಡ್ ಆಸ್ಪತ್ರೆಯಲ್ಲಿ ಸ್ವಚ್ಚತೆ ನಾಪತ್ತೆ..!

Jun 11, 2020, 4:49 PM IST

ಯಾದಗಿರಿ(ಜೂ.11): ಕೋವಿಡ್ ಆಸ್ಪತ್ರೆಯೆಂದರೆ ಸ್ವಚ್ಚತೆ ಹಾಗೂ ಶಿಸ್ತಿಗೆ ಮೊದಲ ಆದ್ಯತೆ ನೀಡಬೇಕು. ಆದರೆ ಯಾದಗಿರಿಯ ಕೋವಿಡ್ ಆಸ್ಪತ್ರೆ ಇದಕ್ಕೆ ವಿರುದ್ಧ ಎನ್ನುವಂತೆ ಕಂಡು ಬಂದಿದೆ. ಆಸ್ಪತ್ರೆಯ ಅವ್ಯವಸ್ಥೆ ಕಣ್ಣಿಗೆ ರಾಚುವಂತಿದೆ.

ನಗರದ ಹೊರವಲಯದಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಆಸ್ಪತ್ರೆಯಲ್ಲಿ ರೋಗಿಗಳು ಹಾಗೂ ವೈದ್ಯರು ಬಳಸಿರುವ ಮಾಸ್ಕ್, ಪಿಪಿಟಿ ಕಿಟ್‌ಗಳನ್ನು ಎಲ್ಲೆಂದರಲ್ಲಿ ಸಿಬ್ಬಂದಿಗಳು ಬಿಸಾಡಿದ್ದಾರೆ.

ಬಿಎಂಟಿಸಿ ಕಂಡಕ್ಟರ್‌ಗೆ ಕೊರೋನಾ, ಯಾವ ರೂಟ್ ಬಸ್?
 
ರೋಗಿಗಳು ಉಪಯೋಗಿಸಿದ ಮಾಸ್ಕ್ ಆಸ್ಪತ್ರೆ ಕಾರಿಡಾರ್‌ನಲ್ಲಿ ಗುಡ್ಡೆ ಬಿದ್ದಿದ್ದರೂ, ಸೂಕ್ತ ವಿಲೇವಾರಿ ಮಾಡಿಲ್ಲ.ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ವಿರುದ್ಧ ರೋಗಿಗಳ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.