ಮಾಲ್, ಮಾರುಕಟ್ಟೆ, ಸಭೆ, ಸಮಾರಂಭಗಳಿಗೆ ಮಾರ್ಷಲ್‌ಗಳ ಆಗಮನ| ಬೆಂಗಳೂರಿನಲ್ಲಿ ಕಠಿಣ ರೂಲ್ಸ್ ಜಾರಿ| ಮಾಸ್ಕ್ ಹಾಕದವರಿಗೆ 250 ರೂ. ದಂಡ|
ಬೆಂಗಳೂರು(ಮಾ.25): ನಗರದ ಮೆಜಿಸ್ಟಿಕ್‌ನಲ್ಲಿ ಮಾಸ್ಕ್ ಹಾಕದವರಿಗೆ ಮಾರ್ಷಲ್‌ಗಳು ದಂಡ ವಿಧಿಸುತ್ತಿದ್ದಾರೆ. ಮಾಲ್, ಮಾರುಕಟ್ಟೆ, ಸಭೆ, ಸಮಾರಂಭಗಳಿಗೆ ಇನ್ಮುಂದೆ ಮಾರ್ಷಲ್‌ಗಳು ಬರಲಿದ್ದಾರೆ. ಮಾಸ್ಕ್ ಹಾಕದೆ ಹೊರ ಬರುವವರು ದಂಡ ಕಟ್ಟಲು ರೆಡಿಯಾಗಿರಬೇಕು. ಕೊರೋನಾ ವೈರಸ್ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿರುವುದರಿಂದ ಬೆಂಗಳೂರಿನಲ್ಲಿ ಬಿಬಿಎಂಪಿ ಕಠಿಣ ರೂಲ್ಸ್‌ಗಳನ್ನು ಜಾರಿಗೊಳಿಸಿದೆ. ಮಾಸ್ಕ್ ಹಾಕದವರಿಗೆ 250 ರೂ. ದಂಡ ವಿಧಿಸಲಾಗುತ್ತದೆ.