Jul 7, 2020, 1:57 PM IST
ಬೆಂಗಳೂರು(ಜು.07): ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ರಣಕೇಕೆ ಜೋರಾಗಿದೆ. ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚುತ್ತಿರುವುದರ ಜತೆಗೆ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿರುವುದು ರಾಜ್ಯದ ಇತರ ಭಾಗದ ಜನರ ನಿದ್ದೆಗೆಡಿಸಿದೆ.
ಹೌದು, ಹೀಗಾಗಿ ಚಾಮರಾಜನಗರ ಜಿಲ್ಲೆಯ ಕೆಲವು ಊರಿನವರು ಸ್ವಯಂ ಲಾಕ್‌ಡೌನ್ ಮಾಡಿಕೊಂಡಿದ್ದಾರೆ. ಬೆಂಗಳೂರಿನಿಂದ ಬರುವಂತವರಿಗೆ ನಿಷೇಧ ಹೇರಲಾಗಿದ್ದು, ಕೊರೋನಾ ಪರೀಕ್ಷಾ ವರದಿಯನ್ನು ಹೊಂದಿದ್ದರೆ ಮಾತ್ರ ಊರಿನೊಳಗೆ ಬಿಟ್ಟುಕೊಳ್ಳಲು ಗ್ರಾಮಸ್ಥರು ತೀರ್ಮಾನಿಸಿದ್ದಾರೆ.
ನರ್ಸ್, ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘಿಸಿದ ಸಚಿವ ಶ್ರೀರಾಮುಲು
ಚಾಮರಾಜನಗರ ಶಾಸಕರ ಗ್ರಾಮಕ್ಕೂ ನೋ ಎಂಟ್ರಿ. ಕದ್ದುಮುಚ್ಚಿ ಉಪ್ಪಿನ ಮೊಳೆ, ಕೃಷ್ಣಪುರ, ಶಿವಕಳ್ಳಿ, ಕುಣಗಳ್ಳಿ ಗ್ರಾಮಕ್ಕೆ ಬಂದರೆ ಐದರಿಂದ 10 ಸಾವಿರ ದಂಡ ಹಾಕಲು ತೀರ್ಮಾನಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.