ಮೂಡಿಗೆರೆ (Mudigere) ತಾಲೂಕಿನ ಬಣಕಲ್ ಗ್ರಾಮದಲ್ಲಿರೋ ಈ ಬಡಾವಣೆಗೆ (Layout) ಹೋದ್ರೆ ಕುಗ್ರಾಮಕ್ಕಿಂತ ಕಡೆಯಾದ ಅನುಭವವಾಗುತ್ತೆ.
ಚಿಕ್ಕಮಗಳೂರು (ಡಿ. 10): 2019 ರ ಮಹಾಮಳೆ (Rain) ಮಲೆನಾಡಿಗರ ಬಹುತೇಕ ಜನರ ಬದುಕನ್ನೇ ಅಲ್ಲೋಲ-ಕಲ್ಲೋಲವಾಗಿಸಿತ್ತು. ಅದೆಷ್ಟೋ ಮಂದಿ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ಈ ನಿರಾಶ್ರಿತರಿಗೆ ಸರ್ಕಾರ ಬದುಕು ಕಟ್ಟಿಕೊಡುವ ಜವಾಬ್ದಾರಿ ಹೊತ್ತಿತ್ತು. ಕೆಲವರಿಗೆ ಮನೆ ಕಟ್ಟಿ ಕೊಡಲು ಜಾಗವನ್ನ (Land) ನೀಡಿತ್ತಾದರೂ ಈವರೆಗೆ ಅಲ್ಲಿ ವಾಸ ಮಾಡ್ತಿರೋ ಜನರಿಗೆ ಮೂಲಸೌಕರ್ಯವನ್ನೇ ನೀಡಿಲ್ಲ.
ಮೂಡಿಗೆರೆ (mudigere) ತಾಲೂಕಿನ ಬಣಕಲ್ ಗ್ರಾಮದಲ್ಲಿರೋ ಈ ಬಡಾವಣೆಗೆ (Layout) ಹೋದ್ರೆ ಕುಗ್ರಾಮಕ್ಕಿಂತ ಕಡೆಯಾದ ಅನುಭವವಾಗುತ್ತೆ. 2019ರಲ್ಲಿ ಮನೆಯನ್ನ ಕಳೆದುಕೊಂಡ ಮಧುಗುಂಡಿ, ದುರ್ಗದಹಳ್ಳಿ, ಬಿದರುತಳ, ಸುಂಕಸಾಲೆ ಗ್ರಾಮದ 40 ಸಂತ್ರಸ್ಥರಿಗೆ ಈ ಬಡಾವಣೆಯಲ್ಲಿ ಸರ್ಕಾರ ನಿವೇಶನ ನೀಡಿದೆ.
5 ಲಕ್ಷ ರೂಪಾಯಿ ಕೊಟ್ಟು ಮನೆ ಕಟ್ಟಿಕೊಳ್ಳಲು ನೆರವಾಗಿದೆ. ಅದೇನೋ ಸರಿ. ಆದ್ರೆ, ಮನೆ ಕಟ್ಟಿಕೊಳ್ಳಲು 5 ಲಕ್ಷ ಸಾಲದಿದ್ರು ಹೇಗೋ ಸಾಲ-ಸೋಲ ಮಾಡಿ ಸಂತ್ರಸ್ಥರು ಮನೆ ಕಟ್ಟಿ ಕೊಂಡಿದ್ದಾರೆ. ಆದ್ರೆ, ಮನೆ ಕಟ್ಟಿಕೊಂಡರೂ ಅಲ್ಲಿ ನೆಮ್ಮದಿಯಾಗಿ ವಾಸ ಮಾಡಲು ಆಗುತ್ತಿಲ್ಲ. ಯಾಕಂದ್ರೆ, ನೀರಿನ ಸೌಲಭ್ಯವಿಲ್ಲ. ವಿದ್ಯುತ್ ಕೊಟ್ಟಿಲ್ಲ. ಚರಂಡಿ ವ್ಯವಸ್ಥೆಯೂ ಇಲ್ಲ. ಯಾವುದೇ ಮೂಲ ಸೌಕರ್ಯವಿಲ್ಲದೇ (Basic Amenities) ಮನೆ ಕಟ್ಟಿಕೊಂಡಿಡೋ ಜನ ನಿತ್ಯ ಪರದಾಡುವಂತಾಗಿದೆ. ತಮ್ಮ ಪರಿಸ್ಥಿತಿ ಬಗ್ಗೆ ಜನ ಸಂಬಂಧಪಟ್ಟವರ ಗಮನಕ್ಕೆ ತಂದ್ರು ಸಂಬಂಧಪಟ್ಟವರು ಸಂಬಂಧವಿಲ್ಲದಂತಿದ್ದಾರೆ ಅಂತ ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.