Jan 20, 2021, 1:03 PM IST
ಕಾರವಾರ (ಜ. 20): ಚಿರತೆ ಮನೆಯ ಬಳಿ ಬರಲು ಶುರು ಮಾಡಿವೆ. ಅಂಕೋಲಾ ತಾಲೂಕಿನ ಕೊಂಡಳ್ಳಿ ಗ್ರಾಮದ ರಮಾನಂದ ಎಂಬುವವರ ಮನೆಯ ಬಳಿ ಚಿರತೆ ಓಡಾಟ ನಡೆಸಿದ ದೃಶ್ಯಗಳು ಸೆರೆಯಾಗಿವೆ. ಬೆಳಗ್ಗಿನ ಜಾವ ನಾಯಿ ಹಿಡಿಯಲು ಮನೆಯ ಬಳಿ ಬಂದ ಚಿರತೆ, ನಾಯಿ ಸಿಗದೇ ಕೋಳಿ ಹಿಡಿದು ಕಾಡಿನತ್ತ ಓಡಿದೆ. ಕೋಳಿ ಕಾಣೆಯಾದ ಕಾರಣ ಸಿಸಿಟಿವಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.