4 ದಿನಗಳ ಹಸುಗೂಸಿಗಾಗಿ ಶಿವಮೊಗ್ಗದಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆ..!

Jul 29, 2020, 6:40 PM IST

ಶಿವಮೊಗ್ಗ(ಜು.29): ನಾಲ್ಕು ದಿನಗಳ ನವಜಾತ ಶಿಶುವನ್ನು ಕಾಪಾಡಲು ಶಿವಮೊಗ್ಗದಿಂದ ಮಣಿಪಾಲ್‌ವರೆಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವ ಮೂಲಕ ಶಿವಮೊಗ್ಗ ಹಾಗೂ ಉಡುಪಿ ಪೊಲೀಸರು ಜನಮೆಚ್ಚುವಂತಹ ಕೆಲಸ ಮಾಡಿದ್ದಾರೆ.

ನಾಲ್ಕು ದಿನಗಳ ಮಗುವಿಗೆ ರಕ್ತದಲ್ಲಿ ಸೋಂಕು ಹಾಗೂ ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ರವಾನಿಸಬೇಕಾಗಿತ್ತು. ತಕ್ಷಣ ಕಾರ್ಯಪ್ರೌವೃತ್ತರಾದ ಶಿವಮೊಗ್ಗ ಪೊಲೀಸ್  ಉಡುಪಿ ಜಿಲ್ಲೆಯ ಪೊಲೀಸರ ಸಹಕಾರ ಪಡೆದುಕೊಂಡು ಮಣಿಪಾಲ್ ಆಸ್ಪತ್ರೆವರೆಗೂ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿತು.

ರಫೇಲ್ ಆಗಮನ, ಸಂಪುಟ ಸರ್ಜರಿಗೆ ರೆಡಿಯಾದ ಯಡಿಯೂರಪ್ಪ: ಇಲ್ಲಿದೆ ಜುಲೈ 29ರ ಟಾಪ್ 10 ನ್ಯೂಸ್!

ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದೇವೇಂದ್ರಪ್ಪ ಮತ್ತು ಸುಪ್ರಿಯಾ ದಂಪತಿಯ ಮಗುವನ್ನು ತೀರ್ಥಹಳ್ಳಿ, ಆಗುಂಬೆ ಮಾರ್ಗವಾಗಿ ಜೀರೋ ಟ್ರಾಫಿಕ್ ಮೂಲಕ ಯಾವುದೇ ಅಡಚಣೆ ಇಲ್ಲದೆ ಕಳಿಸಿಕೊಡಲಾಯಿತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.