ಯಾದಗಿರಿಯಲ್ಲಿ ರಸ್ತೆಯಲ್ಲೇ ಮೀನು ಮಾರಾಟ: ವರದಿ ಬಳಿಕ ಸ್ಥಳಕ್ಕೆ ಅಧಿಕಾರಿಗಳ ದೌಡು

Aug 17, 2022, 4:07 PM IST

ಯಾದಗಿರಿ (ಆ.17):  ಬರೋಬ್ಬರಿ 1 ಕೋಟಿ ವೆಚ್ಚದಲ್ಲಿ ಕಟ್ಟಿರೋ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ ಮಾಡಿದ್ರೂ ಕೂಡ ಮೀನು ಮಾರಾಟಗಾರರು ಮಾತ್ರ ರಸ್ತೆ ಪಕ್ಕ ಮೀನು ಮಾರಾಟ ಮಾಡುತ್ತಿದ್ದಾರೆ. ಮೀನು ಮಾರುಕಟ್ಟೆ ಇದ್ದರೂ ಪ್ರತೀ ದಿನ ಯಾದಗಿರಿ ನಗರದ ಲಾಲ್‌ಬಹಾದ್ದೂರ್‌ ಶಾಸ್ತ್ರಿ ಚೌಕ್‌ ಬಳಿಯ ರಸ್ತೆಯ ಪಕ್ಕದಲ್ಲಿ ಮೀನು ಮಾರಾಟ ಮಾಡಲಾಗುತ್ತಿದೆ. ಆದರೆ, ಇದಕ್ಕೆಲ್ಲಾ ಕಾರಣ ಸುಸಜ್ಜಿತವಾಗಿ ಕಟ್ಟಿದ ಮೀನು ಮಾರುಕಟ್ಟೆಗೆ ಸೂಕ್ತ ರಸ್ತೆ ಇಲ್ಲದೆ ರೋಡ್‌ ಪಕ್ಕ ಮೀನು ಮಾರಾಟ ನಡೆಯುತ್ತಿದೆ. ಸರಿಯಾದ ರಸ್ತೆ ವ್ಯವಸ್ಥೆ ಮಾಡಿಕೊಟ್ಟರೆ ನಾವು ಅಲ್ಲಿಯೇ ಮೀನು ಮಾರಾಟ ಮಾಡುತ್ತೇವೆ ಅಂತ ಮೀನು ಮಾರಾಟಗಾರರು ಆಗ್ರಹಿಸಿದ್ದಾರೆ. ಕಳೆದ ಎಪ್ರಿಲ್ ನಲ್ಲಿ ಸಚಿವ ಎಸ್‌ ಅಂಗಾರ ಅವರು ಈ ಕಟ್ಟಡ ಉದ್ಘಾಟನೆ ಮಾಡಿದ್ದರು. ಅಲ್ಲಿಂದ ಇಲ್ಲಿವರೆಗೆ ಈ ಕಟ್ಟಡ ಓಪನ್ ಆಗಿಲ್ಲ. ಬಿಗ್ 3 ಯಲ್ಲಿ ಸುದ್ದಿ ಪ್ರಸಾರವಾದ ತಕ್ಷಣ ಅಧಿಕಾರಿಗಳು ದೌಢಾಯಿಸಿ. ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.