ಮೃತ ವ್ಯಕ್ತಿಯ ಕಫ ಪರೀಕ್ಷೆಯನ್ನು ನಡೆಸಬೇಕೆಂಬ ಸರ್ಕಾರದ ಆದೇಶ ಹಿನ್ನಲೆ ಗುಂಡಿಯಲ್ಲಿಟ್ಟ ಶವದಿಂದ ಸ್ವ್ಯಾಬ್ ಸಂಗ್ರಹಿಸಲು ಮುಂದಾದ ಲ್ಯಾಬ್ ಟೆಕ್ನಿಷಿಯನ್ ಶೋಭಾ ಕೆಲಸಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಮೇ. 12): ಮೃತ ವ್ಯಕ್ತಿಯ ಕಫ ಪರೀಕ್ಷೆಯನ್ನು ನಡೆಸಬೇಕೆಂಬ ಸರ್ಕಾರದ ಆದೇಶ ಹಿನ್ನಲೆ ಗುಂಡಿಯಲ್ಲಿಟ್ಟ ಶವದಿಂದ ಸ್ವ್ಯಾಬ್ ಸಂಗ್ರಹಿಸಲು ಮುಂದಾದ ಲ್ಯಾಬ್ ಟೆಕ್ನಿಷಿಯನ್ ಹಿರೇಮೂಗದೂರ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸವಣೂರಿನಲ್ಲಿ ಎರಡು ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ತಾಲೂಲು ಆಡಳಿತ ಮೃತ ವ್ಯಕ್ತಿಯ ಕಫ ಪರೀಕ್ಷೆಗೆ ಸೂಚನೆ ನೀಡಿದೆ.
ಇದರನುಸಾರ ಲ್ಯಾಬ್ ಟೆಕ್ನಿಷಿಯನ್ ಶೋಭಾ ಚನ್ನಪ್ಪನವರ್ ಶವವನ್ನು ಮಣ್ಣು ಮಾಡಿದ್ದ ಗುಂಡಿಗೆ ಇಳಿದು ಗಂಟಲು ದ್ರವ ಪಡೆದುಕೊಂಡರು. ಶೋಭಾ ಅವರ ಕರ್ತವ್ಯ ನಿಷ್ಠೆ ಬಗ್ಗೆ ಇಡೀ ಕರ್ನಾಟಕವೇ ಮೆಚ್ಚುಗೆ ವ್ಯಕ್ತಪಡಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಸುವರ್ಣ ನ್ಯೂಸ್ ಮೂಲಕ ಶೋಭಾ ಜೊತೆ ಮಾತನಾಡಿದ್ದಾರೆ.