Aug 2, 2020, 12:58 PM IST
ರಾಯಚೂರು(ಆ.02):ಅಡ್ಮಿಷನ್ ಮಾಡಲ್ಲ ಅಂದ್ರೆ ಟಿಸಿ ತೆಗೆದುಕೊಂಡು ಹೋಗಿ ಎಂದು ನಗರದಲ್ಲಿರುವ ಖಾಸಗಿ ಶಾಲೆಗಳು ಪೋಷಕರಿಗೆ ಮೆಸೇಜ್ ಮಾಡಿ ಟಾರ್ಚರ್ ನೀಡುತ್ತಿರುವ ಘಟನೆ ನಡೆದಿದೆ. ಇಂತಹ ಮೆಸೇಜ್‌ಗಳಿಂದ ಪೋಷಕರು ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ.
ಕೊರೋನಾ ಕಾಟ: ರಾಜ್ಯ ಸರ್ಕಾರಕ್ಕೆ 100 ದಿನಗಳ ಟಾಸ್ಕ್..!
ಪುಸ್ತಕಗಳು, ಬ್ಯಾಗ್‌ಗಳನ್ನ ತೆಗದುಕೊಳ್ಳಿ ಹೋಗಿ ಎಂದ ಖಾಸಗಿ ಶಾಲೆಗಳು ಮೆಸೇಜ್‌ಗಳನ್ನ ಮಾಡುತ್ತಿವೆ. 1 ರಿಂದ 5ನೇ ತರಗತಿವರೆಗಿನ ಅನ್‌ಲೈನ್ ತರಗತಿಗಳಿಗೆ ಪೋಷಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಆನ್‌ಲೈನ್ ಪಾಠ ಮಕ್ಕಳಿಗೆ ಅರ್ಥವಾಗೋದಿಲ್ಲ ಹೀಗಾಗಿ ಇಂತಹ ಶಾಲೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಪೋಷಕರು ಒತ್ತಾಯಿಸಿದ್ದಾರೆ.